ಸೀರಿಯಲ್‌ನಲ್ಲಿ ಅವಕಾಶ ಬೇಕು ಅಂದ್ರೆ ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ?; ನಟಿ ಆಶಾ ಹೇಳಿಕೆ ವೈರಲ್

Published : Mar 21, 2024, 10:50 AM IST

ಕಿರುತೆರೆ ನಟಿ ಆಶಾ ನೇಗಿ ನೀಡಿರುವ ಹೇಳಿಕೆ ಬಾರಿ ವೈರಲ್. ಲೈಂಗಿಕವಾಗಿ ಬಳಸಿಕೊಂಡು ಅವಕಾಶ ಕೊಡುತ್ತಾರಾ?  

PREV
19
ಸೀರಿಯಲ್‌ನಲ್ಲಿ ಅವಕಾಶ ಬೇಕು ಅಂದ್ರೆ ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ?; ನಟಿ ಆಶಾ ಹೇಳಿಕೆ ವೈರಲ್

ಹಿಂದಿ ಕಿರುತೆರೆ ಜನಪ್ರಿಯ ನಟಿ ಆಶಾ ನೇಗಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಅದರಲ್ಲೂ ಪವಿತ್ರಾ ರಿಶ್ತಾ ತುಂಬಾನೇ ಫೇಮಸ್.

29

ವೆಬ್‌ ಸೀರಿಸ್‌ ಮತ್ತು ರಿಯಾಲಿಟಿ ಶೋಗಳ ಜೊತೆ ಸಪ್ನೋನ್‌ ಸೆ ಭರೇ ನೈನಾ, ಬಡೇ ಅಚ್ಚೆ ಲಗ್ತೆ ಹೈ, ಪವಿತ್ರಾ ರಿಶ್ತಾ, ಏಕ್ ಮುತ್ತಿ ಆಸ್ಮಾನ್‌ ಮತ್ತು ಕುಚ್‌ ತೋ ಹೈ ಮೇರೆ ದರ್ಮಿಯಾನ್‌ನಲ್ಲಿ ಮಿಂಚಿದ್ದಾರೆ.

39

ಕಾಸ್ಟಿಂಗ್ ಕೌಚ್‌ ಕುರಿತು ಇದಾಗಲೇ ಸಾಕಷ್ಟು ನಟಿಯರು ಮಾತನಾಡಿದ್ದಾರೆ. ಈ ವಿಚಾರದ ಬಗ್ಗೆ ಆಶಾ ನೇಗಿ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.

49

ಕೆಲವು ಹೆಣ್ಣುಮಕ್ಕಳು ಸಿನಿ ಕ್ಷೇತ್ರ ಅಥವಾ ಕಿರುತೆರೆಯಲ್ಲಿ ಯಶಸ್ವಿಯಾಗಲು ತಪ್ಪು ಹಾದಿ ಹಿಡಿದಿರಬಹುದು. ಕೆಲವರು ಇಂಥ ಆಫರ್​ಗಳನ್ನು ನಿರಾಕರಿಸಿರಬಹುದು. 

59

ಆದರೆ ಎಲ್ಲಾ ಯಶಸ್ವಿ ಹೆಣ್ಣುಮಕ್ಕಳೂ ಇದೇ ಹಾದಿ ಹಿಡಿಯುತ್ತಾರೆ ಎನ್ನುವುದು ಎಷ್ಟು ಸರಿಯಲ್ಲವೋ, ಬಣ್ಣದ ಲೋಕದಲ್ಲಿ ಯಶಸ್ವಿಯಾದ ನಟಿಯರನ್ನು (Actress) ನೋಡಿದಾಗ ಇವರೂ ಅಂಥವರೇ ಎಂದು ನಿರ್ಣಯಿಸಲಾಗುತ್ತದೆ ಎನ್ನುವ ನೋವಿನ ಮಾತನ್ನು ಆಶಾ ನೇಗಿ ಹೇಳಿದ್ದಾರೆ. 

69

ಟಿವಿ ಅಥವಾ ಬಾಲಿವುಡ್ ಆಗಿರಲಿ, ಜನರು ಮಹಿಳೆಯ ಯಶಸ್ಸನ್ನು ತ್ವರಿತವಾಗಿ ನಿರ್ಣಯಿಸಲು ಪ್ರಾರಂಭಿಸುತ್ತಾರೆ. ಈ ಯಶಸ್ಸನ್ನು ಸಾಧಿಸಲು ಆ ಮಹಿಳೆ ಎಷ್ಟು ಶ್ರಮಿಸಿದ್ದಾರೆಂದು ಯಾರೂ ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ ಎನ್ನುವ ನೋವು ಆಶಾ ಅವರದ್ದು.

79

ಹುಡುಗಿ ಯಶಸ್ವಿಯಾದರೆ ಅವಳು ಯಾರೊಂದಿಗಾದರೂ ಮಲಗಿದ್ದಾಳೆ ಎಂದು ಜನರು ಭಾವಿಸುತ್ತಾರೆ ಎಂದಿದ್ದಾರೆ. ಇದು ಆಶಾ ನೇಗಿಯವರ ಹಳೆಯ ವಿಡಿಯೋ ಆಗಿದ್ದು, ಅದು ಪುನಃ ವೈರಲ್​ ಆಗಿದೆ.

89

ನಾನು ತುಂಬಾ ಪ್ರತಿಭಾವಂತಳಾಗಿದ್ದರೂ ತ್ವರಿತವಾಗಿ ಯಶಸ್ಸನ್ನು ಸಾಧಿಸುವ ಹುಡುಗಿ ಎಂದು ನಾನು ಭಾವಿಸುತ್ತೇನೆ, ಯಾವುದೇ ಸಂದರ್ಭದಲ್ಲಿ ನನ್ನ ಬಾಸ್ , ನಿರ್ದೇಶಕ ಅಥವಾ ನಿರ್ಮಾಪಕರೊಂದಿಗೆ ಮಲಗಿರಬೇಕು ಎನ್ನುವ ಸ್ಥಿತಿ ಬರಲಿಲ್ಲ. 

99

ಆದರೆ ಜನರು ಹಾಗೆ  ನಿರ್ಣಯಿಸಲು ಪ್ರಾರಂಭಿಸಿದರು. ಅದಕ್ಕಾಗಿಯೇ ನನಗೆ ಇಂಡಸ್ಟ್ರಿಯಲ್ಲಿ ಒಳ್ಳೆಯ ಸ್ಥಾನ ಸಿಕ್ಕಿದೆ ಎಂದು ಹೇಳುತ್ತಾರೆ. ಇದು ತುಂಬಾ ನೋವಾಗುತ್ತದೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories