'ಮಗಳು ಜಾನಕಿ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನೆ ಮಗಳಾಗಿದ್ದ ಗಾನವಿ ಇದೀಗ ಕನ್ನಡ ಚಿತ್ರರಂಗದ ಬೇಡಿಕೆಯ ನಟಿ.
ರಿಷಬ್ ಶೆಟ್ಟಿಗೆ ಜೋಡಿಯಾಗಿ 'ಹೀರೋ' ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಗಾಂಧಿ ನಗರದಲ್ಲಿ ಇವರದ್ದೇ ಸುದ್ದಿ. ಅದರಲ್ಲೂ ಇತ್ತೀಚಿಗೆ ಮಾಡಿಸಿದ ಫೋಟೋಶೂಟ್ ತುಂಬಾನೇ ವೈರಲ್ ಆಗಿವೆ.
ಮಾನಸ ಗೋಪಾಲಸ್ವಾಮಿ ಅವರು ಗಾನವಿಗೆ ಸ್ಟೈಲಿಂಗ್ ಮಾಡಿದ್ದು, ವಿನಯ್ ವಿನು ಫೋಟೋಶೂಟ್ ಮಾಡಿದ್ದಾರೆ.
ಕಾಮೆಂಟ್ಸ್ ಪ್ರಕಾರ ಗಾನವಿ ತಮ್ಮ ಮುಂದಿನ ಚಿತ್ರಕ್ಕೆ ಮಾಡಿಸಿರುವ ಶೂಟ್ ಇದು ಎನ್ನಲಾಗಿದೆ. ಆದರೆ ಸದ್ಯಕ್ಕೆ ಕಿರು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಗಾನವಿ 'ಗುಟ್ರುಗೂ' ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ.
ಈ ಕಿರುಚಿತ್ರದಲ್ಲಿ ಉಪನ್ಯಾಸಕ ಹಾಗೂ ಲೈಂಗಿಕ ವರ್ಕರ್ ನಡುವೆ ಚರ್ಚೆ ನಡೆಯುತ್ತಿದೆ. ಇದೇ ಕಥೆಗೆ ತಿರುವು ನೀಡುವ ಭಾಗ. ಗಾನವಿ ಲೈಂಗಿಕ ವರ್ಕರ್ ಆಗಿಯೂ ನಟಿಸಿದ್ದಾರೆ.
ಒಂದೇ ರೀತಿಯ ಪಾತ್ರಗಳಲ್ಲಿ ನಟಿಸೋಕೆ ಇಷ್ಟವಿಲ್ಲ. ಈ ಪಾತ್ರಕ್ಕೆ ತುಂಬಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ ಎಂದು ಗಾನವಿ ಹೇಳಿದ್ದಾರೆ.
Suvarna News