ಬಿಗ್ ಬಾಸ್ ನಲ್ಲಿ ಮುಖವಾಡ ಹಾಕೊಂಡು ಬದುಕ್ತಿದ್ದಾರಾ ನಟಿ ಗೌತಮಿ ಜಾಧವ್

First Published | Oct 13, 2024, 2:04 PM IST

ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಬಿಗ್ ಬಾಸ್ ಮನೆಯಲ್ಲಿ ಮುಖವಾಡ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ವೀಕ್ಷಕರು ತಿಳಿಸಿದ್ದು, ನಿಮಗೂ ಹಾಗೆ ಅನಿಸುತ್ತಿದ್ಯಾ? 
 

ಬಿಗ್ ಬಾಸ್ ಸೀಸನ್ 11 (Bigg Boss Season 11) ಎರಡನೇ ವಾರವನ್ನೂ ಸಹ ಸಕ್ಸಸ್ ಫುಲ್ ಆಗಿ ಮುಗಿಸಿದೆ, ಸದ್ಯಕ್ಕೆ ಕಿಚ್ಚನ ಪಂಚಾಯಿತಿಯಲ್ಲಿ ನಡೆದಂತಹ ವೀಕ್ಷಕರ ವಿಶೇಷ ಉಡುಗೊರೆಗಳ ಬಗ್ಗೆ ಭಾರಿ ಸುದ್ದಿಯಾಗುತ್ತಿದೆ. 
 

ಕಿಚ್ಚನ ಪಂಚಾಯತಿಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ವೀಕ್ಷಕರ ಕಡೆಯಿಂದ ಸ್ಪರ್ಧಿಗಳಿಗೆ ವಿಶೇಷ ಉಡುಗೊರೆ ಸಿಕ್ಕಿದೆ. ಸ್ಪರ್ಧಿಗಳು ದೊಡ್ಮನೆಯಲ್ಲಿ ಹೇಗೆಲಾ ಆಡ್ತಿದ್ದಾರೆ ಎನ್ನುವುದರ ಮೇಲೆ ಈ ಉಡುಗೊರೆ ಸಿಕ್ಕಿದೆ. 

Tap to resize

ಧನರಾಜ್‌ ಆಚಾರ್ ಗೆ ಸೈಕಲ್ ಪಂಪ್ ಸಿಕ್ಕಿದ್ರೆ, ಭವ್ಯಾ ಗೌಡಗೆ  (Bhavya Gowda) ಕ್ಯಾಲ್ಕುಲೇಟರ್‌, ಗೌತಮಿ ಜಾಧವ್‌ಗೆ ಮುಖವಾಡ, ತ್ರಿವಿಕ್ರಮ್‌ಗೆ ವಿಸಿಲ್, ಚೈತ್ರಾ ಕುಂದಾಪುರಗೆ ಬೂದಿ ಮುಚ್ಚಿದ ಕೆಂಡ ಗಿಫ್ಟ್ ಕೊಡಲಾಗಿದೆ. ಇದೀಗ ಗೌತಮಿಗೆ ಸಿಕ್ಕಂತಹ ಮುಖವಾಡದ ಬಗ್ಗೆ ಭಾರಿ ಸದ್ದಾಗ್ತಿದೆ. 
 

ಗೌತಮಿ ಜಾಧವ್  (Gouthami Jadhav) ಬಿಗ್ ಬಾಸ್ ನಲ್ಲಿ ಮುಖವಾಡ ಹಾಕ್ಕೊಂಡು ಜೀವನ ಮಾಡ್ತಿದ್ದಾರೆ, ಮುಖವಾಡ ತೆಗೆದ್ರೆ ನಿಜವಾದ ಸತ್ಯ ಹೊರಗೆ ಬರ್ತಾರೆ ಎಂದು ವೀಕ್ಷಕರು ತಿಳಿಸಿದ್ದಾರೆ. ಇದನ್ನ ಕೇಳಿ ಗೌತಮಿ ಶಾಕ್ ಆಗಿದ್ದಾರೆ. 

ಎಲ್ಲರಲೂ ತಪ್ಪು ಹುಡ್ಕೋದು ಬಿಟ್ಟು, ಒಳ್ಳೆಯದನ್ನು ಮಾತ್ರ ತೆಗೋತಿನಿ ಎಂದಿದ್ದ ಗೌತಮಿಯವರ ಮಾತು, ನಡತೆ ಎಲ್ಲವೂ ಜನರಿಗೆ ನಟನೆಯಂತೆಯೇ ಕಾಣಿಸಿದೆ. ಅವರು ನಿಜವಾಗಿಯೂ ತಮ್ಮತನವನ್ನು ತೋರಿಸುತ್ತಿಲ್ಲ, ನಾಟಕ ಆಡ್ತಿದ್ದಾರೆ ಎಂದಿದ್ದಾರೆ. 

ಗೌತಮಿಗೆ ಮುಖವಾಡ ಗಿಫ್ಟ್ (face mask) ಸಿಕ್ಕಿದ್ದು, ಮುಖವಾಡ ತೆಗೆದು ನಿಜವಾದ ಆಟಕ್ಕೆ ಯಾವಾಗ ಇಳೀತೀರಾ ಎನ್ನುವ ಮೆಸೇಜ್ ಬಂದಿದೆ. ನಿಮ್ಮ ಸತ್ಯ ಹೊರಗೆ ಬರ್ತಿಲ್ಲ ಸತ್ಯನ ನಿಜವಾದ ಸತ್ಯ ಹೊರ ಬರಬೇಕು ಎಂದು ಕಿಚ್ಚ ಹೇಳ್ತಿದ್ದಂತೆ ಗೌತಮಿ ಕಣ್ಣಲ್ಲಿ ನೀರು ತುಂಬಿತ್ತು . 

ಸೋಶಿಯಲ್ ಮೀಡಿಯಾದಲ್ಲೂ ಗೌತಮಿಗೆ ಸಿಕ್ಕಿರುವ ಗಿಫ್ಟ್ ಬಗ್ಗೆ ಸಖತ್ ಟ್ರೋಲ್ ಆಗುತ್ತಿದ್ದು, ಹೆಚ್ಚಿನ ಜನರು ಗೌತಮಿ ನಿಜವಾಗಿಯೂ ಮುಖವಾಡಿ ಹಾಕಿಯೇ ಆಡ್ತಿದ್ದಾರೆ, ಆಕೆ ನಾವು ಅಂದುಕೊಂಡಷ್ಟು ಮುಗ್ಧೆ ಅಲ್ಲ, ಅಂತಿದ್ದಾರೆ. ಮುಂದಿನವಾರ ಗೌತಮಿ ಆಟ ಹೇಗಿರುತ್ತೆ ಕಾದು ನೋಡಬೇಕು. 
 

Latest Videos

click me!