ನನ್ನ ಸೀರೆ ಬಣ್ಣ ನಿನ್ನ ಹೃದಯಕ್ಕೆ ಮ್ಯಾಚ್ ಆಗುತ್ತೆ ಅಂತ ಅನುಪಮಾ ಗೌಡ ಹೇಳಿದ್ದು ಯಾರಿಗೆ?

Published : Oct 13, 2024, 04:04 PM ISTUpdated : Oct 14, 2024, 08:07 AM IST

ಇತ್ತೀಚೆಗಷ್ಟೇ ಅದ್ಧೂರಿಯಾಗಿ ಗೃಹಪ್ರವೇಶವನ್ನು ಮುಗಿಸಿರುವ ನಟಿ, ನಿರೂಪಕಿ ಅನುಪಮಾ ಗೌಡ ಇದೀಗ ಕೆಂಪು ಬಣ್ಣದ ಸೀರೆಯುಟ್ಟು ಏನೋ ಮೆಸೇಜ್ ಕೊಟ್ಟಿದ್ದಾರೆ.   

PREV
17
ನನ್ನ ಸೀರೆ ಬಣ್ಣ ನಿನ್ನ ಹೃದಯಕ್ಕೆ ಮ್ಯಾಚ್ ಆಗುತ್ತೆ ಅಂತ ಅನುಪಮಾ ಗೌಡ ಹೇಳಿದ್ದು ಯಾರಿಗೆ?

ನಟಿ ನಿರೂಪಕಿಯಾಗಿ ಜನಪ್ರಿಯತೆ ಪಡೆದಿರುವ ಅನುಪಮಾ ಗೌಡ (Anupama Gowda), ಇತ್ತೀಚೆಗೆ ಅದ್ಧೂರಿಯಾಗಿ ತಮ್ಮ ಹೊಸ ಮನೆಗೆ ಕಾಲಿಟ್ಟಿದ್ದು, ಮನೆಗೆ ‘ನಮ್ಮನೆ’ ಎಂದು ನಾಮಕರಣ ಮಾಡಿದ್ದು, ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದರು. 
 

27

ಹಲವಾರು ಜನ ಬೆಂಗಳೂರಲ್ಲಿ ತಮ್ಮ ಸ್ವಂತ ಮನೆ ನಿರ್ಮಾಣ ಮಾಡಬೇಕೆಂದು ಕನಸು ಕಾಣುತ್ತಿರುವಾಗ, ಅನುಪಮಾ ತಮ್ಮ ಕಠಿಣ ಪರಿಶ್ರಮದಿಂದ ಇದೀಗ ತಮ್ಮದೇ ಆದ ದೊಡ್ಡದಾದ ಮನೆಯನ್ನು ನಿರ್ಮಿಸಿದ್ದಾರೆ, ಗೃಹಪ್ರವೇಶಕ್ಕೆ ಕಿರುತೆರೆ- ಹಿರಿತೆರೆ ತಾರೆಯರು ಆಗಮಿಸಿ ಶುಭ ಕೋರಿದ್ದರು. 
 

37

ಸೆಲೆಬ್ರಿಟಿಗಳಾದ ನೇಹಾ ರಾಮಕೃಷ್ಣ, ಅನುಪ್ರಭಾಕರ್, ದಿವ್ಯಾ ಉರುಡುಗ, ಇಶಿತಾ ವರ್ಷ, ಕಿಶನ್ ಬಿಳಗಲಿ, ಕಾರ್ತಿಕ್ ಶರ್ಮಾ, ಕೃಷಿ ತಾಪಂಡ ಮೊದಲಾದವರು ತಮ್ಮ ಗೆಳತಿ ಅನುಪಮಾ ಸಂಭ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದರು. 
 

47

ಇದೀಗ ಅನುಪಮಾ ಸೋಶಿಯಲ್ ಮೀಡಿಯಾದಲ್ಲಿ (social media) ಸೀರೆಯುಟ್ಟಿರುವ ಒಂದು ವಿಡಿಯೋ ಶೇರ್ ಮಾಡಿದ್ದು, ನಮ್ಮನೆ ಗೃಹಪ್ರವೇಶದ ಮೊದಲ ದಿನ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಇದರ ಜೊತೆಗೆ ಅವರು ಬರೆದಿರುವ ಇನ್ನೊಂದು ಕ್ಯಾಪ್ಶನ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. 
 

57

ಐವರಿ ಬಣ್ಣದ ಬಾರ್ಡರ್ ಮತ್ತು ಪಲ್ಲೂ ಇರುವ ಕೆಂಪು ಬಣ್ಣದ ಮೈಸೂರ್ ಸಿಲ್ಕ್ ಸೀರೆ ಧರಿಸಿರುವ ಅನುಪಮಾ ನನ್ನ ಸೀರೆ ಬಣ್ಣ ನಿನ್ನ ಹೃದಯಕ್ಕೆ ಮ್ಯಾಚ್ ಆಗುತ್ತೆ (My saree color matches with your heart) ಎಂದು ಬರೆದುಕೊಂಡಿದ್ದಾರೆ. 
 

67

ಅಷ್ಟಕ್ಕೂ ಅನುಪಮಾ ಇದ್ಯಾರಿಗೆ ಈ ರೀತಿಯಾಗಿ ಹೇಳ್ತಿದ್ದಾರೆ ಅಂತ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ. ಅನುಪಮಾ ಲವ್ವಲ್ಲಿ ಬಿದ್ದೀದ್ದಾರ? ಹೊಸಮನೆಗೆ ಪ್ರವೇಶ ಮಾಡಿರುವ ಅನುಪಮಾ ಸದ್ಯದಲ್ಲೇ ಹೊಸ ಜೀವನಕ್ಕೆ ಪ್ರವೇಶ ಮಾಡುವ ಬಗ್ಗೆ ಗುಟ್ಟು ಬಿಚ್ಚಿಡುತ್ತಿದ್ದಾರ? ಅನ್ನೋದು ಗೊತ್ತಿಲ್ಲ. 
 

77

ಕಳೆದ ಮೂರು ತಿಂಗಳಿನಿಂದ ಅನುಪಮಾ ರಾಜಾರಾಣಿ ರೀಲೋಡೆಡ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದರು. ಆವಾಗ ಸೃಜನ್ ಲೋಕೇಶ್ ಮದ್ವೆ ಬಗ್ಗೆ ಹೇಳಿ ಅನುಪಮಾ ಕಾಲೆಳೆಯುತ್ತಿದ್ದರು. ಅಷ್ಟೇ ಅಲ್ಲ ಮೂವರು ತೀರ್ಪುಗಾರರು ಸಹ ಅನುಪಮಾಗೆ ಪ್ರೀತಿ ಪಾಠ ಮಾಡುತ್ತಿದ್ದರು. ಹಾಗಾಗಿ ಇದೀಗ ಅನುಪಮಾ ಲವ್ವಲ್ಲಿ ಬಿದ್ದಿದ್ದಾರ ಅನ್ನೋ ಅನುಮಾನ ಶುರುವಾಗಿದೆ. 
 

Read more Photos on
click me!

Recommended Stories