ದೇವಿ ರೂಪ‌ ತಾಳಿದ ಅಮೃತಧಾರೆಯ ಮಲ್ಲಿ…ಸಾಕ್ಷಾತ್ ಜಗನ್ಮಾತೆಯ ದರ್ಶನ ಪಡೆದಂತಾಯ್ತು ಎಂದ ಜನ

Published : Oct 07, 2024, 12:31 PM ISTUpdated : Oct 07, 2024, 02:01 PM IST

ಅಮೃತಧಾರೆ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಮಲ್ಲಿ ಪಾತ್ರದಲ್ಲಿ ಅತ್ಯದ್ಭುತವಾಗಿ ನಟಿಸುತ್ತಿರುವ ನಟಿ ರಾಧಾ ಭಗವತಿ ಇದೀಗ  ನವರಾತ್ರಿ ಹಿನ್ನೆಲೆಯಲ್ಲಿ ದೇವಿ ದುರ್ಗಾಂಬ ಅವತಾರ ತಾಳಿದ್ದು, ಸಾಕ್ಷಾತ್ ದೇವತೆಯಂತೆ ಕಾಣಿಸುತ್ತಿದ್ದಾರೆ. 

PREV
17
ದೇವಿ ರೂಪ‌ ತಾಳಿದ ಅಮೃತಧಾರೆಯ ಮಲ್ಲಿ…ಸಾಕ್ಷಾತ್ ಜಗನ್ಮಾತೆಯ ದರ್ಶನ ಪಡೆದಂತಾಯ್ತು ಎಂದ ಜನ

ಈ ಫೋಟೊದಲ್ಲಿ ಸಾಕ್ಷಾತ್ ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದು ಯಾರು ಅನ್ನೋದು ಗೊತ್ತಾಯ್ತ? ಇಷ್ಟರಲ್ಲಾಗಲೇ ಗೊತ್ತಾಗಲೇ ಬೇಕು ಅಲ್ವಾ? ಸಾಕ್ಷಾತ್ ದೇವಿಯಾಗಿ ಕಾಣಿಸಿಕೊಂಡಿದ್ದು, ಬೇರಾರು ಅಲ್ಲ ಕನ್ನಡ ಕಿರುತೆರೆ, ಹಿರೆತೆರೆಯಲ್ಲಿ ಮಿಂಚುತ್ತ್ರಿರುವ ನಟಿ ರಾಧಾ ಭಗವತಿ (Radha Bhagavati). 
 

27

ಯಾರಪ್ಪಾ ಇದು ರಾಧಾ ಭಗತಿ ಅಂದ್ರೆ ಸದ್ಯ ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಮುಗ್ಧೆ ಮಲ್ಲಿ ಪಾತ್ರಕ್ಕೆ ಜೀವತುಂಬುತ್ತಿರುವ ನಟಿಯೇ ರಾಧಾ ಭಗವತಿ. ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾಧಾ ದುರ್ಗಾ ದೇವಿಯ ಅವತಾರೆ ತಾಳಿದ್ದಾರೆ. 
 

37

ರಾಧಾ ಹಸಿರು ಬಾರ್ಡರ್ ಇರುವಂತಹ ಕೆಂಪು ಸೀರೆಯನ್ನು ಧರಿಸಿದ್ದು, ತಲೆಯಲ್ಲಿ ಕಿರೀಟ, ಕೈಯಲ್ಲಿ ತ್ರಿಶೂಲ ಹಿಡಿದು ಹಾಗೂ ಬಾಲಕಿಯನ್ನು ತಬ್ಬಿ ಹಿಡಿದ ದೇವಿಯ ರೂಪದಲ್ಲಿ ಫೋಟೊ ಶೂಟ್ ಮಾಡಿಸಿದ್ದು ಸದ್ಯ ಈ ಫೋಟೊಗಳು ಎಲ್ಲೆಡೆ ವೈರಲ್ ಆಗುತ್ತಿವೆ. 
 

47

ದೇಶಾದ್ಯಂತ (Navratri)ನವರಾತ್ರಿ ವಿಜೃಂಭರಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ರಾಧಾ ದುರ್ಗಾಂಭ ದೇವಿಯ ಅವತಾರ ತಾಳಿದ್ದು, ನವರಾತ್ರಿಯನ್ನು ಭಕ್ತಿ, ಸಕಾರಾತ್ಮಕತೆ ಮತ್ತು ಸಂತೋಷದಿಂದ ಬರಮಾಡಿಕೊಳ್ಳೋಣ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 
 

57

ರಾಧಾ ಭಗವತಿಯ ಈ ಡಿವೈನ್ ಫೋಟೊಗ್ರಾಫಿಗೆ ಪಾಸಿಟಿವ್ ರೆಸ್ಪಾನ್ಸ್ ಗಳು ಸಿಕ್ಕಿದ್ದು, ನಿಜವಾದ ದೇವತೆ ಥರಾನೆ ಕಾಣಿಸ್ತಿದ್ದೀರಿ, ದೇವತೆ, ಕೈಯೆತ್ತಿ ಮುಗಿಬೇಕು ಅಷ್ಟು ಚೆನ್ನಾಗಿ ಕಾಣಿಸ್ತಾ ಇದ್ದೀರಾ ಸೂಪರ್ , ನವರಾತ್ರಿಗೆ ಚಾಮುಂಡೇಶ್ವರಿ ನೇ ಬಂದಗಾಯ್ತು , ಮುಖದಲ್ಲಿ ದೈವೀಕತೆ ಎದ್ದು ಕಾಣಿಸ್ತಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
 

67

ಇನ್ನು ಹಲವರು ಸಾಕ್ಷಾತ್ ದೇವಿ ಧರೆಗಿಳಿದು ಬಂದಂತೆ ಕಾಣಿಸ್ತಿದ್ದೀರಾ? ನೀವು ಈ ರೂಪದಲ್ಲೇ ಆ ತ್ರಿಶೂಲದಿಂದ ಜೈದೇವ್ ಗೆ ಚುಚ್ಚಿ ಬಿಡಿ,  ದಿಯಾನ ಬಿಟ್ಟು ನಿಮ್ಮ ಹಿಂದೆ ಬಂದು ಬಿಡ್ತಾರೆ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. 
 

77

ಅಮೃತಧಾರೆ ಧಾರಾವಾಹಿಯಲ್ಲಿ ತಮ್ಮ ಮುಗ್ಧ ಪಾತ್ರದಿಂದ ಜನಮನ ಗೆದ್ದಿರುವ ಮಲ್ಲಿ ಆಲಿಯಾಸ್ ರಾಧಾ ಭಗವತಿ ಈ ಹಿಂದೆ ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿ ಪಾತ್ರದಲ್ಲಿ ನಟಿಸಿದ್ದರು. ರಾಧಾ ಒಬ್ಬ ಗಾಯಕಿಯೂ ಹೌದು, ಜೊತೆಗೆ ಮಾಡೆಲ್ (model) ಕೂಡ ಹೌದು, ಹಲವಾರು ಫ್ಯಾಶಸ್ ಶೋಗಳಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ ನಟಿ. 
 

Read more Photos on
click me!

Recommended Stories