ಶ್ರೀರಸ್ತು ಶುಭಮಸ್ತು ಸೀರಿಯಲ್‌ನ ಈ ನಟ ಯಶ್ ಜೊತೆಯೂ ಕೆಜಿಎಫ್‌ನಲ್ಲೂ ನಟಿಸಿದ್ದಾರೆ!

First Published Jun 2, 2023, 5:47 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಅಪ್ಪನ ಮೇಲೆ ಕೋಪ, ಕುಟುಂಬದ ಮೇಲೆ ಅಪಾರ ಪ್ರೀತಿ ಹೊಂದಿರುವ ವಿಭಿನ್ನ ವ್ಯಕ್ತಿತ್ವದ ವ್ಯಕ್ತಿ ಅವಿನಾಶ್. ಈ ಪಾತ್ರದಲ್ಲಿ ನಟಿಸಿರುವ ಅರ್ಫತ್ ಶರೀಫ್ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ. 

ಝೀ ಕನ್ನಡದಲ್ಲಿ (Zee Kannada) ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಧಾರಾವಾಹಿ ಅಪಾರ ಜನಮನ್ನಣೆ ಗಳಿಸಿದೆ. ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಅದರಲ್ಲಿ ಒಂದು ಪಾತ್ರ ಮಾಧವ್ ಪುತ್ರ ಅವಿನಾಶ್. 

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತಂದೆಯ ಮೇಲೆ ಸಿಕ್ಕಾಪಟ್ಟೆ ಕೋಪ, ಹೆಂಡತಿ ಅಂದ್ರೆ ಜೀವ, ಮನೆಯವರಿಗಾಗಿ ಏನು ಬೇಕಾದ್ರೂ ಮಾಡುವ ಮಿತಭಾಷಿ ಬ್ಯುಸಿನೆಸ್ ಮ್ಯಾನ್ ಅವಿನಾಶ್ ಆಗಿ ಕಾಣಿಸಿಕೊಳ್ಳುತ್ತಿರುವ ನಟ ಅರ್ಫತ್ ಶರೀಫ್ (Arfath Sharif). 
 

ಅರ್ಫತ್ ಶರೀಫ್ ಗೆ ನಟನೆ ಹೊಸದೇನಲ್ಲ, ಇದಕ್ಕೂ ಮುನ್ನ ಇವರು ಹಲವಾರು ಧಾರಾವಾಹಿ, ಸಿನಿಮಾ, ವೆಬ್ ಸೀರಿಸ್ ಜೊತೆಗೆ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿದ್ದು, ಸಾಕಷ್ಟು ಜನಮನ್ನಣೆ ಗಳಿಸಿದ್ದಾರೆ. 

ಶ್ರೀರಸ್ತು ಶುಭಮಸ್ತು ಸೀರಿಯಲ್ (Serial) ಮುನ್ನ ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಸೀರಿಯಲ್ ನಲ್ಲಿ  ಇಂಚರಾಳ ಮಾವನ ಮಗನಾಗಿ ಸ್ವಲ್ಪ ನೆಗೆಟೀವ್ ಶೇಡ್ ನಲ್ಲೇ ಕಾಣಿಸಿಕೊಂಡಿದ್ದರು.

ಅರ್ಫತ್ ಅವರು ಕಥಾಲೇಖನ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಅಷ್ಟೇ ಅಲ್ಲ ಚಾರ್ಕೋಲ್ ಎಂಬ ವೆಬ್ ಸೀರಿಸ್ ನಲ್ಲೂ ಸಹ ಇವರು ಕಾಣಿಸಿಕೊಂಡಿದ್ದರು. ಜೊತೆಗೆ ಟೊಯೋಟೊ, ಪೈಂಟ್, ಟಿವಿಎಸ್, ಬ್ರಾಂಡ್ FMSGM ಮೊದಲಾದ ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. 
 

ಇನ್ನೊಂದು ವಿಶೇಷ ಏನಂದ್ರೆ ಅರ್ಫತ್ ಶರೀಫ್ ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಿದ್ದಾರೆ. ಅವರು ಕನ್ನಡದ ಅತ್ಯಂತ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್ 2 (KGF 2) ಚಿತ್ರದಲ್ಲೂ ನಟಿಸಿದ್ದರು. ಇದರಲ್ಲಿ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಸೋಶಿಯಲ್ ಮೀಡಿಯಾದಲ್ಲಿ (Social media) ಇವರು ಆಕ್ಟೀವ್ ಆಗಿದ್ರೂ ಸಹ ಹೆಚ್ಚಾಗಿ ಪರ್ಸನಲ್ ಕ್ಕಿಂತ ಪ್ರೊಫೆಶನ್ ವಿಷಯಗಳನ್ನೇ ಶೇರ್ ಮಾಡುತ್ತಿರುತ್ತಾರೆ ಅರ್ಫತ್. ಇನ್ನು ಶ್ರೀರಸ್ತು ಶುಭಮಸ್ತುಸೀರಿಯಲ್ ನಲ್ಲಿ ಹೆಂಡ್ತಿಯನ್ನು ಜೀವಕ್ಕಿಂತ ಹೆಚ್ಚಿಗೆ ಇಷ್ಟಪಡುವ ಅವಿನಾಶ್ - ಪೂರ್ಣಿ ಜೋಡಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 

click me!