ಮುಳ್ಳಿನ ದಾರಿಯಲ್ಲಿ ಶುರುವಾದ ಆರಾಧನಾ ಕನಸಿನ ಪಯಣ

Published : May 04, 2023, 06:34 PM IST

ಅಪ್ಪನ ಕನಸು ನನಸು ಮಾಡುವ ದಾರಿಯಲ್ಲಿ ಸಾಗುತ್ತಿರುವ ಆರಾಧನಾಳಿಗೆ ದಾರಿಯಲ್ಲಿ ಸಾಲು ಸಾಲು ವಿಘ್ನಗಳು ಕಾಣಿಸಿಕೊಳ್ಳುತ್ತೆ. ಇದೀಗ ಹೊಸದಾಗಿ ಶುರುವಾಗ ಕನಸಿನ ಪಯಣದ ಆರಂಭ ಮುಳ್ಳಿನ ದಾರಿಯಾಗ್ತಿದೆ. 

PREV
17
ಮುಳ್ಳಿನ ದಾರಿಯಲ್ಲಿ ಶುರುವಾದ ಆರಾಧನಾ ಕನಸಿನ ಪಯಣ

ಕಲರ್ಸ್ ಕನ್ನಡದಲ್ಲಿ (Colors Kannada) ಇತ್ತೀಚೆಗಷ್ಟೇ ಆರಂಭವಾದ ಸೀರಿಯಲ್ ಅಂತರಪಟ(Antarapata) ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಂದೆಯ ಕನಸು ನನಸು ಮಾಡುವತ್ತ ಸಾಗುವ ಆರಾಧನಾಳ ಪಯಣ ಜನರಿಗೆ ಇಷ್ಟವಾಗಿದೆ.

27

ಸಮೀರಾಳ ಈವೆಂಟ್ ಮ್ಯಾನೆಜ್ ಮೆಂಟ್ ನಿಂದ ಹೊರನಡೆದ ಆರಾಧನಾ, ತನ್ನ ಸ್ವಂತ ಸಂಸ್ಥೆಯನ್ನು ಸ್ಥಾಪಿಸುವ ಪಣ ತೊಡುತ್ತಾಳೆ. ಇದಕ್ಕೆ ರವಿ ಸಾಥ್ ನೀಡುತ್ತಾರೆ. ಇನ್ನೇನು ಒಂದು ಹೆಜ್ಜೆ ಮುಂದಿಡಬೇಕು ಅನ್ನೋವಷ್ಟರಲ್ಲಿ ಸಮಸ್ಯೆ ಎದುರಾಗುತ್ತೆ. 

37

ಕಾರ್ಯಕ್ರಮಕ್ಕಾಗಿ ಅಡುಗೆ ತಯಾರಿಯಲ್ಲಿ ಬ್ಯುಸಿಯಾಗಿರುವಾಗ ಕಾರ್ಯಕ್ರಮ ನಡೆಸಿಕೊಡುವವರು ಬಂದು ಆರಾಧನಾಳ ಮೇಲೆ ಕೂಗಾಡುತ್ತಾರೆ. ಈ ತರ ಮುದುಕಿಯನ್ನು ಇಟ್ಟುಕೊಂಡು ಅಡುಗೆ ಬಳಸೋದ. ಯಾರು ನಮ್ಮನೆ ಊಟ ಮಾಡೋದೆ ಇಲ್ಲ ಹಾಗಿದ್ರೆ. ಅನ್ನ ಬಡಿಸುವವರು ಹೇಗಿರಬೇಕು ಅಂದ್ರೆ ನಮ್ಮ ಮನೆಯವರೇ ಬಡಿಸಿದಂತೆ ಇರಬೇಕು ಎಂದು ಹೇಳುತ್ತಾರೆ. 

47

ಇದಕ್ಕೆ ನೇರವಾಗಿಯೇ ಉತ್ತರಿಸುವ ದಿಟ್ಟೆ ಆರಾಧನಾ, ಪದೇ ಪದೇ ಕೆಲಸದವರು ಎನ್ನಬೇಡಿ. ನಾವು ಕೆಲಸದವರು, ನೀವು ಸಹ ಕೆಲಸ ಮಾಡೋರೆ. ಇದೀಗ ಲಾಸ್ಟ್ ಮೂಮೆಂಟ್. ಹಾಗಾಗಿ ನಮ್ಮ ಮನೆಯವರನ್ನೆ ಕರೆದುಕೊಂಡು ಬಂದಿದ್ದೇನೆ. 

57

ನೀವು ಲಾಸ್ಟ್ ಮೂಮೆಂಟ್ ಅಲ್ಲಿ ಹೇಳಿರೋದ್ರಿಂದ ಇವರನ್ನೆಲ್ಲಾ ಕರೆದುಕೊಂಡು ಬಂದೆ. ಇಲ್ಲಾಂದ್ರೆ ನಿಮ್ಮ ಕಣ್ಣಿಗೆ ಚೆನ್ನಾಗಿ ಕಾಣೋರನ್ನೆ ಕರೆದುಕೊಂಡು ಬರ್ತಿದ್ದೆ. ಈಗಲೂ ನಿಮಗೆ ಮೋಸ ಆಗಿಲ್ಲ ಸರ್, ಇವರು ಮಾಡೋ ಅಡುಗೆನಾ ಬೆಂಗಳೂರಲ್ಲಿ ಯಾವ ಕ್ಯಾಟರಿಂಗ್ ನವರು ಕೊಡೋದಿಲ್ಲ ಎನ್ನುತ್ತಾಳೆ. 

67

ಇದರಿಂದ ಕೋಪಗೊಂಡ ಓನರ್ ಇದನ್ನೆಲ್ಲಾ ಅಲ್ಲಿ ಜನರ ಮುಂದೆ ಹೇಳಕಾಗುತ್ತಾ? ಬಂದ ಜನರಿಂದ ಯಾವುದೇ ಕಂಪ್ಲೈಂಟ್ ಬರಬಾರದು. ಈ ಪಂಚೆ ಹಾಕಿದೋರು, ಶಾಲು ಹಾಕಿದೋರ ಕೈಯಲ್ಲೆಲ್ಲಾ ಊಟ ಬಡಿಸಬೇಡಿ ಎಂದು ಕೋಪದಿಂದ ಹೇಳ್ತಾನೆ. 

77

ಈ ಎಲ್ಲಾ ಸಮಸ್ಯೆನಾ ಚೆನ್ನಾಗಿ ಅಡುಗೆ ಮಾಡುವ ಮೂಲಕ ಹೊಸ ಕನಸಿನಲ್ಲಿನ ವಿಘ್ನಗಳನ್ನು ಗೆದ್ದು ಆರಾಧನಾ ಯಶಸ್ವಿಯಾಗ್ತಾಳಾ? ಅಥವಾ ಮತ್ತೆ ಕೆಲಸ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಾಳಾ? ಕಾದು ನೋಡಬೇಕು. 

click me!

Recommended Stories