ಸಂಗೀತಾ-ಕಾರ್ತಿಕ್ ಮಧ್ಯೆ ಯಾರೂ ಫಿಟ್ಟಿಂಗ್ ಇಡಲು ಸಾಧ್ಯವೇ ಇಲ್ಲ, ಇಲ್ಲಿವೆ ನೋಡಿ ಬೇಕಾದಷ್ಟು ಸಾಕ್ಷಿ!

Published : Oct 30, 2023, 01:24 PM ISTUpdated : Oct 30, 2023, 04:40 PM IST

ಟಾಸ್ಕ್‌ ವೇಳೆ ಕೂಡ ಸಂಗೀತಾ ಮತ್ತು ಕಾರ್ತಿಕ್ ಒಬ್ಬರಿಗೊಬ್ಬರು ಬಹಳಷ್ಟು ಸಹಾಯ ಮಾಡಿಕೊಳ್ಳುತ್ತಾರೆ. ಅವರಿಬ್ಬರಲ್ಲಿ ಯಾರಾದರೂ ಸೋತರೆ ಇನ್ನೊಬ್ಬರು ಫೀಲ್ ಮಾಡಿಕೊಳ್ಳುತ್ತಾರೆ. 

PREV
110
ಸಂಗೀತಾ-ಕಾರ್ತಿಕ್  ಮಧ್ಯೆ ಯಾರೂ ಫಿಟ್ಟಿಂಗ್ ಇಡಲು ಸಾಧ್ಯವೇ ಇಲ್ಲ, ಇಲ್ಲಿವೆ ನೋಡಿ ಬೇಕಾದಷ್ಟು ಸಾಕ್ಷಿ!

ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿ ಇದೆ, ಹೆಚ್ಚು ಹೆಚ್ಚು ಬೆಳೆಯುತ್ತಲೇ ಇದೆ ಎಂಬುದು ಎಲ್ಲರಿಗೂ ಗೊತ್ತು. ಕಾರ್ತಿಕ್-ಸಂಗೀತಾ, ಸ್ನೇಹಿತ್-ನಮ್ರತಾ, ಇಶಾನಿ-ಮೈಕಲ್ ಹೀಗೆ 3 ಜೋಡಿಗಳು ಇವೆ ಎಂಬುದು ಸದ್ಯದ ನ್ಯೂಸ್. ಆದರೆ, ಲವ್ ಮತ್ತು ರೊಮ್ಯಾನ್ಸ್‌ನಲ್ಲಿ ಎಲ್ಲರಿಗಿಂತ ಮುಂದಿದ್ದು, ಹೆಚ್ಚು ಸುದ್ದಿ ಮಾಡುತ್ತಿರುವುದು ಕಾರ್ತಿಕ್ ಮತ್ತು ಸಂಗೀತಾ ಜೋಡಿ. 

210

ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನದಲ್ಲೇ ಸಂಗೀತಾ ಮತ್ತು ಕಾರ್ತಿಕ್ ಬೆಸ್ಟ್ ಫ್ರಂಡ್ಸ್ ಆಗಿಬಿಟ್ಟರು. ಮೊದಲ ನೋಟದಲ್ಲೇ ನಾವಿಬ್ಬರೂ ಬೆಸ್ಟ್‌ ಫ್ರಂಡ್ಸ್ ಎಂಬುದು ಮನೆಯೊಳಗೆ ಬಂದ ತಕ್ಷಣವೇ ನಿರ್ಧಾರವಾಗಿಹೋಯ್ತು ಎಂದಿದ್ದಾರೆ ಈ ಇಬ್ಬರೂ. 

310

ಬಿಗ್ ಬಾಸ್ ಮನೆಯಲ್ಲಿ ಅವರಿಬ್ಬರ ಮಧ್ಯೆ ಸ್ನೇಹ ಮುಗಿದು ಕ್ರಶ್ ಶುರುವಾಯ್ತಂತೆ. ಬಳಿಕ ಅದು ಲವ್ ಆಗಿ ಬದಲಾಗಿದೆ ಎಂದಿದ್ದಾರೆ ಈ ಜೋಡಿ. ಈಗಂತೂ ಕಾರ್ತಿಕ್ ಸಂಗೀತಾ ಮಧ್ಯೆ ಡೀಪ್ ಲವ್ ಇದೆ ಎಂಬುದು ಬಿಗ್ ಬಾಸ್ ವೀಕ್ಷಕರಿಗೆ ಎಲ್ಲರಿಗೂ ಗೊತ್ತು ಎನ್ನಬಹುದು. 

410

ಕಾರ್ತಿಕ್-ಸಂಗೀತಾ ಇಬ್ಬರೂ ಬಿಗ್ ಬಾಸ್ ಮನೆಯೊಳಗೆ ಅದೆಷ್ಟು ಹತ್ತಿರ ಇರುತ್ತಾರೆ ಎಂದರೆ, ಅವರಿಬ್ಬರನ್ನು ನೋಡಿದ ತಕ್ಷಣವೇ ಪ್ರೇಮಿಗಳು ಎಂದು ಗೊತ್ತಾಗುವಷ್ಟು. ಅವರಿಬ್ಬರೂ ಒಟ್ಟಿಗೇ ಕುಳಿತುಕೊಳ್ಳುತ್ತಾರೆ, ಹಗ್ ಮಾಡಿಕೊಳ್ಳುತ್ತಾರೆ.

510

ಟಾಸ್ಕ್‌ ವೇಳೆ ಕೂಡ ಸಂಗೀತಾ ಮತ್ತು ಕಾರ್ತಿಕ್ ಒಬ್ಬರಿಗೊಬ್ಬರು ಬಹಳಷ್ಟು ಸಹಾಯ ಮಾಡಿಕೊಳ್ಳುತ್ತಾರೆ. ಅವರಿಬ್ಬರಲ್ಲಿ ಯಾರಾದರೂ ಸೋತರೆ ಇನ್ನೊಬ್ಬರು ಫೀಲ್ ಮಾಡಿಕೊಳ್ಳುತ್ತಾರೆ. 
 

610

ಸಂಗೀತಾ-ಕಾರ್ತಿಕ್ ಜೋಡಿ ನೋಡಿ ಅನೇಕರು ಶಾಕ್ ಆಗಿದ್ದಾರೆ. ಕೆಲವರು ಮೆಚ್ಚಿ ಕೊಂಡಿದ್ದಾರೆ. ಹಲವರು ಹಚ್ಚಿಕೊಂಡಿದ್ದಾರೆ. ಇನ್ನೂ ಬಹಳಷ್ಟು ಜನರು ಜೋಡಿ ಅಂದರೆ ಹಾಗಿರಬೇಕು ಎಂದು ಅವರಿಬ್ಬರ ಬೆನ್ನು ತಟ್ಟುತ್ತಿದ್ದಾರೆ. 

710

ಕಾರ್ತಿಕ್-ಸಂಗೀತಾ ಜೋಡಿ ಅದೆಷ್ಟು ಸಹಜವಾಗಿ ಪರಸ್ಪರ ಒಪ್ಪಿಕೊಂಡು ಒಟ್ಟಿಗೇ ಇರುತ್ತಾರೆ ಎಂದರೆ, ಸ್ವತಃ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ಮನೆಯವರೆಲ್ಲರಿಗೂ ಗೊತ್ತು. ಅವರಿಬ್ಬರ ಮಧ್ಯೆ ಯಾರೂ ಕೂಡ ತಂದಿಡುವ ಪ್ರಯತ್ನಕ್ಕೂ ಕೈ ಹಾಕುತ್ತಿಲ್ಲ. 

810

ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್-ಸಂಗೀತಾ ಮಧ್ಯೆ ಯಾರೂ ಯಾಕೆ ಎಂಟ್ರಿ ಕೊಡುತ್ತಿಲ್ಲ ಎಂದರೆ, ಅವರಿಬ್ಬರ ಲವ್ ಅದೆಷ್ಟು ಸ್ಟ್ರಾಂಗ್ ಇದೆ ಎಂದರೆ, ಯಾರು ಏನೇ ಹೆಗೇ ಕಷ್ಟಪಟ್ಟರೂ ಅವರಿಬ್ಬರ ಬಾಂಡ್ ಡ್ಯಾಮೇಜ್ ಮಾಡಲು ಸಾಧ್ಯವೇ ಇಲ್ಲ. 

910

ಸಂಗೀತಾ ಮತ್ತು ಕಾರ್ತಿಕ್ ಲವ್ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಾಗೂ ಬಿಗ್ ಬಾಸ್ ಮನೆಯಲ್ಲಿ ಸಹ ಎಲ್ಲರೂ ಮಾತನಾಡುತ್ತಾರೆ. ಸಹ ಸ್ಪರ್ಧಿಗಳು ಕೂಡ ಅವರಿಬ್ಬರನ್ನೂ ಒಟ್ಟಿಗೇ ಇರಲು ಪೂರ್ಣ ಸಹಮತದಿಂದ ಒಪ್ಪಿದ್ದಾರೆ ಎನ್ನಬಹುದು.

1010

ಬಿಗ್ ಬಾಸ್ ಮನೆಯಲ್ಲಿ ಸಂಗೀತಾ-ಕಾರ್ತಿಕ್ ಅವರಿಬ್ಬರ ನಡೆ ಹೇಗಿದೆ ಎಂದರೆ, ನಾವಿಬ್ಬರೂ ಹುಟ್ಟಿರುವುದೇ ಒಬ್ಬರನ್ನೊಬ್ಬರು ಇಷ್ಟಪಡಲಿಕ್ಕೆ ಹಾಗೂ ಒಟ್ಟಿಗೇ ಇರಲಿಕ್ಕಾಗಿ ಎಂಬಂತೆ ಇದ್ದಾರೆ. ಕಷ್ಟ-ಸುಖಗಳಲ್ಲಿ ಇಬ್ಬರೂ ಒಟ್ಟಾಗಿಯೇ ಇರುತ್ತಾರೆ. 

ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಮತ್ತು ಸಂಗೀತಾ ಜೋಡಿಯ ಬಗ್ಗೆ ಭಯವೂ ಇದೆ. ಏಕೆಂದರೆ, ಕಾರ್ತಿಕ್-ಸಂಗೀತಾ ಇಬ್ಬರೂ ಟಾಸ್ಕ್ ಅಥವಾ ಮಾತುಕತೆ ಯಾವುದೇ ಬಂದರೂ ಸ್ಟ್ರಾಂಗ್ ಆಗಿ ಇದ್ದಾರೆ. ಜತೆಗೆ, ಇಬ್ಬರೂ ಒಟ್ಟಿಗೇ ಹೋರಾಡುತ್ತಾರೆ. 

ಅಂದಹಾಗೆ, ಬಿಗ್ ಬಾಸ್ ಏನೆಲ್ಲ ನಡೆಯುತ್ತಿದೆ ಎಂಬುದನ್ನು ತಿಳಿಯಲು ನೀವು ಮಾಡಬೇಕಾಗಿದ್ದು ಇಷ್ಟೇ.. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ 9.00 ಕ್ಕೆ ವೀಕ್ಷಿಸಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories