ಒಲವಿನ ನಿಲ್ದಾಣ ಸೀರಿಯಲ್ ಸಿದ್ಧಾಂತ್ ಅಮ್ಮ ನಿರುಪಮಾ ಸಖತ್ ಸ್ಟೈಲಿಶ್!

Published : Oct 29, 2023, 05:53 PM IST

ಒಲವಿನ ನಿಲ್ದಾಣ ಸೀರಿಯಲ್ ನಲ್ಲಿ ಸಿದ್ಧಾಂತ್ ಅಮ್ಮ ನಿರುಪಮಾ ಆಗಿ ನಟಿಸುತ್ತಿರುವ ನಟಿ ನಿಜ ಜೀವನದಲ್ಲಿ ಸಖತ್ ಸ್ಟೈಲಿಶ್. ಇವರು ರಿಯಲ್ ಲೈಫ್ ಅಲ್ಲಿ ಹೇಗೆ ಇಲ್ಲಿದೆ ನೋಡಿ ಫುಲ್ ಮಾಹಿತಿ.   

PREV
19
ಒಲವಿನ ನಿಲ್ದಾಣ ಸೀರಿಯಲ್ ಸಿದ್ಧಾಂತ್ ಅಮ್ಮ ನಿರುಪಮಾ ಸಖತ್ ಸ್ಟೈಲಿಶ್!

ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ ಪ್ರಸಾರವಾಗುವ ಒಲವಿನ ನಿಲ್ದಾಣ ಸೀರಿಯಲ್ ತನ್ನ ವಿಭಿನ್ನ ಕಥೆಯಿಂದ ಜನರ ಮೆಚ್ಚುಗೆ ಪಡೆದಿದೆ. ಈ ಸೀರಿಯಲ್ ನ ಪಾತ್ರಗಳು ಸಹ ಜನರಿಗೆ ಇಷ್ಟವಾಗಿದೆ, ಅವುಗಳ ಒಂದು ಗಟ್ಟಿಯಾದ ಪಾತ್ರ ಅಂದ್ರೆ ನಿರುಪಮ. 
 

29

ಹೌದು, ನಾಯಕ ಸಿದ್ಧಾಂತ್ ತಾಯಿ ನಿರುಪಮಾ (Nirupama) ಪಾತ್ರ ತುಂಬಾನೆ ಸ್ಟ್ರಾಂಗ್ ಆಗಿರುವ ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ. ಮಗನ ಮೇಲೆ ತುಂಬಾನೆ ಪ್ರೀತಿ, ಆದರೆ ಕಂಟ್ರೋಲ್ ಜಾಸ್ತಿ, ಸೇಡನ್ನು ತನ್ನೊಳಗೆ ಇಟ್ಟುಕೊಂಡು ಕಣ್ಣಲ್ಲೆ ಸುಡುವ ಪಾತ್ರ ಇದು. 
 

39

ಕೋಪ, ಸೇಡು, ಪ್ರೀತಿ, ಕರುಣೆ ಹೀಗೆ ಎಲ್ಲಾ ರೀತಿಯ ಇಮೋಶನ್ ಗಳನ್ನು ಒಳಗೊಂಡ ನಿರುಪಮಾ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಸಿಮ್ರನ್ (Simran), ಇವರಿಗೆ ಶ್ಯಾಮ ಎನ್ನುವ ಹೆಸರೂ ಇದೆ. ಸೀರಿಯಲ್ ನಲ್ಲಿ ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ಇವರು ಸಖತ್ ಸ್ಟೈಲಿಶ್ ನಟಿ ಅಂದ್ರೆ ತಪ್ಪಲ್ಲ. 

49

ಈಗಾಗಲೇ ಮದುವೆಯಾಗಿ ಎದೆ ಎತ್ತರಕ್ಕೆ ಬೆಳೆದಿರುವ ಮೂರು ಮಕ್ಕಳ ತಾಯಿಯಾಗಿರುವ ಸಿಮ್ರನ್ ಅವರನ್ನ ನೋಡಿದ್ರೆ, ಈಗಷ್ಟೇ ಹರೆಯಕ್ಕೆ ಕಾಲಿಟ್ಟ ಯುವತಿಯಂತೆ ಕಾಣಿಸ್ತಾರೆ. ಸಿಮ್ರನ್ ಕೇವಲ ನಟಿ ಮಾತ್ರ ಅಲ್ಲ ಇವರು ಮಲ್ಟಿ ಟ್ಯಾಲೆಂಟೆಡ್ ಮಹಿಳೆ ಅನ್ನೋದು ಗೊತ್ತಾ? 

59

ಒಲವಿನ ನಿಲ್ದಾಣದ ನಿರುಪಮಾ ಆಗಿ ಗುರುತಿಸಿಕೊಂಡಿರುವ ಇವರು ನಟಿಯೂ ಹೌದು, ಜೊತೆಗೆ ಮಾಡೆಲ್, ಫ್ಯಾಷನ್ ಡಿಸೈನರ್, ಗೃಹಿಣಿ ಕೂಡ ಹೌದು. ಇವರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಾಡೆಲಿಂಗ್ (Modeling) ಫೋಟೋಗಳನ್ನು ಕಾಣಬಹುದು. 

69

ಫ್ಯಾಷನ್ ಡಿಸೈನರ್ (fashion designer) ಆಗಿರುವ ಸಿಮ್ರನ್ ಹಲವಾರು ಫ್ಯಾಷನ್ ಶೋಗಳಿಗೆ ಡಿಸೈನರ್ ಆಗಿಯೂ, ಮಾಡೆಲ್ ಆಗಿಯೂ ಜನಪ್ರಿಯತೆ ಪಡೆದಿದ್ದಾರೆ. ಇವರು ಸಾಕಷ್ಟು ಫ್ಯಾಷನ್ ಶೋಗಳಲ್ಲಿ ರ್ಯಾಂಪ್ ವಾಕ್ ಕೂಡ ಮಾಡಿದ್ದಾರೆ. ಜೊತೆಗೆ ಹಲವು ಜಾಹೀರಾತುಗಳಲ್ಲೂ ನಟಿಸಿದ್ದಾರೆ. 

79

ಸಿಮ್ರನ್ ಕನ್ನಡ ಸೀರಿಯಲ್ ಜೊತೆಗೆ ಹಿಂದಿ ಸೀರಿಯಲ್ ನಲ್ಲೂ ನಟಿಸಿದ್ದಾರೆ. ಇವರು ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಇವರೊಬ್ಬ ಬಹುಭಾಷಾ ಕಲಾವಿದೆ ಅನ್ನೋದನ್ನು ಸಹ ತೋರಿಸಿಕೊಟ್ಟಿದ್ದಾರೆ. 

89

ಇವರ ಸೌಂದರ್ಯದ ಗುಟ್ಟು ಯೋಗ ಅಂತಾನೆ ಹೇಳಬಹುದು. ಯಾಕಂದ್ರೆ ಇವರ ಸೋಶಿಯಲ್ ಮೀಡಿಯಾ ನೋಡಿದ್ರೆ ಹಲವಾರು ಯೋಗ ಮಾಡುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹಾಗಾಗಿ ಈ ವಯಸ್ಸಲ್ಲೂ, ಮೂರು ಮಕ್ಕಳ ತಾಯಿಯಾದರೂ ಅದೇ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. 

99

ಆರೋಗ್ಯ ಮತ್ತು ಫಿಟ್ನೆಸ್ (fitness) ಬಗ್ಗೆ ತುಂಬಾನೆ ಕಾಳಜಿ ವಹಿಸುವ ಇವರು ವರ್ಕೌಟ್ ಮಾಡೊದನ್ನು ಮಿಸ್ ಮಾಡಲ್ಲ ಅಂತೆ, ಜೊತೆಗೆ ಇವರು ಹೆಚ್ಚಾಗಿ ವೇಗನ್ ಆಹಾರಗಳನ್ನೆ ತಿಂತಾರೆ ಅಂತೆ. ಈ ಬಗ್ಗೆ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಇವರು ಮಾಹಿತಿ ನೀಡಿದ್ದಾರೆ. 

Read more Photos on
click me!

Recommended Stories