20 ವರ್ಷಗಳಿಂದ ಲೀವ್‌ಇನ್‌ನಲ್ಲಿದ್ದರೂ ಇನ್ನೂ ಮದುವೆಯಾಗಿಲ್ಲ ಕಿರುತೆರೆಯ ಅತ್ತಿಗೆ ಮೈದುನ ಜೋಡಿ
First Published | Aug 21, 2022, 5:24 PM ISTಲಿವ್-ಇನ್ ಸಂಬಂಧದ ತುಂಬಾ ಕಾಮಾನ್ ಆದರೂ ಸುಮಾರು 20 ವರ್ಷಗಳಿಂದ ಮದುವೆಯಾಗದೆ ಲಿವ್-ಇನ್‌ನಲ್ಲಿ ವಾಸಿಸುತ್ತಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ. ಅಷ್ಟೇ ಅಲ್ಲ, ಅವರಿಗೆ ಮದುವೆಯ ಯೋಜನೆಯಾಗಲಿ, ಮಕ್ಕಳನ್ನು ಹೊಂದುವ ಉದ್ದೇಶವಾಗಲಿ ಇಲ್ಲ. ಆಶ್ಲೇಷಾ ಸಾವಂತ್ ಮತ್ತು ಸಂದೀಪ್ ಬಸ್ವನ (Sandeep Baswana Ashlesha Savant ) ಇಬ್ಬರೂ ಟಿವಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದಾರೆ ಮತ್ತು ಇಬ್ಬರೂ ತೆರೆಯ ಮೇಲೆ ಅತ್ತಿಗೆ ಮತ್ತು ಮೈದುನನ ಪಾತ್ರವನ್ನು ನಿರ್ವಹಿಸಿದ್ದಾರೆ. ಸಂದೀಪ್ ಮತ್ತು ಆಶ್ಲೇಷಾ ಕ್ಯುಂಕಿ. ಸಾಸ್ ಭಿ ಕಭಿ ಬಹು ಥಿ ಧಾರಾವಾಹಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಧಾರಾವಾಹಿಯಲ್ಲಿ ಇಬ್ಬರು ದೇವರ್ ಬಾಬಿ ಪಾತ್ರವಾಗಿ ಕಾಣಿಸಿಕೊಂಡಿದ್ದರು. ಧಾರಾವಾಹಿಯ ಸೆಟ್‌ಗಳಲ್ಲಿ, ಇಬ್ಬರು ಮೊದಲು ಸ್ನೇಹಿತರಾದರು, ನಂತರ ಪ್ರೀತಿಸುತ್ತಿದ್ದರು ಮತ್ತು ಅಂದಿನಿಂದ ಇಬ್ಬರೂ ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ದಂಪತಿಗಳು ತಾವು ಮದುವೆಯಿಲ್ಲದೆ ಸಂತೋಷವಾಗಿದ್ದೇವೆ ಮತ್ತು ಮುಂದೆ ಮದುವೆಯ ಯೋಜನೆಗಳಿಲ್ಲ ಎಂದು ಹೇಳಿದರು. ಸಂದೀಪ್ ಬಸ್ವನ ಮತ್ತು ಆಶ್ಲೇಷಾ ಸಾವಂತ್ ಅವರು ಮದುವೆಯಾಗದೆ ತಮ್ಮನ್ನು ಪತಿ-ಪತ್ನಿ ಎಂದು ಹೇಗೆ ಪರಿಗಣಿಸುತ್ತಾರೆ ಎಂಬುದನ್ನು ಕೆಳಗೆ ಓದಿ.