ಕಿರುತೆರೆ ಕಲಾವಿದರು ದೇವರ ದರ್ಶನದಲ್ಲಿ ಬ್ಯುಸಿ!

First Published | Sep 18, 2021, 4:34 PM IST

ದೀಪಿಕಾ ದಾಸ್, ತರಂಗ ವಿಶ್ವ, ಭವ್ಯಾ ಗೌಡ, ನಿರಂಜನ್ ದೇಶಪಾಂಡೆ ಸೇರಿದಂತೆ ಅನೇಕ ಕಿರುತೆರೆ ಕಲಾವಿದರು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಧಾರಾವಾಹಿ ಚಿತ್ರೀಕರಣ, ಅವಾರ್ಡ್‌ ಶೋ, ಸಂಘರ್ಷ, ರಿಯಾಲಿಟಿ ಶೋ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಡುವೆಯೂ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ಸಮಯ ಕಳೆಯುತ್ತಾರೆ ಕೆಲವು ಕಿರುತೆರೆ ಕಲಾವಿದರು. ಇನ್‌ಸ್ಟಾಗ್ರಾಂ ಆ್ಯಪ್ ಬಳಸುವ ಈ ಸ್ಟಾರ್ಸ್ ತಮ್ಮ ಇಷ್ಟ ದೈವನ ದರ್ಶನ ಪಡೆದಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ. 

ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಆಗಸ್ಟ್‌ ಕೊನೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕ ಭೇಟಿ ನೀಡಿದ್ದಾರೆ. ದೇವರ ದರ್ಶನ ಪಡೆದುಕೊಂಡು ಹೊರ ಬಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮ್ಯಾಜಿಕ್ ಬಾಕ್ಸ್‌ನಿಂದ ಖರೀದಿಸಿರುವ ಬಟ್ಟೆಯನ್ನು ಧರಿಸಿರುವೆ ಎಂದು ಬರೆದುಕೊಂಡಿದ್ದಾರೆ. 

Tap to resize

ಹಾಸ್ಯ ನಟ ತರಂಗ ವಿಶ್ವ ಇಡೀ ಕುಟುಂಬ ಸಮೇತರಾಗಿ ಸೌತಡ್ಕ ಗಣಪತಿ,ಗೊಮ್ಮಟೇಶ್ವರ, ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ವಿಶ್ವ ಅವರು ಕೊನೆಯದಾಗಿ ಸ್ಟಾರ್ ಸುವರ್ಣ ವಾಹಿನಿಯ ಕುಕ್ಕು ವಿತ್ ಕಿರಿಕ್ ಶೋನಲ್ಲಿ ಕಾಣಿಸಿಕೊಂಡಿದ್ದರು.

ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. 'ಓಂ ತತ್‌ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ: ಪ್ರಚೋದಯಾತ್,' ಜಗತ್ತಿನ ಶ್ರೇಷ್ಠ ಸೆಲೆಬ್ರಿಟಿಯ ದರ್ಶನವಾಯಿತು, ಪರಶಿವ ಸಕಲರಿಗೂ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ,' ಎಂದು ರಾಜೇಶ್ ಬರೆದುಕೊಂಡಿದ್ದಾರೆ. 

ಗೀತಾ ಧಾರಾವಾಹಿ ನಟಿ ಭವ್ಯಾ ಗೌಡ ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಮಿನಿ ಸೀಸನ್‌ ಮುಗಿಸಿ ಹೊರ ಬಂದ ನಂತರ ಬಿಳಿ ಬಣ್ಣದ ಹೊಸ ಕಾರು ಖರೀದಿಸಿದ್ದಾರೆ. ಮೈಸೂರು ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. 

ನಿರೂಪಕ, ನಟ ನಿರಂಜನ್ ದೇಶಪಾಂಡೆ ಬಿಗ್ ಬಾಸ್ ಮಿನಿ ಸೀಸನ್‌ ನಂತರ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. 'ಜೈ ಗುರು ರಾಘವೇಂದ್ರ ಗುರು ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ ಎಲ್ಲರಿಗೂ ಆ ರಾಘವೇಂದ್ರ ಸ್ವಾಮಿಗಳು ಒಳ್ಳೇದು ಮಾಡಲಿ ವಿಳಾಸ - ಹೊನ್ನವ ಮಂತ್ರಾಲಯ ಮಂದಿರ,' ಎಂದು ಬರೆದುಕೊಂಡಿದ್ದಾರೆ.

Latest Videos

click me!