ನಾಗಿಣಿ ಸೀರಿಯಲ್ ಗೆ 8 ವರ್ಷ; ಮಧುರ ನೆನಪುಗಳ ಮೆಲುಕು ಹಾಕಿದ ದೀಪಿಕಾ ದಾಸ್

First Published | Feb 9, 2024, 5:57 PM IST

ನಾಗಿಣಿ ಸೀರಿಯಲ್ ಮತ್ತು ಬಿಗ್ ಬಾಸ್ ಕನ್ನಡದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದ ನಟಿ ದೀಪಿಕಾ ದಾಸ್ ನಾಗಿಣಿ ಸೀರಿಯಲ್ ನ ಮಧುರ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 
 

ನಟಿ ದೀಪಿಕಾ ದಾಸ್ (Deepika Das) ಕನ್ನಡಿಗರಿಗೆ ಪರಿಚಿತರಾಗಿದ್ದೆ ನಾಗಿಣಿ ಸೀರಿಯಲ್ ಮೂಲಕ. ನಾಗಿಣಿ ಸೀರಿಯಲ್ ನಲ್ಲಿ ಅಮೃತಾ ಆಗಿ ನಟಿಸುವ ಮೂಲಕ ಜನರಿಗೆ ಚಿರಪರಿಚಿತರಾಗಿದ್ದರು. 
 

ಬಳಿಕ ಬಿಗ್ ಬಾಸ್ ನ (Bigg Boss) ಎರಡು ಸೀಸನ್ ಗಳಲ್ಲಿ ಮಿಂಚಿದ ದೀಪಿಕಾ ದಾಸ್ ಲೇಡಿ ಬಾಸ್ ಎಂದೇ ಖ್ಯಾತಿ ಪಡೆದಿದ್ದರು. ಆದರೂ ಇಂದಿಗೂ ಜನರು ದೀಪಿಕಾ ದಾಸ್ ಅವರನ್ನು ನಾಗಿಣಿಯಾಗಿ ನೆನಪು ಮಾಡಿಕೊಳ್ಳುತ್ತಿದ್ದಾರೆ. 

Tap to resize

ಇದೀಗ ದೀಪಿಕಾ ದಾಸ್ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು, ನಾಗಿಣಿ ಸೀರಿಯಲ್ (Nagini Serial) ಮೊದಲಿಗೆ ಟೆಲಿಕಾಸ್ಟ್ ಆಗಿ ಇದೀಗ 8 ವರ್ಷಗಳು ಕಳೆದಿದ್ದು, ಆ ಮಧುರ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 
 

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social media) ನಾಗಿಣಿ ಸೀರಿಯಲ್ ಫೋಟೋಗಳನ್ನು ಹಂಚಿಕೊಂಡಿದ್ದು, ಇದು ಆನಿವರ್ಸರಿ ಸೆಲೆಬ್ರೇಷನ್, ಎಲ್ಲವೂ ಈ ದಿನದಂದು ಆರಂಭವಾಯಿತು ಎಂದು ಬರೆದುಕೊಂಡಿದ್ದಾರೆ. 
 

ಫೆಬ್ರವರಿ 8 ನನಗೆ ವಿಶೇಷ ದಿನವಾಗಿದೆ. ಇದು ನನಗೆ ಪ್ರೀತಿ ಮತ್ತು ಜೀವನ ಎರಡನ್ನೂ ನೀಡಿದ್ದೆ. ಅದಕ್ಕೆ ನಾನು ಧನ್ಯನಾಗಿದ್ದೇನೆ ಎಂದು ಎಂಟು ವರ್ಷಗಳ ಹಿಂದೆ ಆರಂಭವಾದ ತಮ್ಮ ನಟನಾ ಪಯಣವನ್ನು (acting journey) ದೀಪಿಕಾ ದಾಸ್ ಮೆಲುಕು ಹಾಕಿದ್ದಾರೆ. 

ಜೊತೆಗೆ ಇವತ್ತು ನಾನು ಏನಾಗಿದ್ದೇನೆ ಅದನ್ನ ಮಾಡಿದ್ದಕ್ಕೆ ಧನ್ಯವಾದಗಳು. ನನ್ನ ಇಲ್ಲಿವರೆಗಿನ ಪ್ರಯಣದಲ್ಲಿ ನೀವು ಸದಾ ಪ್ರೀತಿ, ಬೆಂಬಲ ನೀಡುತ್ತಲೇ ಬಂದಿದ್ದೀರಿ.  ಇದೀಗ ಎಂಟನೇ ವರ್ಷ. ಅಭಿಮಾನಿಗಳಿಗೆ ಸ್ಪೆಷಲ್ ಗ್ರಾಟಿಟ್ಯೂಡ್ ಎಂದು ಬರೆದುಕೊಂಡಿದ್ದಾರೆ. 

ನಾಗಿಣಿ ಧಾರವಾಹಿ 2016 ಫ್ರಬ್ರವರಿ 8ರಂದು ಪ್ರಸಾರ ಆರಂಬಿಸಿ ಸುಮಾರು 1060ಕ್ಕೂ ಅಧಿಕ ಸಂಚಿಕೆಗಳು ಮೂಡಿ ಬಂದಿತ್ತು. ಈ ಸೀರಿಯಲ್ ನಲ್ಲಿ ದೀಪಿಕಾ ದಾಸ್ ನಾಗಿಣಿಯಾಗಿದ್ದರೆ, ದೀಕ್ಷಿತ್ ಶೆಟ್ಟಿ ಲೀಡ್ ರೋಲ್ ನಲ್ಲಿ ಅರ್ಜುನ್ ಆಗಿ ನಟಿಸಿ ಭರ್ಜರಿ ಮನರಂಜನೆ ನೀಡಿದ್ದರು. 

Latest Videos

click me!