Bhoomi Shetty: ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ಭೂಮಿ ಶೆಟ್ಟಿ

First Published | Feb 9, 2024, 12:00 PM IST

ಸೋಶಿಯಲ್ ಮೀಡಿಯಾ ಮೂಲಕ ಸದಾ ಸುದ್ದಿಯಲ್ಲಿರುವ ಭೂಮಿ ಶೆಟ್ಟಿ ಇದೀಗ ಬೋಲ್ಡ್ ಫೋಟೋ ಶೂಟ್ ಮಾಡಿಸುವ ಮೂಲಕ ಸದ್ದು ಮಾಡ್ತಿದ್ದಾರೆ. 

ಕಿನ್ನರಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟು ಬಳಿಕ ಬಿಗ್ ಬಾಸ್ ಸೀಸನ್ 7 (Bigg Boss Season 7)ನಲ್ಲಿ ಮಿಂಚಿದ ರಾಯಲ್ ಶೆಟ್ಟಿ ಎಂದೇ ಖ್ಯಾತಿ ಪಡೆದ ನಟಿ ಭೂಮಿ ಶೆಟ್ಟಿ. 
 

ಕನ್ನಡದಲ್ಲಿ ಕಿನ್ನರಿ ಧಾರಾವಾಹಿ ಬಳಿಕ ತೆಲುಗಿನ 'ನಿನ್ನೆ ಪೆಳ್ಳಾಡಾತಾ' ಹಾಗೂ 'ಅಕ್ಕ ಚೆಲುಲು' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು. ಇದೀಗ ಸಿನಿಮಾಗಳಲ್ಲಿ ಮಿಂಚಲು ರೆಡಿಯಾಗ್ತಿದ್ದಾರೆ ಭೂಮಿ. 
 

Tap to resize

ಬಿಗ್ ಬಾಸ್ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಭೂಮಿ ಶೆಟ್ಟಿ ಸದ್ಯ ತೆಲುಗು, ತಮಿಳು ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದು, ಇತ್ತೀಚೆಗಷ್ಟೇ ತಮ್ಮ ಹೊಸ ತೆಲುಗು ಸಿನಿಮಾದ (telugu film) ಪೋಸ್ಟರ್ ಬಿಡುಗಡೆ ಮಾಡಿದ್ದರು. 

ಭಾಷೆ ಯಾವುದೇ ಆದರೂ, ಒಳ್ಳೆಯ ಪಾತ್ರ ಸಿಕ್ಕರೆ, ತಾನು ನಟಿಸಲು ರೆಡಿ ಎನ್ನುವ ಭೂಮಿ ಶೆಟ್ಟಿ, ಇತರ ಭಾಷೆಯ ಬಗ್ಗೆ ಭಯ ಇದ್ದರೂ ಸಹ ಬೇಗನೆ ಭಾಷೆಗಳನ್ನು ಸುಲಲಿತವಾಗಿ ಕಲಿಯುವ ಕಾನ್ಫಿಡೆನ್ಸ್ ಹೊಂದಿದ್ದಾರೆ. 
 

ಕೊರೊನಾ ಲಾಕ್ ಡೌನ್ ಸಮಯದಲ್ಲಿ ಬಿಡುಗಡೆಯಾದ 'ಇಕ್ಕಟ್' ಸಿನಿಮಾದಲ್ಲಿ ನಾಗಭೂಷಣ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇನ್ನು 'ವಾಸಂತಿ' ಎನ್ನುವ ಕಲಾತ್ಮಕ ಸಿನಿಮಾ, ವೆಬ್ ಸೀರಿಸ್ ಗಳಲ್ಲೂ ನಟಿಸಿ ಭೂಮಿ ಸುದ್ದಿಯಾಗಿದ್ದರು. 
 

ಇದೀಗ ಭೂಮಿ ಶೆಟ್ಟಿ (Bhoomi Shetty) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಫೋಟೋಸ್ ನೋಡಿದ ಅಭಿಮಾನಿಗಳ್ಯ್  ಹಿಂಗ್ಯಾಕ್ ಮಾಡಕತ್ತಿ ಭೂಮಿ ಎಂದು ಕೇಳ್ತಿದ್ದಾರೆ. 
 

ಹೊಸ ಫೋಟೋ ಶೂಟ್ ನಲ್ಲಿ ಭೂಮಿ ಕಪ್ಪು ಬಣ್ಣದ ಬ್ರೇಸರ್ ಮತ್ತು ಬಿಳಿ ಬಣ್ಣದ ಶಾರ್ಟ್ಸ್ ಧರಿಸಿದ್ದು, ಅದರ ಮೇಲೆ ಪೂರ್ತಿ ನೆಟೆಡ್ ಆಗಿರುವ ಟಾಪ್ ಧರಿಸಿದ್ದಾರೆ. ಜೊತೆಗೆ ಡಿಸೈಡ್ ಮೈ ವೈಬ್ (Decide my vibe)ಎಂದು ಕ್ಯಾಪ್ಶನ್ ನೀಡಿದ್ದಾರೆ. 
 

ಇನ್ನು ಭೂಮಿ ಶೆಟ್ಟಿ ಹೊಸ ಫೋಟೋಗಳಿಗೆ ನಂಗೆ ಇದ್ಯಾಕೋ ಇಷ್ಟ ಆಗ್ತಿಲ್ಲ ಕಣಕ್ಕ, ಉಫ್ ವಾಟ್ ಎ ವೈಬ್, ತುಂಬಾನೆ ಹಾಟ್ ಆಗಿ ಕಾಣ್ತಿದ್ದೀರಿ, ಯಾಕೆ ಬೇಜಾರ್ ಅಲ್ಲಿದ್ದೀರಾ?, ಮೊದಲು ಪೋಸ್ ಮಾಡೋದು ಕಲಿರಿ ಎಂದು ವಿವಿಧ ರೀತಿಯಲ್ಲಿ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. 
 

click me!