ಮರಿಯಾನೆ ಅಂತಾದರೂ ಹೇಳಿ, ಬಾಡಿ ಶೇಮಿಂಗ್‌ ಟ್ರೋಲ್ಸ್ ಇಂಪಾಗಿರುತ್ತೆ: ನಂಜುಂಡಿ ನಟಿ

First Published | Jul 14, 2023, 5:30 PM IST

ನಟಿ ಡೆಬಿನಾ ಬ್ಯಾನರ್ಜಿ (Debina Bonerjee) ತಮ್ಮ ದೇಹದ ಆಕಾರ ಮತ್ತು ಹೆಚ್ಚಿದ ತೂಕಕ್ಕಾಗಿ ತಮ್ಮ ಮೇಲೆ ಆಕ್ರಮಣ ಮಾಡುವ ಟ್ರೋಲ್ಸ್‌ಗೆ ಇತ್ತೀಚಿನ ವ್ಲಾಗ್‌ನಲ್ಲಿ,ಪ್ರತಿಕ್ರಿಯಿಸಿದ್ದಾರೆ. ತಮ್ಮ ದಿನಚರಿ ಬಗ್ಗೆ ವಿವರಗಳನ್ನು ಸಹ ಹಂಚಿಕೊಂಡಿದ್ದಾರೆ. ಟ್ರೋಲ್ಸ್‌ನಲ್ಲಿ ಅವರನ್ನು ಸಣ್ಣ ಆನೆ, ಮರಿಯಾನೆ ಕರೆಯುತ್ತಾರೆ ಎಂದು ಡೆಬಿನಾ ಬಹಿರಂಗಪಡಿಸಿದ್ದಾರೆ.

ನಟಿ ಡೆಬಿನಾ ಬ್ಯಾನರ್ಜಿ ತಮಿಳು ಮತ್ತು ಹಿಂದಿ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬಳುಕುವ ಬಳ್ಳಿ ಎನ್ನುವಂಥ ಫಿಸಿಕ್ ಇಲ್ಲದೇ ಹೋದರೂ ಅಪಾರ ಜನಪ್ರಿಯತೆ ಇರೋ ನಟಿ. 

ಅವರು 2008ರ ಟಿವಿ ಶೋ ರಾಮಾಯಣದಲ್ಲಿ ಸೀತಾ ಮತ್ತು ಲಕ್ಷ್ಮಿ ಪಾತ್ರದ ಮೂಲಕ ಪ್ರಸಿದ್ಧರಾದರು. ಕನ್ನಡದ ಖ್ಯಾತ ನಟ ಶಿವರಾಜ್‌ಕುಮಾರ್ ಜೊತೆ ನಂಜುಂಡಿ ಚಿತ್ರದಲ್ಲಿ ಸಹ ಡೆಬಿನಾ ಬ್ಯಾನರ್ಜಿ ನಟಿಸಿದ್ದಾರೆ.

Tap to resize

Debina Bonerjee

ಅವರು ಇತ್ತೀಚೆಗೆ ತಮ್ಮ ಎರಡನೇ ಮಗು, ಮಗಳು ದಿವಿಶಾಳನ್ನು ಹೊಂದಿದ್ದಾರೆ ಮತ್ತು ಪ್ರಸ್ತುತ ಡೆಬಿನಾ ಅವರು ತಮ್ಮ  ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದಾರೆ. ಡೆಬಿನಾ ಪ್ರೆಗ್ನೆಂಸಿ ನಂತರದ ತೂಕ ನಷ್ಟ ಮತ್ತು ಬಾಡಿ ಶೇಮಿಂಗ್‌ ಟ್ರೋಲ್‌ಗಳ  ಬಗ್ಗೆ ಮಾತನಾಡುತ್ತಾರೆ

ತಮ್ಮ ಇತ್ತೀಚಿನ ವ್ಲಾಗ್‌ನಲ್ಲಿ 'ನೀವೆಲ್ಲರೂ 'ಛೋಟಿ ಹಾಥಿ', 'ಮಿನಿ ಹಾಥಿ' ಎಂದು ಕಾಮೆಂಟ್ ಮಾಡುತ್ತೀರಿ, ಅವು ನನ್ನ ಕಿವಿಗೆ ಇಂಪಾಗಿಯೇ ಕೇಳಿಸುತ್ತದೆ. ಅದನ್ನು ಕೇಳಿದಾಗ ನಿಲ್ಲಿಸಬೇಡ. ಇನ್ನೂ ಹೆಚ್ಚು ಕೆಲಸ ಮಾಡು ಎಂದು ನಾನು ಯೋಚಿಸುತ್ತೇನೆ' ಎಂದಿದ್ದಾರೆ.  

'ಸಮಾಜ ನಿಂದಿಸಿದಾಗ, ನೀವು ಅದನ್ನು ಧನಾತ್ಮಕವಾಗಿ ತೆಗೆದುಕೊಂಡು ನಿಮ್ಮ ಅತ್ಯುತ್ತಮವಾದ ಕಡೆಗೆ ಕೆಲಸ ಮಾಡುತ್ತೀರಿ. ಹೊಟ್ಟೆ ಕೆಳ ಭಾಗದಲ್ಲಿರುವ ಕೊಬ್ಬು ಗಟ್ಟಿಯಾಗುತ್ತದೆ. ಅದನ್ನು ಕಡಿಮೆ ಮಾಡುವುದು ಅತ್ಯಂತ ಕಷ್ಟ. ಆದರೆ ನಾನು ಅದನ್ನು ಮಾಡುತ್ತೇನೆ. ನಿಂದನೆಗಳನ್ನು ಮಾಡಿ ನಂತರ, ನನಗೆ ಹೆಚ್ಚಿನ ಪ್ರೇರಣೆ ಸಿಗುತ್ತದೆ, ನಾನು ಸಡಿಲವಾದ ಬಟ್ಟೆಗಳನ್ನು ಧರಿಸಿದರೆ, ಅದು ಮರೆ ಮಾಚುತ್ತದೆ, ಆದರೆ ನಾನು ಮರೆಮಾಚಲು ಬಯಸುವುದಿಲ್ಲ,  ಬಿಕಿನಿ ಧರಿಸಲೂ ಹಿಂದೇಟು ಹಾಕೋಲ್ಲ. ಮಾಲ್ಡೀವ್ಸ್‌ನಲ್ಲಿ ಮಾಡಿದಂತೆ  ದೇಹ ತೋರಿಸಲು ಬಯಸುತ್ತೇನೆ. ನನ್ನದು ಅದೇ ಕನಸು. ವರ್ಕೌಟ್‌ ಸಹ ಮಾಡುತ್ತೇನೆ,' ಎಂದಿದ್ದಾರೆ ಡೆಬಿನಾ. 

ಡೆಬಿನಾ ಬ್ಯಾನರ್ಜಿ ತಮ್ಮ ಮಾತೃತ್ವದ ಪ್ರಯಾಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಮತ್ತು ಅವರ ಇಬ್ಬರು ಪುಟ್ಟ ಹೆಣ್ಣುಮಕ್ಕಳಾದ ಲಿಯಾನಾ ಮತ್ತು ದಿವಿಶಾ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಆಗಾಗ್ಗೆ ಅಪ್ಡೇಟ್ಸ್‌ ಹಂಚಿಕೊಳ್ಳುತ್ತಾರೆ.

'ನಂಗೆ ಕೊಬ್ಬಿಳಿಸಿಕೊಳ್ಳಲು ಆಗುತ್ತಿಲ್ಲ. ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಫಿಸಿಕ್ ಬಗ್ಗೆ ಒಂದಷ್ಟು ಕಾಮೆಂಟ್ಸ್ ಬರುತ್ತಿವೆ. ಈ ಎಲ್ಲಾ ವಿಷಯಗಳು ನಿಮ್ಮ ಮೇಲೆ ಒತ್ತಡ ಉಂಟುಮಾಡುತ್ತವೆ. ಆದರೆ ಇದು ನೀವು ಆನಂದಿಸಬೇಕಾದ ಒಂದು ಹಂತ, ಎಂದು ನಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Latest Videos

click me!