ನಮ್ರತಾ ಜೊತೆ ಸೇರಿದ ಸಂಗೀತಾ! ಈ ಜೋಡಿ ನೋಡಿ ಜನ ಏನ್ ಹೇಳ್ತಿದ್ದಾರೆ ಗೊತ್ತಾ?

Published : Nov 22, 2023, 04:16 PM IST

ಬಿಗ್ ಬಾಸ್ ಸೀಸನ್ 10 ಜಗಳ, ಗಲಾಟೆ, ಮನಸ್ಥಾಪ ಎಲ್ಲವೂ ದಿನದಿಂದ ದಿನಕ್ಕೆ ಸದ್ದು ಮಾಡುತ್ತಿದೆ. ಇದೀಗ ಸಂಗೀತಾ ಇನ್ನೊಂದು ತಂಡದ ಜೊತೆ ಹೋಗಿ ನಮ್ರತಾ ಜೊತೆ ಸೇರಿಕೊಂಡಿದ್ದು, ಜನರು  ಏನೇನು ಹೇಳ್ತಿದ್ದಾರೆ ಗೊತ್ತಾ?   

PREV
19
ನಮ್ರತಾ ಜೊತೆ ಸೇರಿದ ಸಂಗೀತಾ!  ಈ ಜೋಡಿ ನೋಡಿ ಜನ ಏನ್ ಹೇಳ್ತಿದ್ದಾರೆ ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss season 10)  ಈ ಬಾರಿ ಸುದ್ದಿಯಾಗಿರೋದೆ ಜಗಳದಿಂದ. ಒಬ್ಬರ ವಿರುದ್ಧ ಒಬ್ಬರು ಜಿದ್ದಿಗೆ ಬಿದ್ದಂತೆ ಜಗಳ ಮಾಡುತ್ತಿರುತ್ತಾರೆ. ಇದರಿಂದ ಹೆಚ್ಚು ಸದ್ದು ಮಾಡುತ್ತಿರುವ ಬಿಗ್ ಬಾಸ್ ನಲ್ಲಿ ಸದ್ಯ ಸಂಗೀತಾ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. 

29

ಸಂಗೀತಾ ಸದ್ಯ ವಿನಯ್ ಅವರ ಗುಂಪು ಸೇರಿ ನಮ್ರತಾಗೆ ತುಂಬಾ ಹತ್ತಿರದಲ್ಲಿರುವಂತೆ ಪ್ರೋಮೋದಲ್ಲಿ ತೋರಿಸಲಾಗುತ್ತಿದೆ. ಎದುರಾಳಿ ತಂಡದ ವಿರುದ್ಧ ಏನು ಮಾಡಬೇಕು ಅದನ್ನೇ ಸಂಗೀತಾ ಮಾಡ್ತಿದ್ದಾರೆ. ಆದರೆ ಸಂಗೀತಾ ಮತ್ತು ನಮ್ರತಾ(Namratha Gowda) ಬಗ್ಗೆ ಜನ ಏನು ಹೇಳ್ತಿದ್ದಾರೆ ಗೊತ್ತಾ?  

39

ಯಾವುದೋ ಒಂದು ಟ್ರೋಲ್ ಪೇಜ್ ಸಂಗೀತಾ ಮತ್ತು ನಮ್ರತಾ ಫೋಟೋ ಹಾಕಿ, ನಿನ್ನೆ ಎಪಿಸೋಡ್ ನೋಡಿದ್ಮೇಲೆ ಇವರಿಬ್ಬರ ಬಗ್ಗೆ ಏನು ಹೇಳ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಬಿಗ್ ಬಾಸ್ ವೀಕ್ಷಕರು ತರಹೇವಾರಿ ಕಾಮೆಂಟ್ (comment) ಮಾಡಿದ್ದಾರೆ. 

49

ಸಂಗೀತಾ ಅವಕಾಶವಾದಿ. ಅವಳ ವೀಕ್ನೆಸ್ ನಮ್ರತಾಗೆ ಪ್ಲಸ್ ಪಾಯಿಂಟ್. ಒಟ್ಟಿನಲ್ಲಿ ಇಬ್ರೂ ಸ್ಯಾಡಿಸ್ಟಗಳು.ಆದರೆ ತನಿಷಾನ ಏನೂ ಮಾಡಕ್ಕಾಗಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ, ಮತ್ತೊಬ್ರು ನಮ್ರತಾ ಚಮಚದಿಂದ ಸೌಟು, ಸಂಗೀತಾ ಕ್ರಶ್ ಇಂದ ಕಸ ಆದ್ರು ಎಂದಿದ್ದಾರೆ.

59

ಮತ್ತೊಬ್ಬರು ಕಾಮೆಂಟ್ ಮಾಡಿ ಒಂದೇ ವಾಕ್ಯದಲ್ಲಿ ಹೇಳೋದಾದ್ರೆ ಇಬ್ಬರೂ ಚಮಚಾಗಳೇ. ನಮ್ರತಾ ಅಂತೂ ಈ ಪೂರಾ ಸೀಸನ್ ಚಮಚಾ ಆಗಿ ಉಳಿತೀನಿ ಅಂತ ಫಿಕ್ಸ್ ಆಗಿದ್ದಾಳೆ. ಆದ್ರೆ ಸಂಗೀತ ನಿನಗೆ ಏನ್ ಬಂದಿತ್ತು? ಹೀಗೆ ಮಾಡೋದಿಕ್ಕೆ ಎಂದು ಪ್ರಶ್ನಿಸಿದ್ದಾರೆ. 
 

69

ಒಂದೂ ಸೌಟು ಇನ್ನೊಂದು ಚಮಚ, ಸ್ವಾರ್ಥಿಗಳು ಒಳ್ಳೆಯ ಪ್ರೆಂಡ್ ಆಗಲಿಕ್ಕೆ ಸಾದ್ಯವಿಲ್ಲ. ಎರಡು ತಲೆ ಹಾವು ಗಳು ಅವರು, ಇಬ್ರೂ ದೊಡ್ಡ ಬಕೆಟ್ ಗಳು. ಇಬ್ಬರೂ ಚೀಪ್ ಗೇಮ್ ಆಡ್ತಿದ್ದಾರೆ, ಮತ್ತೆ ಸಮರ್ಥನೆ ಕೊಡ್ತಾರೆ ಎಂದು ಒಬ್ಬರು ಹೇಳಿದ್ದಾರೆ. 
 

79

ಮತ್ತೊಬ್ಬರು ನಮ್ರತಾ ಮತ್ತು ಸಂಗೀತ ಸೇರಿ ಚಮಚ ಗ್ಯಾಂಗ್ ಕಟ್ಟಿದ್ದಾರೆ. ಸಂಗೀತ ಯಾವಾಗ ಆ ಗ್ರೂಪ್ ಗೆ ಹೋದ್ಲೋ ಅವಳಿಗೆ ಉಳಿಗಾಲ ಇಲ್ಲ, ಇದಕ್ಕಿಂತ ಬಿಗ್ ಬಾಸ್ ಇಂದ ಹೊರ ಬರೋದೆ ಒಳ್ಳೆಯದು. ಫ್ರೆಂಡ್ ಶಿಪ್ ಗೆ (friendship) ಬೆಲೆನೇ ಇಲ್ಲ ಎಂದು ಸಂಗೀತ ವಿರುದ್ಧ ಗುಡುಗಿದ್ದಾರೆ. 

89

ಇನ್ನೊಬ್ಬರು ಸಂಗೀತ ಹೀಗೆ ಅಂತ ಅಂದುಕೊಂಡಿರಲಿಲ್ಲ. ವಿನಯ್ ಗ್ರೂಪ್ ಅವರು ಅವರ ಫ್ರೆಂಡ್ ಶಿಪ್ ಮುಂದುವರಿಸ್ತಿದ್ದಾರೆ. ಯಾರೂ ಯಾರನ್ನೂ ಬಿಟ್ಟು ಕೊಟ್ಟಿಲ್ಲ ಇಲ್ಲಿವರೆ. ಆದರೆ ಸಂಗೀತ ಹೀಗೆ ಪಾರ್ಟಿ ಚೇಂಜ್ ಮಾಡ್ತಾರೆ ಅಂದು ಕೊಂಡಿರಲಿಲ್ಲ, ವೆರಿ ಬ್ಯಾಡ್ ಅಂದಿದ್ದಾರೆ. 

99

ಆದರೆ ನಿಜವಾಗ್ಲೂ ಆಗಿರೋದು ಏನು? ಪ್ರೋಮೋ ನೋಡಿನೇ ಜನ ಇಷ್ಟೊಂದು ಕಾಮೆಂಟ್ ಮಾಡ್ತಿದ್ದಾರೆ. ಆದರೆ ಗ್ರೂಪ್ ಮಾಡಿದ್ದು ಬಿಗ್ ಬಾಸ್, ಟಾಸ್ಕ್ ನೀಡಿದ್ದು ತಂಡದ ಸದಸ್ಯರು, ಅವರು ತಾವು ಯಾವ ಟೀಮಲ್ಲಿ ಇದ್ದಾರೆ, ಆ ಟೀಮ್ ನ ಆದೇಶ ಪಾಲಿಸಿ ತಮ್ಮ ಆಟ ಆಡೋದು ತಪ್ಪಾ? 

Read more Photos on
click me!

Recommended Stories