ಕುಸುಮ ಬೆಸ್ಟ್ ಅತ್ತೆ ಅಂತಿದ್ರು, ಈಗ ಇಂಥ ಅತ್ತೆ ಯಾರಿಗೂ ಬೇಡಪ್ಪಾ ಅಂತಿರೋದ್ಯಾಕೆ?

First Published | Jul 4, 2023, 6:18 PM IST

ಸೊಸೆಯನ್ನು ಓದಿಸಲು ಹೊರಟು, ಆಕೆಗಾಗಿ ಎಲ್ಲವನ್ನೂ ಮಾಡಲು ಹೊರಟು ಬೆಸ್ಟ್ ಅತ್ತೆ ಎಂದು ಅನಿಸಿಕೊಂಡಿದ್ದ ಭಾಗ್ಯಲಕ್ಷ್ಮಿ ಸೀರಿಯಲ್‌ನ ಅತ್ತೆ ಕುಸುಮಾ ಈಗ ಸಂಪೂರ್ಣ ಬದಲಾಗಿದ್ದು, ಜನ ಇಂಥ ಅತ್ತೆ ಯಾರಿಗೂ ಬೇಡಪ್ಪ ಎಂದು ಹೇಳುವಂತಾಗಿದೆ. 
 

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಜನರಲ್ಲಿ ನೋಡುವ ಕುತೂಹಲವನ್ನು ಹೆಚ್ಚಿಸಿತ್ತು. ಇತ್ತೀಚಿನ ದಿನದ ಎಪಿಸೋಡ್ ಗಳನ್ನು ನೋಡಿದ ಜನರು ಮಾತ್ರ ಅತ್ತೆ ಕುಸುಮಾಗೆ ಬೈಯ್ತಾ ಇದ್ದಾರೆ. 
 

ಒಂದು ಕಾಲದಲ್ಲಿ ಸೊಸೆಯನ್ನು ಓದಿಸಬೇಕೆಂದು ಪಣತೊಟ್ಟು ಅದಕ್ಕಾಗಿ ಪುಸ್ತಕಗಳನ್ನೆಲ್ಲಾ ತರಿಸಿ, ಸೊಸೆಯ ಓದಿಗೆ ಬೆಂಬಲವಾಗಿ ನಿಂತು ಮಗನ ವಿರುದ್ಧವೇ ತಿರುಗಿ ಬಿದ್ದಿದ್ದ ಕುಸುಮಾರನ್ನು ನೋಡಿ ಪ್ರೇಕ್ಷಕರು ಇದ್ದರೆ ಇಂತಹ ಅತ್ತೆ ಇರಬೇಕು. ಅತ್ತೆ -ಸೊಸೆ ಬಾಂಡಿಂಗ್ ಅಂದ್ರೆ ಹೀಗಿರಬೇಕು ಎಂದು ಹೇಳುತ್ತಿದ್ದರು. 
 

Tap to resize

ಈಗ ಕತೆಯಲ್ಲಿ ತಿರುವು ಸಿಕ್ಕಿದ್ದು, ತನ್ನ ಅಮ್ಮನ ವೀಕ್ ನೆಸ್ ಗೊತ್ತುಮಾಡಿಕೊಂಡಿರುವ ತಾಂಡವ್, ಮನೆಯವರೆದುರು ತಾನು ಒಳ್ಳೆಯವನಂತೆ ನಟಿಸುತ್ತಾ, ಭಾಗ್ಯನನ್ನು ಎಲ್ಲಾ ವಿಷಯದಲ್ಲೂ ವಹಿಸುತ್ತಾ, ಆಕೆಗೆ ಹೊಸ ಸೀರೆ, ಒಡವೆ ಕೊಡಿಸುತ್ತಾ ಉತ್ತಮ ಗಂಡ ಅನ್ನೋದನ್ನು ತೋರಿಸುತ್ತಿದ್ದಾನೆ. 
 

ಆದರೆ ಮಗನ ಈ ಬದಲಾವಣೆ ಕುಸುಮಾಗೆ ಸ್ಮಲ್ಪವೂ ಸಹಿಸಲು ಸಾಧ್ಯವಾಗ್ತಾನೆ ಇಲ್ಲ. ಮಗ ತನ್ನನ್ನು ಕಡೆಗಣಿಸ್ತಿದ್ದಾನೆ ಅನ್ನೋ ಯೋಚನೆ ತಲೆಯಲ್ಲಿ ಬಂದಿದ್ದು, ಅದನ್ನು ಮಗ ಮತ್ತು ಸೊಸೆಯ ವಿರುದ್ಧ ತಮ್ಮ ಮಾತಿನ ಬಾಣಗಳನ್ನು ಬಿಡುವ ಮೂಲಕ ತೋರಿಸ್ತಾ ಇದ್ದಾರೆ. ತಾಂಡವ್ ಗೆ ಬೇಕಾಗಿದ್ದಿದ್ದೂ ಇದೆ. 
 

ಕುಸುಮಾರ ಬೈಗುಳಗಳನ್ನು ಕೇಳಿ ಕೇಳಿ, ಸೊಸೆಯಿಂದ ಎಲ್ಲಾ ಕೆಲಸ ಮಾಡಿಸುತ್ತಾ ಅಧಿಕಾರ ಚಲಾಯಿಸುವ ರೀತಿ ನೋಡಿ ಇದೀಗ ಪ್ರೇಕ್ಷಕರೂ ಸಹ ಕಿಡಿ ಕಾರಿದ್ದು, ಯಾರಿಗೂ ಸಹ ಇಂತಹ ಅತ್ತೆ ಸಿಗಲೇಬಾರದಪ್ಪ, ಇಂತಹ ಅತ್ತೆ, ಇಂತ ಗಂಡ ಸಿಕ್ರೆ ಹೆಣ್ಮಕ್ಕಳ ಪಾಡೇನು ಎಂದು ಹೇಳುತ್ತಿದ್ದಾರೆ. 
 

ಕುಸುಮ ಅವರ ಕೈಕಾಲು ಸರಿ ಇದೆ ತಾನೇ ಮಾಡಿ ತಾವೇ ಕೆಲಸ ನಿಮ್ಮದೇ ಮನೆ ಅದು .. ಎಲ್ಲಾದಕ್ಕೂ ಸೊಸೆಯನ್ನು ಯಾಕೆ ದುಡಿಸುತೀರಾ? ದಯವಿಟ್ಟು ಕುಸುಮ ಪಾತ್ರವನ್ನ ಗಾಳಿ ಬಂದ ಕಡೆ ತೂರುವ ರೀತಿ ಮಾಡಬೇಡಿ.. ಹೀಗೆ ಹೋದರೆ ಆ ಪಾತ್ರ ಪಾತಾಳ ಸೇರುತ್ತೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 
 

ಈ ಕುಸುಮಾಗೆ ಭಾಗ್ಯ ಸೊಸೆನೋ ಇಲ್ಲ ಕೆಲಸದವಳೋ. ಕುಸುಮಾ ಬೈಗುಳ ಕೇಳಿ ಕೇಳಿ ಸೀರಿಯಲ್ (Serial) ಬೋರ್ ಎನಿಸುತ್ತಿದೆ, ದಯವಿಟ್ಟು ಕತೆ ಬದಲಾವಣೆ ಮಾಡಿ. ಕುಸುಮಾಗೂ, ಕಾವೇರಿಗೂ ವ್ಯತ್ಯಾಸನೇ ಇಲ್ಲ ಎಂದು ಹಲವರು ದೂರಿದ್ದಾರೆ. 
 

Latest Videos

click me!