ಹಾಸ್ಯನಟ ಸುನಿಲ್ ಗ್ರೋವರ್ ಒಂದು ಸಂಚಿಕೆಗೆ ಪಡೆಯುವ ಶುಲ್ಕ ಎಷ್ಷು ಗೊತ್ತಾ?

First Published | Aug 3, 2022, 7:01 PM IST

ಹಾಸ್ಯನಟ ಮತ್ತು ನಟ ಸುನೀಲ್ ಗ್ರೋವರ್ (Sunil Grover) ಅವರ ಜನ್ಮದಿನ ಆಗಸ್ಟ್ 3 ರಂದು. ಸುನಿಲ್ ತಮ್ಮ ಕಾಮಿಕ್ ಟೈಮಿಂಗ್‌ಗಾಗಿ ಎಲ್ಲರಿಗೂ ಪರಿಚಿತರು. ಸುನಿಲ್ ಗ್ರೋವರ್ ಹಿಂದೆ ಕಾಮಿಡಿ ಶೋ ದಿ ಕಪಿಲ್ ಶರ್ಮಾದ ಕೇಂದ್ರಬಿಂದುವಾಗಿದ್ದರು. ಅವರ ಜೀವನ, ಅವರಿಲ್ಲದೆ ಕಾರ್ಯಕ್ರಮದ ಬಗ್ಗೆ ಯೋಚಿಸಲೂ ಸಾಧ್ಯವಿರಲಿಲ್ಲ.  'ಡಾಕ್ಟರ್ ಮಶೂರ್ ಗುಲಾಟಿ' ಮತ್ತು 'ಗುತ್ತಿ' ಪಾತ್ರಗಳಲ್ಲಿನ ಅವರ ಅದ್ಭುತ ಹಾಸ್ಯವನ್ನು ಜನರು ಮರೆಯಲು ಸಾಧ್ಯವಿಲ್ಲ. ಧಾರಾವಾಹಿಗಳು ಮಾತ್ರವಲ್ಲದೇ ಅವರು ಬಾಲಿವುಡ್ ಚಲನಚಿತ್ರಗಳು ಮತ್ತು OTT ಪ್ಲಾಟ್‌ಫಾರ್ಮ್‌ಗಳಲ್ಲೂ ಉತ್ಸಾಹ ತೋರಿಸಿದ್ದಾರೆ. ಅಂದಹಾಗೆ ಸುನಿಲ್ ಗ್ರೋವರ್ ಒಂದು ಸಂಚಿಕೆಗೆ ಎಷ್ಟು ಚಾರ್ಜ್‌ ಮಾಡುತ್ತಾರೆ ಗೊತ್ತಾ?

ಹಾಸ್ಯನಟ ಸುನಿಲ್ ಗ್ರೋವರ್ ಅವರು 3 ಆಗಸ್ಟ್ 1977 ರಂದು ಸಿರ್ಸಾದಲ್ಲಿ (ಹರಿಯಾಣ) ಜನಿಸಿದರು. ಹರ್ಯಾನ್ವಿ-ಪಂಜಾಬಿ ಕುಟುಂಬದಿಂದ ಬಂದ ಸುನಿಲ್‌ ಅವರ ತಂದೆ ಬ್ಯಾಂಕ್ ವ್ಯವಸ್ಥಾಪಕರಾಗಿದ್ದರು, ಅವರು ಅಕ್ಕ ಮತ್ತು ತಮ್ಮ ಇದ್ದಾರೆ.

ಸುನಿಲ್ ಗ್ರೋವರ್ ಈಗ ಚಿತ್ರಗಳಲ್ಲಿಯೂ ತಮ್ಮ ನಟನಾ ಕೌಶಲ್ಯವನ್ನು ತೋರಿಸುತ್ತಿದ್ದಾರೆ. ಅವರು ಸಲ್ಮಾನ್ ಖಾನ್ ಅವರ ಭಾರತ್ ಮತ್ತು ಟೈಗರ್ ಶ್ರಾಫ್ ಅವರ ಬಾಘಿಯಲ್ಲಿ ಕಾಣಿಸಿಕೊಂಡರು. ಅಲ್ಲದೆ ಇನ್ನೂ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

Tap to resize

ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ 'ತಾಂಡವ್' ವೆಬ್ ಸೀರೀಸ್‌ನಲ್ಲಿ ಸೈಫ್ ಅಲಿ ಖಾನ್ ಜೊತೆಗೆ ಸುನಿಲ್ ಗ್ರೋವರ್ ಕೂಡ ಕಾಣಿಸಿಕೊಂಡರು. ಇದರಲ್ಲಿ ಹಾಸ್ಯನಟನ ಪಾತ್ರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಈ ಹಂತ ತಲುಪಲು ಸುನಿಲ್ ಗ್ರೋವರ್ ಕಷ್ಟಪಡಬೇಕಾಯಿತು. ಅವರ ವೃತ್ತಿ ಜೀವನದ ಆರಂಭದಲ್ಲಿ, ಒಂದು ಶೋಗೆ ಕೇವಲ 500 ರೂ ಗಳಿಸುತ್ತಿದ್ದ ಇವರು  'ದಿ ಕಪಿಲ್ ಶರ್ಮಾ ಶೋ'ನ ಪ್ರತಿ ಸಂಚಿಕೆಗೆ 10 ರಿಂದ 12 ಲಕ್ಷ ರೂ ಸಂಪಾದನೆ ಮಾಡಲು ಪ್ರಾರಂಭಿಸಿದರು.

ಸುನಿಲ್ ಗ್ರೋವರ್ ಅವರ ವಾರ್ಷಿಕ ನಿವ್ವಳ ಮೌಲ್ಯ ಸುಮಾರು 18 ಕೋಟಿ. ಸುನಿಲ್‌ಗೆ ಮುಂಬೈನಲ್ಲಿ ಸ್ವಂತ ಮನೆ ಇದೆ. ಅವರು 2013 ರಲ್ಲಿ ಇದನ್ನು ಖರೀದಿಸಿದರು, ಸುನೀಲ್ ತಮ್ಮ ಚಲನಚಿತ್ರಗಳಲ್ಲಿನ ಪಾತ್ರಕ್ಕಾಗಿ 50 ಲಕ್ಷ ರೂ. ಚಾರ್ಜ್‌ ಮಾಡುತ್ತಾರೆ.

ಹಾಸ್ಯನಟ ಕಪಿಲ್ ಶರ್ಮಾ ತುಂಬಾ ಮುಂಗೋಪಿ. ಒಮ್ಮೆ ಅವರು ಸುನಿಲ್ ಗ್ರೋವರ್ ಅವರೊಂದಿಗೆ ವಿವಾದ ಮಾಡಿಕೊಂಡಿದ್ವರು.ನಂತರ ಸುನಿಲ್ ಕಾರ್ಯಕ್ರಮವನ್ನು ತೊರೆದರು. ಅವರ ನಷ್ಟ ಇಂದಿಗೂ ಕಪಿಲ್‌ ಅವರ ಶೋ ಅನುಭವಿಸುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸುನೀಲ್ ಮತ್ತು ಕಪಿಲ್ ರಾಜಿ ಮಾಡಲು ಪ್ರಯತ್ನಿಸಿದರು, ಆದರೆ ಸುನೀಲ್ ರಾಜಿ ಮಾಡಿಕೊಳ್ಳಲು ನಿರಾಕರಿಸಿದರು.

Latest Videos

click me!