Majaa Takies Show:‌ ಅಬ್ಬಬ್ಬಾ...! ಪುತ್ರ ಸೃಜನ್‌ ಲೋಕೇಶ್‌ಗೆ ತಾಯಿ ಗಿರಿಜಾ ಏನೆಲ್ಲ ಬಯ್ತಾರೆ ಗೊತ್ತಾ?

Published : Mar 05, 2025, 09:54 PM ISTUpdated : Mar 05, 2025, 10:07 PM IST

ಖಾಸಗಿ ವಾಹಿನಿಯ ಜನಪ್ರಿಯ ‘ಮಜಾ ಟಾಕೀಸ್’ ಶೋನಲ್ಲಿ ಕನ್ನಡದ ಜನಪ್ರಿಯ ತಾರಾಮಣಿಯರು ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ಧ ತಾರೆಯರಾದ ಜಯಮಾಲಾ, ಅಂಬಿಕಾ, ಗಿರಿಜಾ ಲೋಕೇಶ್ ಹಾಗೂ ವಿನಯಾ ಪ್ರಸಾದ್ ಈ ವಿಶೇಷ ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ.   

PREV
15
Majaa Takies Show:‌ ಅಬ್ಬಬ್ಬಾ...! ಪುತ್ರ ಸೃಜನ್‌ ಲೋಕೇಶ್‌ಗೆ ತಾಯಿ ಗಿರಿಜಾ ಏನೆಲ್ಲ ಬಯ್ತಾರೆ ಗೊತ್ತಾ?

ಈ ತಾರೆಯರು ತಮ್ಮ ತಾರಾಲೋಕದ ಅವಿಸ್ಮರಣೀಯ, ಸದಾ ಹಸಿರಾದ, ಖುಷಿಖುಷಿಯಾದ ಪ್ರಸಂಗಗಳನ್ನು ಇಲ್ಲಿ ಹೇಳಿಕೊಂಡಿರುವುದು ಈ ಸಂಚಿಕೆಯ ಮಜವನ್ನು ಹೆಚ್ಚಿಸಿದೆ. ಡಾ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅವರ ಜತೆ ನಡೆದ ಬಲು ಅಪರೂಪದ ಕತೆಗಳು ಈ ಸ್ಪೆಷಲ್ ಎಪಿಸೋಡಿನಲ್ಲಿವೆ. ಹಾಗೆಯೇ ಒಂದು ವಿಶೇಷ ಗಿಮಿಕ್ ಇಲ್ಲಿ ಅನಾವರಣಗೊಂಡಿದೆ. ಒಂದು ಸಾಲನ್ನು ಕೊಟ್ಟು ಈ ಕಲಾವಿದರು ‘ನವರಸ’ದಲ್ಲಿ ಅದನ್ನು ಅಭಿನಯಿಸಿ ತೋರಿಸಿರುವುದು ಕಚಗುಳಿ ಇಡುತ್ತದೆ.

25

ಇಷ್ಟೆಲ್ಲ ಮನರಂಜನೆ ನಡುವೆ ಒಂದು ಹೃದಯಸ್ಪರ್ಶಿ ಘಟನೆಗೂ ಈ ಸಂಚಿಕೆ ಸಾಕ್ಷಿಯಾಗಿದೆ. ಅದೇನೆಂದರೆ ಎರಡೂ ಕೈಗಳಿಲ್ಲದ ಬಳ್ಳಾರಿಯ ಲಕ್ಷೀದೇವಿಯವರು ತಮ್ಮ ಪಾದಗಳಿಂದ ಸೃಜನ್ ಗೆ ಪತ್ರ ಬರೆದಿರುವುದು. 

35

ಒಟ್ಟಿನಲ್ಲಿ ‘ಮಜಾ ಟಾಕೀಸ್’ನ ಈ ಮಹಾನ್ ನಟಿಯರ ಮಹಾಸಂಗಮ - ಭರಪೂರ ಮನರಂಜನೆ ಕೊಟ್ಟು - ‘ಮಹಿಳಾ ದಿನ’ವನ್ನು ವಿಶೇಷವಾಗಿ ಆಚರಿಸಲಾಗಿದೆ. ವಿಶ್ವ ಮಹಿಳಾ ದಿನ’ದ ಪ್ರಯುಕ್ತ ಮಾರ್ಚ್ 8 ಮಾರ್ಚ್ 9ರಂದು, ಈ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ 10:30 ರವರೆಗೆ ಪ್ರಸಾರ ಆಗಲಿದೆ. 
 

45

ಸೃಜನ್‌ ಲೋಕೇಶ್‌ ಅವರಿಗೆ ತಾಯಿ ಗಿರಿಜಾ ಅವರು ಕತ್ತೆ ಮುಂಡೆದೆ, ನಾಯಿ ಮುಂಡೆದೆ ಎಂದೆಲ್ಲ ಬೈಯ್ಯುತ್ತಾರಾ? ಹೀಗೆಂದು ಪ್ರೋಮೋದಲ್ಲಿದೆ. ಒಟ್ಟಿನಲ್ಲಿ ಈ ಮಜವಾದ ಎಪಿಸೋಡ್‌ ನೋಡಿದರೆ ಚೆನ್ನ ಎನ್ನಬಹುದು. 

55

ನಟಿ ಜಯಮಾಲಾ, ಗಿರಿಜಾ ಲೋಕೇಶ್‌, ವಿನಯಾ ಪ್ರಸಾದ್‌ ಮುಂತಾದವರು ವಿವಿಧ ರೀತಿಯ ಆಕ್ಟ್‌ ಮಾಡಿರೋದು ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದೆ. 

Read more Photos on
click me!

Recommended Stories