ಕಾಶ್ಮೀರಿ ಬೆಡಗಿಯಾದ ಕೊಡಗಿನ ಹುಡುಗಿ ಶ್ವೇತಾ ಚೆಂಗಪ್ಪಾ

Published : Mar 05, 2025, 02:25 PM ISTUpdated : Mar 05, 2025, 02:45 PM IST

ನಟಿ ಹಾಗೂ ನಿರೂಪಕಿ ಶ್ವೇತಾ ಚೆಂಗಪ್ಪಾ ಕಾಶ್ಮೀರಕ್ಕೆ ತೆರಳಿದ್ದು, ಅಲ್ಲಿ ತಾವೂ ಕಾಶ್ಮೀರಿ ಬೆಡಗಿಯಾಗಿ ಪೋಸ್ ಕೊಟ್ಟಿದ್ದಾರೆ.   

PREV
110
ಕಾಶ್ಮೀರಿ ಬೆಡಗಿಯಾದ ಕೊಡಗಿನ ಹುಡುಗಿ ಶ್ವೇತಾ ಚೆಂಗಪ್ಪಾ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ನಿರೂಪಕಿಯಾಗಿರುವ ಶ್ವೇತಾ ಚೆಂಗಪ್ಪಾ ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿದ್ದು, ಅಲ್ಲಿನ ಸುಂದರ ಪ್ರಕೃತಿಯ ನಡುವೆ ನಿಂತು ಎಂಜಾಯ್ ಮಾಡ್ತಿದ್ದಾರೆ. 
 

210

ಕೆಲವು ದಿನಗಳ ಹಿಂದೆ ತಮ್ಮ ಸ್ನೇಹಿತರ ಜೊತೆಗೆ ಕಾಶ್ಮಿರಕ್ಕೆ ತೆರಳಿರುವ ಶ್ವೇತಾ ಚೆಂಗಪ್ಪಾ ಕಾಶ್ಮೀರದ ಮಂಜಿನಲ್ಲಿ ಆಟವಾಡುತ್ತಾ, ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ಶೇರ್ ಮಾಡಿದ್ದರು. 
 

310

ಇದೀಗ ತಾವು ಕಾಶ್ಮೀರಿ ಹುಡುಗಿಯಂತೆ ಡ್ರೆಸ್ ಮಾಡಿ, ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಲುಕ್ ನೋಡಿ ಕಾಶ್ಮೀರದ ಆಪಲ್ ಏನೋ ಎನ್ನುವಂತೆ ಮುದ್ದಾಗಿದ್ದಾರೆ. 
 

410

ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಶ್ವೇತಾ, ಕರ್ನಾಟಕದಿಂದ ಕಾಶ್ಮೀರಕ್ಕೆ ಹೋಗಿ ಕಾಶ್ಮೀರದ ಬೆಡಗಿ ಆದ ಕ್ಷಣ, ಕಾಶ್ಮೀರಿ ಹೆಣ್ಣುಮಗಳ ತರಹ ಕಾಣ್ತಾ ಇದ್ದೀನಾ?? ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. 
 

510

ಅಷ್ಟೇ ಆಲ್ಲ ಅದರ ಜೊತೆಗೆ ಇದು ಶ್ರೀನಗರದ ತುಂಬಾನೆ ಜನಪ್ರಿಯವಾದ ದಾಲ್ ಸರೋವರ. ಈ ಸರೋವರದಲ್ಲಿ ಬೋಟಿಂಗ್ ಮಾಡೋದೆ ಒಂದು ವಿಭಿನ್ನವಾದ ಅನುಭವ ಎಂದು ಬರೆದುಕೊಂಡಿದ್ದಾರೆ. 
 

610

ಇನ್ನು ಕಾಶ್ಮೀರಿ ಬೆಡಗಿಯಂತೆ ಡ್ರೆಸ್ ಧರಿಸಿರುವ ಕುರಿತು ಕೂಡ ಪೋಸ್ಟ್ ಮಾಡಿದ್ದು. ಕೇವಲ ಸ್ವಲ್ಪ ಹೊತ್ತಿಗೆ ಅವರ ಉಡುಪುನ್ನ ಧರಿಸಿ ಫೋಟೋ ಕ್ಲಿಕ್ ಮಾಡಿಸಿದ್ದು. ಆಮೇಲೆ ಸುಂದರವಾದ ಸನ್ ಸೆಟ್ ಗೆ ಸಾಕ್ಷಿಯಾದೆವು ಎಂದು ಬರೆದಿದ್ದಾರೆ. 
 

710

ಬೋಟ್ ರೈಡ್ ಜೊತೆಗೆ ಕೆಲವು ನಿಮಿಷದ ಸುಂದರವಾದ ಪಯಣ, ಆದರೆ ನೆನಪಿನಲ್ಲುಳಿಯುವಂತಹ ಕ್ಷಣಗಳು ಎನ್ನುತ್ತಾ ತಾವು ಬೋಟ್ ರೈಡ್ ಮಾಡಿರುವ ಅದ್ಭುತವಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ ಶ್ವೇತಾ ಚೆಂಗಪ್ಪಾ. 
 

810

ಜೊತೆಗೆ ಶ್ವೇತಾ ತಮ್ಮ ಗೆಳತಿಗೂ ಥ್ಯಾಂಕ್ಯೂ ಹೇಳಿದ್ದಾಅರೆ. ಥ್ಯಾಂಕ್ಯೂ ನನ್ನ ಬೆಸ್ಟಿ. ಈ ಕಾಶ್ಮೀರಿ ಔಟ್ ಫಿಟ್ ನಲ್ಲಿ ಫೋಟೊ ಶೂಟ್ ಮಾಡಿಸಲು ನನ್ನನ್ನು ಫೋರ್ಸ್ ಮಾಡಿರೋದಕ್ಕೆ ಥ್ಯಾಂಕ್ಯೂ ಎಂದು ಹೇಳಿದ್ದಾರೆ. 
 

910

ಶ್ವೇತಾ ಚೆಂಗಪ್ಪಾ ಫೋಟೊಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದು, ಹೊಗಳಿ ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡದ ಬೆಡಗಿಯರು ಕಾಶ್ಮೀರದ ಬೆಡಗಿಯರಿಗಿಂತ ಕಮ್ಮಿ ಇಲ್ಲಾ ಅಂತಾ ನಿಮ್ಮನ್ನು ನೋಡಿ ಸಾಬೀತು ಆಯ್ತು ಎಂದು ಸಹ ಹೇಳಿದ್ದಾರೆ. 
 

1010

ಶ್ವೇತಾ ಚೆಂಗಪ್ಪಾ, ಕೊನೆಯದಾಗಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಆದಾದ ಬಳಿಕ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಬಾರಿ ಮಜಾ ಟಾಕೀಸ್ ನಲ್ಲೂ ಸಹ ಇವರು ಭಾಗವಹಿಸಿಲ್ಲ. 
 

click me!

Recommended Stories