ಕಲರ್ಸ್ ಕನ್ನಡ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಸ್ಪೆಷಲ್ ಎಪಿಸೋಡ್‌ನಲ್ಲಿ ನಿವೇದಿತಾ ಗೌಡ ತಾಯಿ ಹೇಮಾ ಜೊತೆ ವೇದಿಕೆ ಮೇಲೆ ನೃತ್ಯ ಮಾಡಿದ್ದಾರೆ.
ತಮ್ಮ ಜೀವನದಲ್ಲಿ ತಾಯಿ ಎಷ್ಟು ಮುಖ್ಯ, ಒಮ್ಮೆ ತಾಯಿಯನ್ನು ನೋಡಿದರೆ ಎಷ್ಟು ಖುಷಿಯಾಗುತ್ತದೆ, ಯಾಕೆ ಮದುವೆ ಆದ್ಮೇಲೆ ಟ್ರಿಪ್ ಮಾಡು ಅಂತಾರೆ ಎಂದು ನಿವೇದಿತಾ ಹಂಚಿಕೊಂಡಿದ್ದಾರೆ.
'ನನ್ನ ತಾಯಿ ಅಂದ್ರೆ ನನಗೆ ಸಿಕ್ಕಾಪಟ್ಟೆ ಇಷ್ಟ. ಮದುವೆಗೂ ಮುನ್ನ ಒಂದು ದಿನವೂ ಮನೆಯಿಂದ ಹೊರಗೆ ತಾಯಿ ಕಳುಹಿಸಿಲ್ಲ. ಕಳ್ಳರ ಭಯದಿಂದ ನನ್ನನ್ನು ಸದಾ ಮನೆಯಲ್ಲಿ ಕೂಡಿ ಹಾಕುತ್ತಿದ್ದರು.' ಎಂದು ನಿವೇದಿತಾ ಮಾತನಾಡಿದ್ದಾರೆ.
'ಮಗಳು ಹೊರಗಡೆ ಹೋದಾಗ ಯಾರಾದರೂ ಬಂದು ಎತ್ತಿಕೊಂಡು ಹೋಗಬಹುದು ಅನ್ನೋ ಭಯ ಇತ್ತು. ನೀನು ಎಲ್ಲೇ ಹೋಗಬೇಕಿದ್ದರೂ ಮದ್ವೆ ಆದ ಮೇಲೆ ಹೋಗು ಎನ್ನುತ್ತಿದ್ದರು. ಹೀಗಾಗಿ ಫ್ರೀಡಂ ಬೇಕು ಎಂದು ಮದುವೆ ಮಾಡಿಕೊಂಡೆ'
'ಮದುವೆ ಆದ್ಮೇಲೆ ಸುತ್ತಾಡೋಣ ಹಾಗೆ ಹೀಗೆ ಎಂದು ಮದುವೆ ಮಾಡಿಕೊಂಡೆ. ಮದ್ವೆ ಆದ್ಮೇಲೆ ಪೋಷಕರ ಬೆಲೆ ತಿಳಿಯಿತ್ತು. ಅವಾಗೆಲ್ಲಾ ಬರೀ ಮನೆಯಲ್ಲಿ ಇದ್ದೀನಿ ಎಂದು ಬೇಸರ ಆಗುತ್ತಿತ್ತು ಆದರೆ ಈಗ ತಾಯಿ ಅವರನ್ನು ಒಂದು ಸಲ ನೋಡಿದರೂ ತುಂಬಾ ಖುಷಿಯಾಗುತ್ತದೆ.'
'ಸ್ಕೂಲ್ ಕಾಲೇಜ್ ದಿನಗಳಲ್ಲಿ ವೇದಿಕೆ ಮೇಲೆ ನಾನು ಏನೇ ಪರ್ಫಾರ್ಮ್ ಮಾಡುತ್ತಿದ್ದರೂ ಆಡಿಯನ್ಸ್ ಆಗಿ ನೋಡುತ್ತಿದ್ದರು ಅವರ ಜೊತೆ ವೇದಿಕೆ ಹಂಚಿಕೊಳ್ಳುವುದಕ್ಕೆ ಖುಷಿಯಾಗುತ್ತಿದೆ' ಎಂದಿದ್ದಾರೆ ನಿವೇದಿತಾ.
'ನನ್ನ ಅಳಿಯ ಚಂದನ್ ಬಗ್ಗೆ ಏನೂ ಹೇಳುವುದಿಲ್ಲ. ಮನೆಗೆ ಬಂದು ಕೇಳಿದರು ನಿಮ್ಮ ಮಗಳನ್ನು ಚಂದ ನೋಡಿಕೊಳ್ಳುತ್ತೀನಿ. ನನ್ನ ಮಗಳನ್ನು ನಾನು ಹೇಗೆ ನೋಡಿಕೊಂಡಿದ್ದೀನಿ ಅದೇ ರೀತಿ ನೀನು ನೋಡಿಕೊಳ್ಳಬೇಕು ಎಂದು ಹೇಳಿದೆ. ಒಪ್ಪಿಕೊಂಡು ಮದುವೆ ಮಾಡಿಕೊಟ್ಟ' ಅಳಿಯನ ಬಗ್ಗೆ ನಿವೇದಿತಾ ಹೇಮಾ ಹೇಳಿದ್ದಾರೆ.