ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿ ವೀಕ್ಷಕರ ಮನಸ್ಸಲ್ಲಿ ಮನೆ ಮಾಡಿದೆ. ಅದರಲ್ಲೂ ಪ್ರಮುಖ ಪಾತ್ರಧಾರಿ ಗೀತಾ ಅಲಿಯಾಸ್ ಭವ್ಯಾ ಎಲ್ಲರಿಗೂ ಅಚ್ಚುಮೆಚ್ಚು.
ಇದೀಗ ಗೀತಾ ಬಿಗ್ ಬಾಸ್ ಮೊದಲ ಮಿನಿ ಸೀಸನ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. 6 ದಿನಗಳ ಕಾಲ ಮನೆಯೊಳಗಿದ್ದು, ವೀಕ್ಷರನ್ನು ವಿಶೇಷವಾಗಿ ಮನೋರಂಜಿಸಲಿದ್ದಾರೆ.
ಭವ್ಯಾ ಗೌಡ ಮನೆ ಎಂಟ್ರಿ ಆಗುತ್ತಿದ್ದಂತೆ, ಇನ್ ಹೌಸ್ ನಿರೂಪಕ ಅಕುಲ್ ಬಾಲಾಜಿ ಭವ್ಯಾ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ಗೀತಾ ಧಾರಾವಾಹಿಯಲ್ಲಿ ಭವ್ಯಾ ಒಂದು ದಿನ ಧರಿಸಿದ ಬಟ್ಟೆ ಮತ್ತೊಂದು ದಿನ ಹಾಕಿರಲಿಲ್ಲವಂತೆ. ಈಗಾಗಲೇ 300 ಎಪಿಸೋಡ್ ಶೂಟಿಂಗ್ ಮಾಡಿದ್ದಾರೆ.
ಭವ್ಯಾ ಬಳಿ ಎಷ್ಟು ಬಟ್ಟೆ ಇವೆ ಎಂದು ಅಕುಲ್ ಬಾಲಾಜಿ ಪ್ರಶ್ನೆ ಮಾಡುತ್ತಾರೆ. 'ನನ್ನ ಬಳಿ ಈಗಾಗಲೇ ಮೂರು ಸಾವಿರ ಬಟ್ಟೆಗಳಿವೆ. ಮನೆ ತುಂಬಾ ಬರೀ ಬಟ್ಟೆಗಳೇ ಕಾಣಿಸುತ್ತವೆ,' ಎಂದು ಹೇಳಿದ್ದಾರೆ.
'ಇನ್ನು ಮುಂದೆ ಹೊಸ ಬಟ್ಟೆ ತೆಗೆದುಕೊಂಡು ಬಂದರೆ, ನಿನ್ನನ್ನು ಮನೆಯಿಂದ ಹೊರ ಹಾಕುವೆ ಎಂದು ಅಮ್ಮ ಹೇಳುತ್ತಾರೆ. ಆದರೆ ನನ್ನ ಕೆಲಸವೇ ಹಾಗೆ, ಏನು ಮಾಡಲಿ? ಬಟ್ಟೆ ಬೇಕಾಗುತ್ತದೆ,' ಎಂದು ಭವ್ಯಾ ಹೇಳಿದ್ದಾರೆ.