'ಡಿಯರ್ ಕಣ್ಮಣಿ' ಚಿತ್ರದಲ್ಲಿ ಕಿರುತೆರೆ ನಟಿ ಭವ್ಯಾ ಗೌಡ; ಹೇಗಿರಲಿದೆ ಗೀತಾ ಪಾತ್ರ?

First Published | Mar 28, 2021, 4:36 PM IST

'ಗೀತಾ' ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಗಳಾದ ಭವ್ಯಾ ಗೌಡ ಇದೀಗ ಬೆಳ್ಳಿ ತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ. ವಿಸ್ಮಯಾ ಗೌಡ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಭವ್ಯಾ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯ ನಟಿ ಭವ್ಯಾ ಗೌಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ವಿಸ್ಮಯಾ ಗೌಡ ನಿರ್ದೇಶನ 'ಡಿಯರ್ ಕಣ್ಮಣಿ' ಚಿತ್ರದಲ್ಲಿ ಕಿಶನ್ ಹಾಗೂ ಸಾತ್ವಿಕಾ ಜೊತೆ ಕಾಣಿಸಿಕೊಳ್ಳಲಿದ್ದಾರೆ.
Tap to resize

'ಇದು ತ್ರಿಕೋನ ಪ್ರೇಮ ಕಥೆ ಅಲ್ಲ. ಈ ಸಿನಿಮಾದಲ್ಲಿ ನಾಲ್ವರು ನಟರಿದ್ದಾರೆ. ಸಿನಿಮಾದ ಕಥೆಯೂ ಅಷ್ಟೇ ವಿಭಿನ್ನವಾಗಿದೆ. ನಾಲ್ವರು ನಟರಿಗೂ ಸಮಾನ ಪ್ರಮಾಣದ ಆದ್ಯತೆ ಸಿನಿಮಾದಲ್ಲಿ ಇದೆ,' ಎಂದು ಸಿನಿಮಾದ ನಿರ್ದೇಶಕಿ ಹಾಗೂ ನಿರ್ಮಾಪಕಿ ವಿಸ್ಮಯಾ ಗೌಡ ಹೇಳಿದರು.
'ಕಿರುತೆರೆಗಿಂತ ಭವ್ಯಾ ಇಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ನೀವು ಈ ಮೊದಲು ನೋಡಲು ಸಾಧ್ಯವಾಗಿರದಷ್ಟು ಬೇರೆ ರೀತಿಯಲ್ಲೇ ಭವ್ಯಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ,' ಎಂದು ತಿಳಿಸಿದ್ದಾರೆ.
ನಿಜ ಜೀವನಕ್ಕಿಂತ 8 ವರ್ಷ ದೊಡ್ಡವಳಾದ ಪಾತ್ರದಲ್ಲಿ ಭವ್ಯಾ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.
'ನಾನು ಗಗನಸಖಿ ಆಗಬೇಕು ಎಂದು ಕನಸು ಕಂಡಿದ್ದೆ. ಅದಕ್ಕಾಗಿ ಅರ್ಜಿಯನ್ನೂ ಹಾಕಿದ್ದೆ. ಅಷ್ಟರಲ್ಲಿ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬರಲು ಶುರುವಾಯಿತು. ನಟನೆಯನ್ನೇ ವೃತ್ತಿ ಮಾಡಿಕೊಳ್ಳಬೇಕು ಎಂದು ಅಂದುಕೊಂಡೆ. ಆದರೆ ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಲು ಅಮ್ಮ ಒಪ್ಪಲಿಲ್ಲ. ಗೀತಾ ಧಾರಾವಾಹಿ ನನಗೆ ಕನ್ನಡದ ಮನೆ ಮಗಳು ಎನಿಸಿಕೊಳ್ಳುವ ಅವಕಾಶ ಮಾಡಿಕೊಟ್ಟಿತು. ಆ ಧಾರಾವಾಹಿಯಿಂದ ನನ್ನ ಅದೃಷ್ಟ ಬದಲಾಯಿತು,' ಎನ್ನುತ್ತಾರೆ ಭವ್ಯಾ ಗೌಡ.
ಇಲ್ಲಿ ಗಟ್ಟಿಯಾದ ಒಂದು ಪಾತ್ರ ಇದೆ. ಚಾಲೆಂಜಿಂಗ್ ಆಗಿದೆ. ಇದರಲ್ಲಿರುವ ಪಾತ್ರ ಎಷ್ಟು ಇಷ್ಟ ಆಯಿತು ಅಂದ್ರೆ ಒಂದರೆಡು ದಿನ ನಾನು ಆ ಗುಂಗಿನಲ್ಲೇ ಇದ್ದೆ ಎಂದಿದ್ದಾರೆ ಗೀತಾ.
ಕ್ರಿಕೆಟಿಗ ಪ್ರವೀಣ್ ನಟಿಸುವ ಬಗ್ಗೆ ಸಿನಿಮಾ ತಂಡ ಮಾಹಿತಿ ನೀಡಿದೆ.

Latest Videos

click me!