ಗೀತಾನೇ ಸೂಪರ್ ಅಂದ್ಕೊಂಡ್ರಾ? ರಿಯಲ್ ಅಕ್ಕ ನೋಡಿ, ಕಳ್ದೇ ಹೋಗ್ತೀರಾ!

First Published | Oct 31, 2023, 3:59 PM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಅಕ್ಕ ತಂಗಿ ಫೋಟೋ. ಇಬ್ರೂ ಯಾವ ಹೀರೋಯಿನ್‌ಗೂ ಕಡಿಮೆ ಇಲ್ಲ.... 
 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಗೀತಾ ಪಾತ್ರದಲ್ಲಿ ಮಿಂಚುತ್ತಿರುವುದು ಭವ್ಯಾ ಗೌಡ. 

ಕಿರುತೆರೆ ನಟಿ ಭವ್ಯಾ ಗೌಡ ಸೂಪರ್ ಆಗಿ ಕಾಣಿಸುತ್ತಿದ್ದಾರೆ ಎನ್ನುತ್ತಿದ್ದ ನೆಟ್ಟಿಗರು ಅವರ ರಿಯಲ್ ಜೀವನದ ಸಹೋದರೆ ನೋಡಿ ಶಾಕ್ ಆಗ್ತಿದ್ದಾರೆ.

Tap to resize

ಸಹೋದರಿ ಬರ್ತಡೇ ದಿನ ಹಲವು ಫೋಟೋಗಳನ್ನು ಹಂಚಿಕೊಂಡು ತಮ್ಮ ಪ್ರೀತಿಯನ್ನು ಕ್ಯಾಪ್ಶನ್ ರೀತಿಯಲ್ಲಿ ಬರೆದುಕೊಂಡಿದ್ದಾರೆ ಭವ್ಯಾ.

'ನೀವು ನನ್ನ ಎರಡನೇ ತಾಯಿ. ನನ್ನ ಮೊದಲ ಬೆಸ್ಟ್‌ ಫ್ರೆಂಡ್,ನನ್ನ ಎಲ್ಲಾ ವಿಚಾರಗಳನ್ನು ಕೇಳಿಸಿಕೊಳ್ಳುತ್ತೀರಿ, ಏನೇ ಆಗಲಿ ನನ್ನ ಜೊತೆಗೆ ನೀನು ನಿಂತಿರುವೆ' ಎಂದು ಭವ್ಯಾ ಬರೆದುಕೊಂಡಿದ್ದಾರೆ.

'ಬಾಲ್ಯದಲ್ಲಿ ನಾನು ಜಗಳ ಆಡುತ್ತಿದ್ವಿ ದೊಡ್ಡವರಾದ ಮೇಲೆ ನೀವೇ ನನ್ನ ಬೆಸ್ಟ್‌ ಫ್ರೆಂಡ್. ಸ್ನೇಹಿತರು ಬಂದು ಹೋಗುತ್ತಾರೆ ಆದರೆ ಸಹೋದರಿಯರು ಶಾಶ್ವತ ಎಂದು ತಾಯಿ ಹೇಳುತ್ತಾರೆ' 

'ಇಷ್ಟು ವರ್ಷಗಳಿಂದ ನಾನು ನಿಮ್ಮ ಬಟ್ಟೆಗಳನ್ನು ಕದ್ದಿರುವೆ . ನನ್ನ ಎಲ್ಲಾ ಗಾಸಿಪ್‌ಗಳಿಗೆ ನೀನೇ ಪಾರ್ಟನರ್' ಎಂದು ಭವ್ಯಾ ಬರೆದುಕೊಂಡೊದ್ದಾರೆ.

ಅಕ್ಕ ಸೂಪರ್ ಅಂದುಕೊಂಡ್ವಿ ಆದರೆ ತಂಗಿನೂ ಸೂಪರ್. ಇಬ್ಬರು ಯಾವ ಹೀರೋಯಿನ್‌ಗೂ ಕಡಿಮೆ ಇಲ್ಲ ಒಟ್ಟಿಗೆ ಸಿನಿಮಾ ಮಾಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Latest Videos

click me!