ನೀಲಿ ಡ್ರೆಸ್‌ ತೊಟ್ಟು ಕವಿತೆ ಬರೆದ Anushree: ಆ್ಯಂಕರಿಂಗ್ ಬಿಟ್ಟು ಕವಿಯಾಗ್ರಿ ಎಂದ ಫ್ಯಾನ್ಸ್‌!

Published : Oct 13, 2023, 01:30 AM IST

ನಿರೂಪಕಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಇವರು ಜೀ ಕನ್ನಡದ ಫೇಮಸ್ ನಿರೂಪಕಿ. ಹಲವು ವರ್ಷಗಳಿಂದ ಜೀ ಕನ್ನಡದಲ್ಲಿ ನಿರೂಪಣೆ ಮಾಡ್ತಾ ಇದ್ದಾರೆ. ಇದೀಗ ಅನುಶ್ರೀ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.

PREV
17
ನೀಲಿ ಡ್ರೆಸ್‌ ತೊಟ್ಟು ಕವಿತೆ ಬರೆದ Anushree: ಆ್ಯಂಕರಿಂಗ್ ಬಿಟ್ಟು ಕವಿಯಾಗ್ರಿ ಎಂದ ಫ್ಯಾನ್ಸ್‌!

ಚಂದನವನದ ಬ್ಯೂಟಿ, ನಾಟಿ ಅನುಶ್ರೀ ಅವರು ಸದ್ಯ ಕಿರುತೆರೆ ರಿಯಾಲಿಟಿ ಶೋನ ನಿರೂಪಣೆಯ ಮೂಲಕ ಅಭಿಮಾನಿಗಳನ್ನ ಹೆಚ್ಚೆಚ್ಚು ಗಮನ ಸೆಳೆಯುತ್ತಿದ್ದಾರೆ. ಸ್ಟಾರ್ ನಟರ ಸಿನಿಮಾ ಕಾರ್ಯಕ್ರಮಗಳಿಗೆ ಇವರ ನಿರೂಪಣೆನೇ ಬೇಕು ಎಂಬಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೆಟ್ ಮಾಡಿದ್ದಾರೆ.

27

ಅನುಶ್ರೀ ನೀಲಿ ಬಣ್ಣದ ಡ್ರೆಸ್‌ ತೊಟ್ಟು ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಭರ್ಜರಿ ಪೋಸ್ ನೀಡಿದ್ದಾರೆ. ಜೊತೆಗೆ 'ನೀಲಿ ನಿಲುವು ನನ್ನ ಒಲವು' ಹೆಂಗೆ ಕವಿತೆ ಎಂದು ಬರೆದುಕೊಂಡಿದ್ದಾರೆ.

37

ಅನುಶ್ರೀ ನೋಡಿದ ನೆಟ್ಟಿಗರು ಸಹ ಪೈಪೋಟಿಗೆ ಬಿದ್ದವರಂತೆ, 'ಚಂದಕಿಂತ ಚಂದ ನೀನೇ ಸುಂದರ', 'ಪುಟಾಣಿ ನೀಲಿ ಹಕ್ಕಿ ನೀಲಾಕಾಶವಾಗಿದೆ ರೆಕ್ಕೆ ಬಿಚ್ಚಿ', 'ನೀಲಿ ನಿಲುವು ನಿಮ್ಮ ಒಲವು ನಮ್ಮ ಕುಡ್ಲದ ಚೆಲುವು ಸಾಗಲಿ ಹೀಗೆ ಸಾಗರದಾಚೆ ನಿಮ್ಮ ಗೆಲುವು', 'ನೀವ್ ಬಿಡ್ರಿ ಸಾಹುಕಾರ ಮಂದಿ', 'ಆ್ಯಂಕರಿಂಗ್ ಬಿಟ್ಟು ಕವಿಯಾಗ್ರಿ' ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. 

47

ಅನುಶ್ರೀ ಕನ್ನಡ ಸಿನಿರಂಗದಲ್ಲಿ ಕಿರುತೆರೆ ನಿರೂಪಕಿಯಾಗಿ ಮತ್ತು ಚಿತ್ರನಟಿಯಾಗಿ ಸಕ್ರಿಯರಾಗಿದ್ದಾರೆ. ಮಂಗಳೂರಿನ ತುಳು ಕುಟುಂಬದಲ್ಲಿ ಜನಸಿದ ಇವರು 'ಟೆಲಿ ಅಂತ್ಯಾಕ್ಷರಿ' ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಸಿನಿಪಯಣ ಆರಂಭಿಸಿದರು.

57

ಈ ಟಿವಿ ಕನ್ನಡ ವಾಹಿನಿಯ 'ಡಿಮಾಂಡಪ್ಪೋ ಡಿಮಾಂಡು' ಕಾರ್ಯಕ್ರಮದ ಮೂಲಕ ಮನೆಮಾತಾದ ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ್ದರು. ನಂತರ 'ಬೆಂಕಿಪಟ್ಣ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು.

67

ಜೀ ಕನ್ನಡದ 'ಸರಿಗಮಪ' ರಿಯಾಲಿಟಿ ಶೋ ಕಾರ್ಯಕ್ರಮದ ಹಲವು ಸೀಸನ್‌ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ. ಆಗಾಗ ಪ್ರವಾಸಗಳಿಗೆ ಹೋಗ್ತಾ ಇರ್ತಾರೆ. ಯೂಟ್ಯೂಬ್ ಚಾನೆಲ್ ಸಹ ನಡೆಸುತ್ತಾರೆ.

77

ಜೀ ಕನ್ನಡದ 'ಸರಿಗಮಪ' ರಿಯಾಲಿಟಿ ಶೋ ಕಾರ್ಯಕ್ರಮದ ಹಲವು ಸೀಸನ್‌ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ. ಆಗಾಗ ಪ್ರವಾಸಗಳಿಗೆ ಹೋಗ್ತಾ ಇರ್ತಾರೆ. ಯೂಟ್ಯೂಬ್ ಚಾನೆಲ್ ಸಹ ನಡೆಸುತ್ತಾರೆ.

Read more Photos on
click me!

Recommended Stories