ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸಂಗೀತಾ ಭಟ್ ಮತ್ತು ಭಾಗ್ಯಲಕ್ಷ್ಮಿ ಧಾರಾವಾಹಿ ತಾಂಡವ್ ಉರ್ಫ್ ಸುದರ್ಶನ್ ನಿಜ ಜೀವನದ ಗಂಡ- ಹೆಂಡತಿ. ಪಕ್ಕಾ ಲವ್ ಮ್ಯಾರೇಜ್ ಆಗಿರುವ ಈ ಜೋಡಿ ತಮ್ಮ ಸ್ಟೋರಿ ಹಂಚಿಕೊಂಡಿದ್ದಾರೆ.
'ಬೆಂಗಳೂರು ಟ್ರಾಫಿಕ್ ಬಗ್ಗೆ ಕಿರಿಕಿರಿ ಮಾಡಿಕೊಳ್ಳುವ ಜನರ ನಡುವೆ ಇಲ್ಲಿ ನಟಿ ಸಂಗೀತಾ ಭಟ್ ಮತ್ತು ನಟ ಸುಧರ್ಶನ್ ರಂಗಪ್ರಸಾದ್ ಪ್ರೀತಿ ಹುಟ್ಟಿದೆ.
ನಿರ್ದೇಶನ ಪವನ್ ಒಡೆಯಾರ್ ಮತ್ತು ಸಂಗೀತಾ ಭಟ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಪವನ್ ಬೆಸ್ಟ್ ಫ್ರೆಂಡ್ ಸುದರ್ಶನ್ ಆಗಿದ್ದರು ಎಂದು ಸಂಗೀತಾ ಟೈಮ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.
'ನಾವು ಫೇಸ್‌ಬುಕ್ ಆರ್ಕುಟ್ ಕಾಲದಿಂದ ಬಂದವರು. ಆಗ ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣ ಹೆಚ್ಚಿಗೆ ನಡೆಯುತ್ತಿತ್ತು ಹಾಗೂ ಆ ಸಮಯದಲ್ಲಿ ನಾನು ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡಿದೆ' ಎಂದು ಸುದರ್ಶನ್ ಮಾತನಾಡಿದ್ದಾರೆ.
'ನಾನು ಹಾಯ್ ಎಕ್ಸ್-ಗರ್ಲ್ ಫ್ರೆಂಡ್ ಎಂದು ಮೆಸೇಜ್ ಮಾಡಿದೆ. ಕಾರಣ ಆ ಚಿತ್ರದಲ್ಲಿ ಸಂಗೀತಾ ಪಾತ್ರ ಹೀಗಿತ್ತು. ಅಲ್ಲಿಂದ ಮಾತುಕಥೆ ಶುರುವಾಯ್ತು'
'ಸಿನಿಮಾ ಸೆಟ್‌ಗೆ ಪ್ರಯಾಣ ಮಾಡುವಾಗ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ನಮಗೆ ಮಾತನಾಡಲು ಸಮಯ ಸಿಗುತ್ತಿತ್ತು. ಅಲ್ಲಿಂದ ಪ್ರೀತಿ ಶುರುವಾಯ್ತು' ಎಂದು ಸಂಗೀತಾ ಹೇಳಿದ್ದಾರೆ.
'ಜಯನಗರ ನಾಲ್ಕನೇ ಬ್ಲಾಕ್ ನಮಗೆ ತುಂಬಾನೇ ಸ್ಪೆಷಲ್ ಕಾರಣ ಆ ಜಾಗದಲ್ಲಿ ನಾವಿಬ್ಬರು ಪ್ರೀತಿ ಇದೆ ಎಂದು ಹೇಳಿಕೊಂಡು ಒಬ್ಬರನ್ನೊಬ್ಬರು ಒಪ್ಪಿಕೊಂಡಿದ್ದು'
'ಸಂಗೀತಾಗೆ ಸ್ಕೂಟರ್ ತುಂಬಾನೇ ಅಗತ್ಯವಿತ್ತು. ಆಗ ನನಗೆ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ ಆದರೂ ನಾನು ಕೊಡಿಸಿದೆ. ಲೋನ್ ತೀರಿಸಲು ಮೂರು ವರ್ಷ ಹಿಡಿಯಿತ್ತು ಎಂದಿದ್ದಾರೆ ಸುದರ್ಶನ್.
'ಕೊರಮಂಗಲ, ಬಿಟಿಎಮ್ ಲೇಔಟ್‌ಗಳಲ್ಲಿ ಹೆಚ್ಚಿನ ಸಣ್ಣ ಪುಟ್ಟ ಫುಡ್ ಅಂಗಡಿಯಲ್ಲಿ ಫುಡ್ ಎಂಜಾಯ್ ಮಾಡಿದ್ದೀವಿ. ಮಲ್ಲೇಶ್ವರಂಗೆ ಪಡೆಯಾಣ ಮಾಡಿ ಅಲ್ಲಿ ಬೇಕರಿಗಳಲ್ಲಿ ವೆಚ್ ಪಪ್ಸ್ ಮತ್ತು ಕೇಕ್ ತಿನ್ನಲು ಇಷ್ಟ' ಎಂದಿದ್ದಾರೆ.