ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 8ರ ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿ ವೈಜಯಂತಿ ವಾಸುದೇವ್ ಅಡಿಗ.
'ಅಮ್ಮಚ್ಚಿಯೆಂಬ ನೆನಪುಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗದಕ್ಕೆ ಪಾದಾರ್ಪಣೆ ಮಾಡಿದರು.
ಬೆಂಗಳೂರಿನಲ್ಲಿರುವ ವಾಸುದೇವ ಅಡಿಗೆ ಹೋಟೆಲ್ ಓನರ್ ವೈಜಯಂತಿ. ಈದೀಗ ಆ ಹೋಟೆಲ್ ಪಾಕಶಾಲಾ ಹಾಗೂ ಉಡುಪಿ ಉಪಚಾರ್ ಆಗಿ ವಿಂಗಡವಾಗಿದೆ.
ಬೆಂಗಳೂರಿನ ಕ್ರೈಸ್ಟ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿರುವ ವೈಜಯಂತಿ ಉನ್ನತ ಶಿಕ್ಷಣಕ್ಕಾಗಿ ಕೆಲ ವರ್ಷಗಳ ಕಾಲ ವಿದೇಶದಲ್ಲಿದ್ದರು.
'ನಾನು ರಿಯಲ್ ಲೈಫ್‌ನಲ್ಲಿ extrovert, ನನ್ನ ಈ ಗುಣದಿಂದ ಮನೆಯಲ್ಲಿರುವವರ ಜೊತೆಗಿರುವುದು ಸುಲಭವಾಗಬಹುದು. ಎಷ್ಟು ದಿನ ಬಿಬಿ ಮನೆಯಲ್ಲಿ ಇರುತ್ತೇನೆ ಗೊತ್ತಿಲ್ಲ ಆದರೆ ಹೊರ ಬಂದಾಗ ಒಂದೊಳ್ಳೆ ವ್ಯಕ್ತಿ ಆಗಿರುತ್ತೇನೆ' ಎಂದು ವೈಜಯಂತಿ ಹೇಳಿದ್ದಾರೆ.
'ಮನೆಯಲ್ಲಿ ಯಾರೂ ನನಗೆ ಪರಿಚಯವಿಲ್ಲ ಆದರೆ ರಾಜೀವ್ ಆಡುತ್ತಿರುವ ಗೇಮ್ ನನಗೆ ಇಷ್ಟ. ಶಮಂತ್ ಈ ಮನೆಯಲ್ಲಿ ಇರುವುದು ವೇಸ್ಟ್ ಎಂದೆನಿಸುತ್ತಿದೆ. ಆತ ಇನ್ನು ಗೇಮ್ ಶುರು ಮಾಡಿಲ್ಲ' ಎಂದಿದ್ದಾರೆ.
'ತಂದೆ ತಾಯಿ ತುಂಬಾ ಖುಷಿಯಾಗಿದ್ದಾರೆ. ನನಗೆ ಕಲರ್‌ಫುಲ್ ಜೀವನ ಸಿಗಲಿದೆ ಎಂಬ ಭಾವನೆ ಇದೆ. ನೋಡೋಣ ಒಂದು ಮನೆಯಲ್ಲಿ ಟಾಸ್ಕ್ ಮಾಡಿಕೊಂಡು ಇರುವುದು ತುಂಬಾನೇ ಕಷ್ಟ. ಎಷ್ಟು ದಿನ ಇರುವೆ ಗೊತ್ತಿಲ್ಲ' ಎಂದು ವೈಜಯಂತಿ ಹೇಳಿದ್ದಾರೆ.
ನಟನೆ ಹೊರತು ಪಡಿಸಿ ವೈಜಯಂತಿ ಕಥಕ್ ಡ್ಯಾನ್ಸರ್.