ಕನ್ನಡ ಚಿತ್ರರಂಗದ ಹಾಟ್ ನಟಿ ಎಂದೇ ಗುರುತಿಸಿಕೊಂಡಿರುವ ಶುಭಾ ಪೂಂಜಾ ಒಂದು ಕಾಲದಲ್ಲಿ ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ.
ಈ ನಟಿ ಹಾಟ್ ಪಾತ್ರಗಳಿಗೆ ಮಾತ್ರ ಸೂಕ್ತ. ಬೇರೆ ಪಾತ್ರ ಕೊಡಬೇಡಿ ಎಂದೆಲ್ಲಾ ಚರ್ಚೆ ನಡೆಯುತ್ತಿತ್ತು. ಶುಭಾ ಪೂಂಜಾ ವ್ಯಕ್ತಿತ್ವ ಎಂಥದ್ದು? ಎಂದು ಪ್ರಶ್ನೆ ಮಾಡಿದವರಿಗೆ ಬಿಗ್ ಬಾಸ್ ಮುಖಾಂತರ ಉತ್ತರ ಸಿಕ್ಕಿದೆ.
ಯಾರೊಬ್ಬರ ಬಗ್ಗೆಯೂ ಶುಭಾ ಕೆಟ್ಟದಾಗಿ ಮಾತನಾಡುವ ಹುಡುಗಿ ಅಲ್ಲ. ನಾನೊಬ್ಬ ನಟಿ ಎಂಂಬುದನ್ನು ಮರೆತು ಶ್ರೀಸಾಮಾನ್ಯರಂತೆ ವರ್ತಿಸುತ್ತಾರೆ. ಎಷ್ಟೇ ಕಷ್ಟದ ಟಾಸ್ಕ್ ಕೊಟ್ಟರೂ ಮಾಡುತ್ತಾರೆ.
ಶುಭಾ ಧರಿಸುವ ಬಟ್ಟೆಗಳೂ ಬಗ್ಗೆ ಜನರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಆದರೆ ಬಿಬಿ ಮನೆಯಲ್ಲಿ ವೈಷ್ಣವಿ ನಂತರ ಶುಭಾನೇ ಬೆಸ್ಟ್ ಎನ್ನುತ್ತಿದ್ದಾರೆ ವೀಕ್ಷಕರು.
ಟಾಸ್ಕ್ ಅಥವಾ ನಾಮಿನೇಟ್ ಆದರೆ ಮಾತ್ರ ಎಂಟರ್ಟೈಮೆಂಟ್ ನೀಡುವ ಜನರ ನಡುವೆ ಶುಭಾ ಪ್ರಾಮಾಣಿಕವಾಗಿ ಎಲ್ಲರನ್ನೂ ನಗಿಸುತ್ತಾರೆ.
ಶುಭಾ ಪೂಂಜಾಗೆ ಮದುವೆ ನಿಶ್ಚಯವಾಗಿದೆ. Fiance ಎನ್ನು ಮಿಸ್ ಮಾಡಿಕೊಂಡಾಗ ಅಳುತ್ತಾರೆ. ಇಲ್ಲವಾದರೆ ಮನೆಯಲ್ಲಿರುವ ಗೊಂಬೆಯನ್ನು ಫಿಯಾನ್ಸ್ ಎಂದುಕೊಂಡು ಮಾತನಾಡಿಸುತ್ತಾರೆ.
ಶುಭಾ ಪೂಂಜಾ ಸಿನಿಮಾ ಜರ್ನಿಯಲ್ಲಿ ಪಡೆದು ಕೊಂಡಿರುವುದು ಒಂದೇ ಅವಾರ್ಡ್. ಅದು ಮೊದಲನೇ ಸಿನಿಮಾಗೆ ಮಾತ್ರ. ಅದಿಕ್ಕೆ ಒಂದು ದೇವ್ವದ ಸಿನಿಮಾ ಮಾಡಬೇಕು. ನಾನು ದೆವ್ವ ಆಗಿರಬೇಕು ಎಂಬ ಆಸೆಯನ್ನು ಪದೇ ಪದೇ ಹೇಳಿ ಕೊಂಡಿದ್ದಾರೆ.
ಬಿಬಿ ಮನೆಯಲ್ಲಿರುವ ಕೆಲವೊಂದು ಸೌಲಭ್ಯಗಳನ್ನು ಕಸಿದುಕೊಂಡಾಗ, ಶುಭಾ ಮಗು ರೀತಿ ಅಳುತ್ತಾರೆ. ಹಠ ಮಾಡಿ ಪಡೆದುಕೊಳ್ಳುತ್ತಾರೆ. ನಾವು ಆನ್‌ಸ್ಕ್ರೀನ್‌ನಲ್ಲಿ ನೋಡಿದ ನಟಿಗೂ ಹೀಗೆ ನೋಡುವುದಕ್ಕೂ ವ್ಯತ್ಯಾಸ ಇದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.