ಆ.7 ಮತ್ತು 8ರಂದು ಬಿಗ್‌ಬಾಸ್‌ ಸೀಸನ್‌ 8 ಫಿನಾಲೆ!

Suvarna News   | Asianet News
Published : Jul 30, 2021, 02:36 PM IST

ಜನಪ್ರಿಯ ರಿಯಾಲಿಟಿ ಶೋ ಫಿನಾಲೆ ಹಂತ ತಲುಪುತ್ತಿದೆ. ಆಗಸ್ಟ್ 7 ಮತ್ತು 8ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ.  

PREV
15
ಆ.7 ಮತ್ತು 8ರಂದು ಬಿಗ್‌ಬಾಸ್‌ ಸೀಸನ್‌ 8 ಫಿನಾಲೆ!

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 8ರ ಗ್ರ್ಯಾಂಡ್‌ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. 

Bigg Boss New Season Sudeep

25

ಆಗಸ್ಟ್‌ 7 ಹಾಗೂ 8ರಂದು ಸಂಜೆ 6 ರಿಂದ ಫಿನಾಲೆ ಕಾರ್ಯಕ್ರಮ ನಡೆಯಲಿದೆ ಎಂದು ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ತಿಳಿಸಿದ್ದಾರೆ.

Big Boss Sudeep

35

ಈ ಬಗ್ಗೆ ಕನ್ನಡಪ್ರಭ ಜೊತೆಗೆ ಮಾತನಾಡಿದ ಅವರು, ‘ಬಿಗ್‌ಬಾಸ್‌ ಸೀಸನ್‌ 8ರ ಸೆಕೆಂಡ್‌ ಇನ್ನಿಂಗ್ಸ್‌ಗೆ ಅದ್ಭುತ ರೆಸ್ಪಾನ್ಸ್‌ ಬಂದಿದೆ. ಇದೊಂದು ಅನಿರೀಕ್ಷಿತ ಸಂಭ್ರಮ. ನಾನು ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಬೇಕು ಅಂತ ಅಂದುಕೊಂಡಾಗ ಎಲ್ಲರೂ ಇದು ರಿಸ್ಕ್‌, ಬೇಡ ಅಂತಲೇ ಹೇಳಿದರು.'

Kiccha sudeep 

45

' ನನಗೂ ಭಯ ಇತ್ತು. ಆದರೆ ಒಬ್ಬರಿಗೊಬ್ಬರು ಗೊತ್ತಿರೋದು ಅಥವಾ ಇಂಥವರೇ ಬರುತ್ತಾರೆ ಅನ್ನುವುದು ಯಾವ ರೀತಿಯಲ್ಲೂ ಈ ಆಟವನ್ನು ಬದಲಾಯಿಸಲ್ಲ ಅನ್ನೋದು ನನ್ನ ಬಲವಾದ ನಂಬಿಕೆ ಆಗಿತ್ತು. ಆ ನಂಬಿಕೆ ಮೇಲೆ ಹೋದೆ. ಅದು ಬಹಳ ಚೆನ್ನಾಗಿ ವರ್ಕ್ ಆಯ್ತು. ಶೇ.50 ರಷ್ಟುವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಯ್ತು. ಭರ್ಜರಿ ಯಶಸ್ಸು ಸಿಕ್ಕಿತು’ ಎಂದಿದ್ದಾರೆ.

sudeep bigg boss 8

55

‘ಬಿಗ್‌ಬಾಸ್‌ ಫಿನಾಲೆ ಎಂದಿನ ಜೋಶ್‌ನಲ್ಲೇ ನಡೆಯಲಿದ್ದು, ವಿಜೇತರಿಗೆ 50 ಲಕ್ಷ ರು. ಕ್ಯಾಶ್‌ಪ್ರೈಸ್‌ ಸಿಗಲಿದೆ. ರನ್ನರ್‌ ಅಪ್‌ಗೂ ಉತ್ತಮ ಮೊತ್ತ ಸಿಗಲಿದೆ. ಜೊತೆಗೆ ಪ್ರಾಯೋಜಕರ ಮೂಲಕ ಐದೂ ಜನ ಸ್ಪರ್ಧಿಗಳಿಗೂ ಈ ಬಾರಿ ಬಹುಮಾನ ಸಿಗಲಿದೆ’ ಎಂದೂ ತಿಳಿಸಿದ್ದಾರೆ

Bigg boss sudeep

click me!

Recommended Stories