ಬಿಗ್‌ ಬಾಸ್‌ ಸೀಸನ್ 10ರ ಅತಿ ಕೆಟ್ಟ ದಾಖಲೆಗಳು; ಇದು ಯಾರ ತಪ್ಪು ನೀವೇ ತೀರ್ಮಾನಿಸಿ..

Published : Jan 30, 2024, 08:13 PM ISTUpdated : Jan 30, 2024, 09:53 PM IST

ಬೆಂಗಳೂರು (ಜ.30): ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡ ಬಿಗ್‌ ಬಾಸ್‌ ಕನ್ನಡ ಸೀಸನ್-10ರ ಕಂಟೆಸ್ಟೆಂಟ್‌ಗಳು ಹಲವು ಕೆಟ್ಟ ದಾಖಲೆಗಳನ್ನು ಮಾಡಿದ್ದಾರೆ. ಬಿಗ್‌ ಬಾಸ್‌ ಇತಿಹಾಸದಲ್ಲಿ ಕೆಟ್ಟ ದಾಖಲೆಗಳ ಮಾಹಿತಿ ಇಲ್ಲಿದೆ ನೋಡಿ..

PREV
110
ಬಿಗ್‌ ಬಾಸ್‌ ಸೀಸನ್ 10ರ ಅತಿ ಕೆಟ್ಟ ದಾಖಲೆಗಳು; ಇದು ಯಾರ ತಪ್ಪು ನೀವೇ ತೀರ್ಮಾನಿಸಿ..

ಕೆಟ್ಟ ದಾಖಲೆ-1
ಬಿಗ್‌ ಬಾಸ್ ಸೀಸನ್ 10 ಅನ್ನು 16 ವಾರಗಳ ಕಾಲ ನಡೆಸಲಾಗಿದೆ ಆದರೂ ಎಲ್ಲ ಕಂಟೆಸ್ಟೆಂಟ್‌ಗಳು ಸೇರಿ ಒಂದೇ ಒಂದು ಲಕ್ಸುರಿ ಬಜೆಟ್‌ ಅನ್ನು ಮನೆಗೆ ಪಡೆಯುವಲ್ಲಿ ಯಶಸ್ವಿ ಆಗಲಿಲ್ಲ.

210

ಕೆಟ್ಟ ದಾಖಲೆ-2
ಬಿಗ್‌ ಬಾಸ್ ಇತಿಹಾಸದ 10 ಸೀಸನ್‌ಗಳಲ್ಲಿ ಒಂದೇ ಒಂದು ಲಕ್ಸುರಿ ಬಜೆಟ್ ಅನ್ನು ಬಳಕೆ ಮಾಡಿಕೊಳ್ಳದೇ ಸೀಸನ್ ಮುಗಿಸಿದ ಕೆಟ್ಟ ಕೀರ್ತಿಯನ್ನು ಕಂಟೆಸ್ಟೆಂಟ್‌ಗಳು ಗಳಿಸಿದ್ದಾರೆ.

310

ಕೆಟ್ಟ ದಾಖಲೆ-3
ಬಿಗ್‌ ಬಾಸ್‌ ಸೀಸನ್ 10ರಲ್ಲಿ 6 ಕಂಟೆಸ್ಟಂಟ್‌ಗಳು ಫೈನಲ್‌ಗೆ ಬಂದಿದ್ದರೂ ಈ ಪೈಕಿ ಇಬ್ಬರು ಕಂಟೆಸ್ಟೆಂಟ್‌ಗಳು ಟಾಸ್ಕ್‌ ಗೆದ್ದು ಕ್ಯಾಪ್ಟನ್ ಆಗದೇ ಫೈನಲ್‌ಗೆ ಬಂದಿದ್ದಾರೆ. ಈ ಪೈಕಿ ತುಕಾಲಿ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಅವರು ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದೇ ಇಲ್ಲ.

410

ಕೆಟ್ಟ ದಾಖಲೆ-4
ಬಿಬಿಕೆ-10 ಸೀಸನ್‌ ಅತಿಹೆಚ್ಚು ಜನಪ್ರಿಯತೆ ಪಡೆದ ಹಾಗೂ ಟಿಆರ್‌ಪಿ ಪಡೆದ ಸೀಸನ್ ಎಂದು ಕಲರ್ಸ್‌ ಕನ್ನಡ ವಾಹಿನಿ ಹೇಳಿಕೊಂಡಿದೆ. ಆದರೆ, ಇದರಲ್ಲಿ ಡ್ರೋನ್‌ ಪ್ರತಾಪ್‌ ಅವರಿಗೆ 2.20 ಕೋಟಿ ಓಟುಗಳು ಬಿದ್ದಿದ್ದರೂ ಅವರು ಒಂದು ಬಾರಿಯೂ ಕ್ಯಾಪ್ಟನ್ ಆಗಿಲ್ಲ.

510

ಕೆಟ್ಟ ದಾಖಲೆ- 5 
ಭಾರತದ ಹಲವು ಭಾಷೆಗಳ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ ಬಾಸ್‌ ರಿಯಾಲಿಟಿ ಶೋ ಇತಿಹಾಸದಲ್ಲಿ ಬಿಗ್‌ಬಾಸ್‌ ಮನೆಯೊಳಗಿದ್ದ ವ್ಯಕ್ತಿಯೊಬ್ಬರು (ವರ್ತೂರು ಸಂತೋಷ್) ಜೈಲಿಗೆ ಹೋಗಿ ವಾಪಸ್ ಬಂದಿರುವ ಘಟನೆ ಕನ್ನಡ ಬಿಗ್‌ಬಾಸ್‌ ಸೀಸನ್ 10ರಲ್ಲಿ ನಡೆದಿದೆ.
 

610

ಬಿಗ್‌ ಬಾಸ್‌ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್‌ ಅವರೇ ಎರಡು ಬಾರಿ ಲಕ್ಸುರಿ ಬಜೆಟ್‌ನಲ್ಲಿ ಸಾಮಗ್ರಿ ಖರೀದಿ ಮಾಡುವಾಗ ತಪ್ಪು ಮಾಡಿದ್ದಾರೆ. ಇದರಿಂದ ಲಕ್ಸುರಿ ಬಜೆಟ್‌ ಅನ್ನು ಕಳೆದುಕೊಳ್ಳಲಾಗಿತ್ತು.

710

ಬಿಗ್‌ ಬಾಸ್ ಮನೆಯಲ್ಲಿ ಸಂಗೀತಾ ಶೃಂಗೇರಿ, ನಮ್ರತಾ ಗೌಡ ಅವರೊಂದಿಗೆ ಫ್ಲರ್ಟ್‌ ಮಾಡುವುದು ಹಾಗೂ ಬೆಂಕಿ ಖ್ಯಾತಿಯ ತನಿಶಾ ಕುಪ್ಪಂಡ ಅವರೊಂದಿಗೆ ಸ್ನೇಹವನ್ನು ಬೆಳೆಸಿದ್ದ ಕಾರ್ತಿಕ್ ಮಹೇಶ್‌ಗೆ ಜನರು ಪರ್ಫೆಕ್ಟ್‌ ಫ್ಯಾಮಿಲಿ ಮ್ಯಾನ್ ಎಂದು ಹೇಳುತ್ತಿದ್ದರು.
 

810

ಬಿಗ್‌ ಬಾಸ್ ಮನೆಯ ಪರ್ಫೆಕ್ಟ್‌ ಫ್ಯಾಮಿಲಿ ಮ್ಯಾನ್ ಖ್ಯಾತಿಯ ಕಾರ್ತಿಕ್ ಮಹೇಶ್ ಅವರು ಬಿಗ್‌ಬಾಸ್ ಸೀಸನ್ 10ರ ವಿಜೇತರಾಗಿದ್ದು, 50 ಲಕ್ಷ ರೂ. ನಗದು, ಒಂದು ಕಾರು ಹಾಗೂ ಒಂದು ಬೈಕ್‌ ತಮ್ಮದಾಗಿಸಿಕೊಂಡಿದ್ದಾರೆ.

910

ಬಿಗ್‌ ಬಾಸ್‌ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್‌ ಅವರೇ ಎರಡು ಬಾರಿ ಲಕ್ಸುರಿ ಬಜೆಟ್‌ನಲ್ಲಿ ಸಾಮಗ್ರಿ ಖರೀದಿ ಮಾಡುವಾಗ ತಪ್ಪು ಮಾಡಿದ್ದಾರೆ. ಇದರಿಂದ ಲಕ್ಸುರಿ ಬಜೆಟ್‌ ಅನ್ನು ಕಳೆದುಕೊಳ್ಳಲಾಗಿತ್ತು.

1010

ಬಿಗ್‌ ಬಾಸ್ ಸೀಸನ್ 10ರ ಗೆಲ್ಲುವ ಕುದುರೆಗಳು ಎಂದು ಹೇಳಲಾಗುತ್ತಿದ್ದ ಆನೆ ಖ್ಯಾತಿಯ ವಿನಯ್‌ಗೌಡ, ಸಂಗೀತಾ ಶೃಂಗೇರಿ ಹಾಗೂ ನಮ್ರತಾಗೌಡ ರನ್ನರ್‌ ಆಗುವುದಕ್ಕೂ ಕೂಡ ಸಾಧ್ಯವಾಗದೇ ಮನೆಗೆ ಮರಳಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories