ಸಾನ್ಯಾ ಅಯ್ಯರ್ ಸ್ಟೈಲಿಶ್ ಲುಕ್ ನೋಡಿ ಹಾಟ್ ಬಾಂಬ್ ಅಂತಿದ್ದಾರೆ ಫ್ಯಾನ್ಸ್

First Published | Sep 9, 2024, 12:49 PM IST

ತಮ್ಮ ಬೋಲ್ಡ್ ಫ್ಯಾಷನ್ ಸೆನ್ಸ್ ನಿಂದಾನೆ ಜನಪ್ರಿಯತೆ ಪಡೆದಿರುವ ಸಾನ್ಯಾ ಅಯ್ಯರ್, ಇದೀಗ ಮತ್ತೊಂದು ಫೋಟೊ ಶೂಟ್ ಮೂಲಕ ಸಾನ್ಯಾ ತಾವೊಬ್ಬ ಫ್ಯಾಷನಿಸ್ಟ ಅನ್ನೋದನ್ನ ತೋರಿಸಿದ್ದಾರೆ. 
 

ಸ್ಯಾಂಡಲ್’ವುಡ್ ನಟಿ ಸಾನ್ಯಾ ಅಯ್ಯರ್ (Saanya Iyer) ಮೊದಲಿನಿಂದಲೂ ತಮ್ಮ ಫ್ಯಾಷನ್ ಸೆನ್ಸ್ ನಿಂದ ಜನಪ್ರಿಯತೆ ಪಡೆದಿದ್ದಾರೆ. ಪ್ರತಿ ಬಾರಿಯೂ ಹೊಸ ಹೊಸ ರೀತಿಯ ಔಟ್ ಫಿಟ್ ಗಳನ್ನು ಧರಿಸಿ ಸ್ಟೈಲಿಶ್ ಆಗಿ ಪೋಸ್ ನೀಡುತ್ತಾರೆ ಸಾನ್ಯಾ. 
 

ಕನ್ನಡ ಕಿರುತೆರೆಗೆ ಬಾಲನಟಿಯಾಗಿ ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟ ಸಾನ್ಯಾ ಅಯ್ಯರ್, ಬಳಿಕ ಸಿನಿಮಾದಲ್ಲಿ ಬಾಲ ನಟಿಯಾಗಿ ಸ್ಟಾರ್ ನಟರೊಂದಿಗೆ ನಟಿಸಿದ್ದರು. ಇವರಿಗೆ ಜನಪ್ರಿಯತೆ ತಂದು ಕೊಟ್ಟಿದ್ದು, ಬಿಗ್ ಬಾಸ್ ಕನ್ನಡ ಒಟಿಟಿ ಮತ್ತು ಬಿಗ್ ಬಾಸ್ ಸೀಸನ್ 9 (Bigg Boss Season 9). 
 

Tap to resize

ಬಿಗ್ ಬಾಸ್ ಸೀಸನ್ 9ರ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದ ಸಾನ್ಯಾ ಅಯ್ಯರ್, ಈಗಾಗಲೇ ಇಂದ್ರಜಿತ್ ಲಂಕೇಶ್ ಅವರ ಗೌರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ (sandalwood) ಎಂಟ್ರಿ ಕೊಟ್ಟಾಗಿದೆ. ಈ ಸಿನಿಮಾದಲ್ಲಿ ಸಮರ್ಜಿತ್ ಗೆ ನಾಯಕಿಯಾಗಿ ಸಾನ್ಯಾ ನಟಿಸಿದ್ದಾರೆ. 
 

ಸಿನಿಮಾ, ಶೂಟ್ ನಡುವೆ ಬ್ರೇಕ್ ಸಿಕ್ಕಾಗಲೆಲ್ಲಾ, ತಮ್ಮ ಫ್ಯಾಮಿಲಿ ಜೊತೆಗೆ, ಅಮ್ಮನ ಜೊತೆ ದೇಶ, ವಿದೇಶ ಸುತ್ತುವ ಸಾನ್ಯಾ ಅಯ್ಯರ್ ಸದ್ಯ ಅಮ್ಮನ ಜೊತೆ ಯುಎಸ್ ಎಯಲ್ಲಿ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ, ಪ್ರವಾಸಿ ತಾಣಗಳನ್ನು ಸುತ್ತಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. 
 

ಇದೆಲ್ಲದರ ಮಧ್ಯೆ ಸಾನ್ಯಾ ಅಯ್ಯರ್ ಸಖತ್ ಸ್ಟೈಲಿಶ್ ಆಗಿರುವ ಬಾಡಿ ಕಾನ್ ಜಂಪ್ ಸೂಟ್ ಧರಿಸಿ ಫೋಟೊ ಶೂಟ್ ಮಾಡಿಸಿಕೊಂದು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್ ಬೋಲ್ಡ್ ಮತ್ತು ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ. 
 

ಇದು ಕೂಡ ಯುಎಸ್’ಎ ನಲ್ಲಿ ತೆಗೆದಿರುವಂತಹ ಫೋಟಿ ಆಗಿದ್ದು, ಅಮೇರಿಕಾದ ವರ್ಜೀನಿಯಾದಲ್ಲಿ ನಡೆದ ಅಕ್ಕ ಸಮ್ಮೇಳದಲ್ಲಿ ಸಾನ್ಯಾ ಅಯ್ಯರ್ ನೃತ್ಯ ಪ್ರದರ್ಶನ ಮಾಡಿದ್ದರು. ಈ ಸಂದರ್ಭದಲ್ಲಿ ಕಪ್ಪು ಬಣ್ಣದ ಬಾಡಿ ಹಗ್ಗಿಂಗ್ ಜಂಪ್ ಸೂಟ್ ಧರಿಸಿದ್ದು, ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. 
 

ಸಾನ್ಯಾ ಅಯ್ಯರ್ ಈ ಮಾಡರ್ನ್ ಲುಕ್ ಗೆ (modern look) ಅಭಿಮಾನಿಗಳು ಫಿದಾ ಆಗಿದ್ದು, ಬಾಂಬ್, ಸ್ಟನ್ನಿಂಗ್, ಹಾಟ್ , ಪ್ರಿಟಿಯೆಸ್ಟ್, ಸ್ಪೈಡರ್ ವುಮೆನ್, ಹಾಟ್ ಬಾಂಬ್, ಇಂಡಿಯನ್ ಮರ್ಮೈಡ್ ಎಂದೆಲ್ಲಾ ಕಾಮೆಂಟ್ ಮಾಡಿ, ನೆಚ್ಚಿನ ನಟಿಯ ಲುಕ್ ನ್ನು ಹೊಗಳಿದ್ದಾರೆ. 

Latest Videos

click me!