ನೇಹಾ ಗೌಡ ಸೀಮಂತಕ್ಕೆ ಪತಿ ಚಂದು ಜೊತೆ ಹೊಟ್ಟೆ ಹೊತ್ತು ಬಂದ ಚಿನ್ನು ಉರಫ್ ಕವಿತಾ!

Published : Aug 22, 2024, 02:19 PM ISTUpdated : Aug 22, 2024, 02:37 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ನಟಿಸಿ, ಇಂದಿಗೂ ಸಹ ವೀಕ್ಷಕರ ಪ್ರೀತಿಯ ಗೊಂಬೆಯಾಗಿ ಜನಪ್ರಿಯತೆ ಪಡೆದಿರುವ ನಟಿ ನೇಹಾ ಗೌಡ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.   

PREV
19
ನೇಹಾ ಗೌಡ ಸೀಮಂತಕ್ಕೆ ಪತಿ ಚಂದು ಜೊತೆ ಹೊಟ್ಟೆ ಹೊತ್ತು ಬಂದ ಚಿನ್ನು ಉರಫ್ ಕವಿತಾ!

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಬೊಂಬೆ ಖ್ಯಾತಿಯ ನೇಹಾ ಗೌಡ (Neha Gowda) ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮದಲ್ಲಿ ಕಿರುತೆರೆಯ ತಾರೆಯರು ಭಾಗಿಯಾಗಿದ್ದಾರೆ. 
 

29

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನೇಹಾ ಗೌಡ, ಬೊಂಬೆಯಾಗಿ ಜನಪ್ರಿಯತೆ ಪಡೆದರು. ನಂತರ, ತಮಿಳು ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ನಮ್ಮ ಲಚ್ಚಿ ಧಾರಾವಾಹಿಯಲ್ಲೂ ನಟಿಸಿದ್ದರು. 
 

39

ನರ್ಸರಿಯಿಂದಲೇ ಜೊತೆಯಾಗಿ ಓದುತ್ತಿದ್ದ ನೇಹಾ ಗೌಡ ಮತ್ತು ಚಂದನ್ ಗೌಡ ಸ್ನೇಹಿತರಾಗಿ, ನಂತರ ಪ್ರೀತಿಸಿ, 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ 20 ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಜಡಿದರು. 
 

49

ಆಸ್ಟ್ರೇಲಿಯಾದಲ್ಲಿ ಕೆಲಸದಲ್ಲಿದ್ದ ಚಂದನ್ ಗೌಡ, ರಾಜಾ ರಾಣಿ ಸೀಸನ್ 1 (Raja Rani) ರಲ್ಲಿ ಭಾಗವಹಿಸೋದಕ್ಕಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಮತ್ತೆ ಬೆಂಗಳೂರಿಗೆ ಬಂದಿದ್ದರು. ನೇಹಾ ಮತ್ತು ಚಂದನ್ ಜೋಡಿಯಾಗಿ ಭಾಗವಹಿಸಿದ್ದ ಈ ರಿಯಾಲಿಟಿ ಶೋದಲ್ಲಿ ರಾಜಾ ರಾಣಿ ಕಿರೀಟವನ್ನು ಧರಿಸಿದ್ದು ಕೂಡ ಈ ಜೋಡಿ. 
 

59

ಇದಾದ ಮೇಲೆ ಚಂದನ್ (Chandan Gowda) ಅದೃಷ್ಟ ಖುಲಾಯಿಸಿತು ಎನ್ನಬಹುದು, ನಟನೆ, ಡ್ಯಾನ್ಸ್ ಗೊತ್ತೆ ಇಲ್ಲದ ಚಂದನ್ ಗೆ, ರಾಜಾ ರಾಣಿ ಬಳಿಕ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಭಾಗವಹಿಸೋ ಅವಕಾಶ ಸಿಕ್ಕಿತ್ತು, ಅದು ಮುಗಿಯುತ್ತಿದ್ದಂತೆ ಅಂತರಪಟ ಧಾರಾವಾಹಿಯಲ್ಲಿ ನಟಿಸೋ ಅವಕಾಶ ಪಡೆದುಕೊಂಡರು. 
 

69

ಇದೀಗ ಕಿರುತೆರೆಯ ಈ ಜೋಡಿ ಪೋಷಕರಾಗಿ ಭಡ್ತಿ ಪಡೆಯೋ ಸಂಭ್ರಮದಲ್ಲಿದ್ದು, ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನಡೆಸಿದ್ದರು. ಕಿರುತೆರೆಯ ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ. 
 

79

ಸೀರಿಯಲ್ ತಾರೆಯರ ಫೋಟೊಗಳು ಸೋಶಿಯಲ್ ಮೀಡೀಯಾದಲ್ಲಿ (Social Media) ವೈರಲ್ ಆಗುತ್ತಿದ್ದು, ಅನುಪಮಾ ಗೌಡ, ನಮೃತಾ ಗೌಡ, ತಾರಾ ಅನುರಾಧ, ಚೈತ್ರಾ ವಾಸುದೇವನ್, ಇಶಿತಾ ವರ್ಷ ಮೊದಲಾದ ನಟಿಯರು ಆಗಮಿಸಿ ಶುಭ ಕೋರಿದ್ದಾರೆ.
 

89

ಅಷ್ಟೇ ಅಲ್ಲದೇ ಬಿಗ್ ಬಾಸ್ ಸೀಸನ್ 10 ರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh), ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನೇಹಾ ಗೌಡ ಜೊತೆಗೆ ನಟಿಸಿದ್ದ ಚಿನ್ನು ಖ್ಯಾತಿಯ ಕವಿತಾ ಗೌಡ, ಚಂದು ಖ್ಯಾತಿಯ ಚಂದನ್ ಕುಮಾರ್ ಕೂಡ ಭಾಗಿಯಾಗಿದ್ದರು. ಕವಿತ ಗೌಡ ಕೂಡ ಈಗ ಗರ್ಭಿಣಿ. 
 

99

ಅಷ್ಟೇ ಅಲ್ಲದೇ ಚಂದನ್ ಗೌಡ ನಾಯಕನಾಗಿ ನಟಿಸುತ್ತಿರುವ ಅಂತರಪಟ ಧಾರಾವಾಹಿಯ ನಿರ್ದೇಶಕಿ ಸ್ವಪ್ನಾ ಕೃಷ್ಣ, ನಾಯಕಿ ತನ್ವಿಯಾ ಬಾಲರಾಜ್, ಜ್ಯೋತಿ ಕಿರಣ್ ಸೇರಿ ಸೀರಿಯಲ್ ನ ಎಲ್ಲಾ ತಾರಾಗಣವೇ ಸೀಮಂತದಲ್ಲಿ ಭಾಗಿಯಾಗಿತ್ತು. 
 

Read more Photos on
click me!

Recommended Stories