Brahmagantu ಡೈರೆಕ್ಟರ್​ ಸಾಹೇಬ್ರೇ, ಇದೇನಿದು ಅನ್ಯಾಯ? ದೀಪಾಗೆ ವಾಟರ್​ಪ್ರೂಫ್​ ಮೇಕಪ್​ ಕೊಡೋದಲ್ವಾ?

Published : Dec 22, 2025, 04:32 PM IST

ಬ್ರಹ್ಮಗಂಟು ಸೀರಿಯಲ್​ನಲ್ಲಿ ದೀಪಾ ಮತ್ತು ದಿಶಾ ಒಬ್ಬಳೇ ಎಂಬ ಸತ್ಯ ರೂಪಾಳಿಗೆ ತಿಳಿದಿದೆ. ಈ ಸತ್ಯವನ್ನು ಬಯಲು ಮಾಡಲು ರೂಪಾ, ದೀಪಾಳ ಮುಖಕ್ಕೆ ನೀರು ಎರಚುತ್ತಾಳೆ, ಇದರಿಂದ ಆಕೆಯ ಮೇಕಪ್ ಅಳಿಸಿಹೋಗುತ್ತದೆ. ಇದನ್ನು ನೋಡಿದ ನೆಟ್ಟಿಗರು ವಾಟರ್​ಪ್ರೂಫ್ ಮೇಕಪ್ ಇರಲಿಲ್ವಾ ಎಂದು  ಟ್ರೋಲ್ ಮಾಡುತ್ತಿದ್ದಾರೆ.

PREV
16
ಬ್ರಹ್ಮಗಂಟು ಟ್ವಿಸ್ಟ್​

ಬ್ರಹ್ಮಗಂಟು ಸೀರಿಯಲ್​ (Brahmagantu Serial)ನಲ್ಲಿ ಇದೀಗ ದೀಪಾಗೆ ಹಿನ್ನಡೆಯಾಗುತ್ತದೆ. ದಿಶಾ ಮತ್ತು ದೀಪಾ ಒಬ್ಬಳೇ ಎನ್ನೋದು ತಿಳಿದಿರೋ ರೂಪಾ ಆಕೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾಳೆ.

26
ಕಾಟ ಕೊಡ್ತಿರೋ ರೂಪಾ

ದುಡ್ಡನ್ನು ಕದ್ದಿರೋ ಕೇಸ್​ನಲ್ಲಿ ದೀಪಾಳನ್ನು ಜೈಲಿಗೆ ಅಟ್ಟಿದ್ದ ರೂಪಾ, ಅದನ್ನೇ ಮುಂದು ಮಾಡಿಕೊಂಡು ದಿಶಾಳಿಗೆ ಕಾಟ ಕೊಡುತ್ತಿದ್ದರು. ಚಿರಾಗ್​ನ ಪರ್ಸನಲ್​ ಅಸಿಸ್ಟೆಂಟ್​ ಆಗಿ ನೇಮಕ ಮಾಡಿಸಿಕೊಳ್ಳೋದು ನಿನ್ನ ಜವಾಬ್ದಾರಿ ಎಂದು ಹೇಳಿ, ಅದೇ ಆಫೀಸ್​ನಲ್ಲಿ ಉಳಿದುಕೊಳ್ಳುವಂತೆ ಮಾಡಿದಳು.

36
ನೀರು ಸೋಕಿಸಿದ ರೂಪಾ

ಇದೀಗ ಅವಳದ್ದು ಮಿತಿಮೀರಿದಾಗ ಏನು ಬೇಕಾದ್ರೂ ಮಾಡಿಕೋ ಎಂದು ದೀಪಾ ಹೇಳಿದಾಗ, ಕೊನೆಯ ಅಸ್ತ್ರವಾಗಿ ರೂಪಾ, ಅಲ್ಲಿದ್ದ ನೀರನ್ನು ದೀಪಾಳ ಮುಖದ ಮೇಲೆ ಚೆಲ್ಲಿ, ನೀನೇ ದೀಪಾ ಎನ್ನುವುದು ನನಗೆ ಗೊತ್ತು ಎಂದಿದ್ದಾಳೆ.

46
ಅಳಿಸಿದ ದಿಶಾ ಬಣ್ಣ

ಕುತೂಹಲ ಎಂದರೆ, ನೀರು ಸೋಕಿದ ತಕ್ಷಣ ದಿಶಾ ಹಾಕಿಕೊಂಡಿದ್ದ ಬಣ್ಣ ಎಲ್ಲಾ ಹೋಗಿ ಬಿಟ್ಟಿದೆ. ದಿಶಾ ಎಚ್ಚರ ತಪ್ಪಿದ್ದ ಸಂದರ್ಭದಲ್ಲಿ ಚಿರಾಗ್​ ನೀರು ಹಾಕಿದಾಗ ಹೋಗದಿದ್ದ ಮೇಕಪ್​ ಈಗ ಹೇಗೆ ಹೋಯ್ತು ಎಂದು ಇನ್ನಿಲ್ಲದಂತೆ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

56
ವಾಟರ್​ಪ್ರೂಫ್ ಮೇಕಪ್​

ದಿಶಾಳಿಗೆ ವಾಟರ್​ಪ್ರೂಫ್ ಮೇಕಪ್​ ಕೊಡೋದು ಅಲ್ವಾ ಡೈರೆಕ್ಟರ್​ ಸಾಹೇಬ್ರೆ ಎಂದು ನೆಟ್ಟಿಗರು ಕೇಳ್ತಿದ್ದಾರೆ. ನೀರು ಹಾಕಿದ ತಕ್ಷಣ ಮೇಕಪ್​ ಅಳಿಸಿಹೋಗುವುದು ಎಂದರೆ ಏನರ್ಥ, ಬೇರೆ ರೀತಿಯಲ್ಲಿ ಈ ವಿಷಯ ತನಗೆ ಗೊತ್ತು ಎಂದು ರೂಪಾ ಹೇಳಬಹುದಿತ್ತಲ್ವಾ, ಈ ರೀತಿಯ ನಾನ್​ಸೆನ್ಸ್​ ಸೀನ್​ ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

66
ಸರಿಯಾಗಿ ಆಯ್ತು

ಮತ್ತೆ ಕೆಲವರು ದೀಪಾಗೆ ಸರಿಯಾಗಿ ಆಯಿತು. ರೂಪಾಳನ್ನು ಹೊರಕ್ಕೆ ಹಾಕಿದಾಗ, ಅತಿ ಒಳ್ಳೆಯತನ ತೋರಿಸಿ ಅವಳನ್ನು ಕೆಲಸಕ್ಕೆ ಇಟ್ಟುಕೊಂಡಳು. ಅಕ್ಕ ಅಕ್ಕ ಎಂದು ಮಮಕಾರ ತೋರಿದಳು. ಅದಕ್ಕೆ ಸರಿಯಾದ ಶಾಸ್ತಿ ಆಗಿದೆ. ಅವಳಿಗೆ ಆಗಬೇಕಾದದ್ದೇ ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories