ಅಬ್ಬಬ್ಬಾ, ಎಲ್ಲೆ ಮೀರಿ ಬೋಲ್ಡ್ ದೃಶ್ಯಗಳಿರೋ ವೆಬ್ ಸೀರಿಸ್ ಇವು! ನೋಡೋದಾದ್ರೆ ಒಬ್ರೇ ನೋಡಿ

First Published | Nov 4, 2023, 4:43 PM IST

ಇಂದಿನ ದಿನಗಳಲ್ಲಿ ಸಿನಿಮಾಗಳಿಗಿಂತ ವೆಬ್ ಸೀರಿಸ್ ಗಳನ್ನು ಪ್ರೇಕ್ಷಕರು ಹೆಚ್ಚು ಇಷ್ಟಪಡುತ್ತಿದ್ದಾರೆ. ಪ್ರತಿದಿನ ವೀಕ್ಷಕರು ಕೆಲವು ಹೊಸ ವೆಬ್ ಸರಣಿಗಳನ್ನು ನೋಡುತ್ತಾರೆ. ಆದರೆ ವೆಬ್ ಸೀರೀಸ್‌ಗಳು ಬೋಲ್ಡ್ ಸೀನ್‌ಗಳಿಂದ ತುಂಬಿರುವುದು ಸ್ಪಷ್ಟ. ಬೋಲ್ಡ್‌   ದೃಶ್ಯಗಳಿಗೆ ಫೇಮಸ್‌ ಆಗಿರುವ  ಸರಣಿಗಳು ಇಲ್ಲಿವೆ.

ಲಸ್ಟ್‌ ಸ್ಟೋರಿಸ್ 2:
ಲಸ್ಟ್ ಸ್ಟೋರೀಸ್'  ವೆಬ್‌ ಸರಣಿ ಹಾಟ್‌ನೆಸ್‌ನ ಎಲ್ಲಾ ಮಿತಿಗಳನ್ನು ದಾಟಿದೆ. ತಮನ್ನಾ ಭಾಟಿಯಾ ಈ ಸರಣಿಯಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳನ್ನು ನೀಡಿದ್ದಾರೆ. ಇದನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.

ಆಶ್ರಮ್:
ಈ ಪಟ್ಟಿಯಲ್ಲಿ ಪ್ರೇಕ್ಷಕರ ಅಚ್ಚುಮೆಚ್ಚಿನ ಹಾಗೂ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿರುವ ಆಶ್ರಮ್‌ ವೆಬ್ ಸೀರೀಸ್ ಕೂಡ ಸೇರಿದೆ. MX ಪ್ಲೇಯರ್‌ನಲ್ಲಿ ಬಾಬಿ ಡಿಯೋಲ್ ಮತ್ತು ಇಶಾ ಗುಪ್ತಾ ಅವರ ಸೂಪರ್‌ಹಿಟ್ ವೆಬ್ ಸರಣಿ 'ಆಶ್ರಮ್' ಅನ್ನು ವೀಕ್ಷಿಸಬಹುದು. 

Tap to resize

ಮೇಡ್ ಇನ್ ಹೆವನ್:
ಸದ್ಯ ಮೇಡ್ ಇನ್ ಹೆವೆನ್  ಪ್ರೇಕ್ಷಕರಿಂದ ಸಖತ್‌ ಮೆಚ್ಚುಗೆ ಗಳಿಸಿದೆ. ಮೇಡ್ ಇನ್ ಹೆವೆನ್’ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ಇದರೊಂದಿಗೆ ಹಲವು ಹಸಿ ಬಿಸಿ ದೃಶ್ಯಗಳು ಪಡ್ಡೆ ಹುಡುಗರು ಬಾಯಿ ಬಿಟ್ಟು ಸೀರಿಸ್ ನೋಡುವಂತೆ ಮಾಡಿದೆ.

ಮಿರ್ಜಾಪುರ್:
ಈ ಪಟ್ಟಿಯಲ್ಲಿ ಮಿರ್ಜಾಪುರ್‌ ವರಬ್‌ ಸೀರಿಸ್‌ ಸಹ ಸೇರಿದೆ. ಪಂಕಜ್ ತ್ರಿಪಾಠಿ ಮತ್ತು ಅಲಿ ಫಜಲ್ ಅವರ ವೆಬ್ ಸರಣಿ 'ಮಿರ್ಜಾಪುರ್' ಎರಡೂ ಸೀಸನ್‌ಗಳು ಹಿಟ್ ಎಂದು ಸಾಬೀತಾಯಿತು. ಇದು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು. 

web series

ಗಂಧೀ ಬಾತ್:
ಗಂಧೀ ಬಾತ್ ಹೆಸರೇ ಸೂಚಿಸುವಂತೆ,  ಇದರಲ್ಲಿ  ಬೋಲ್ಡ್‌ ಸೀನ್‌ಗಳ ಜೊತೆ  ಅನೇಕ ತೀವ್ರವಾದ ದೃಶ್ಯಗಳನ್ನು ಸಹ ಕಾಣಬಹುದು. ಇದು ಆಲ್ಟ್ ಬಾಲಾಜಿಯಲ್ಲಿ ಲಭ್ಯ.

ಸೇಕ್ರೆಡ್ ಗೇಮ್ಸ್:
ಸೇಕ್ರೆಡ್ ಗೇಮ್ಸ್ ಸರಣಿಗೆ ಬೋಲ್ಡ್‌ ದೃಶ್ಯಗಳ ವಿಷಯದಲ್ಲಿ ಯಾವುದೇ ಸ್ಪರ್ಧೆಯೂ ಇಲ್ಲ. ಬಾಲಿವುಡ್‌ನ ಅದ್ಭುತ ನಟ ನವಾಜುದ್ದೀನ್ ಸಿದ್ದಿಕಿ ಅವರು ಸೂಪರ್‌ಹಿಟ್ ಸರಣಿ 'ಸೇಕ್ರೆಡ್ ಗೇಮ್ಸ್'ನಲ್ಲಿ ಎಲ್ಲಾ ದಿಟ್ಟತನದ ಮಿತಿಗಳನ್ನು ದಾಟಿದ್ದಾರೆ.. 

Latest Videos

click me!