ಪುನೀತ್ ಪರಮಾತ್ಮ ಸಿನಿಮಾ ಶೈಲಿಯಲ್ಲಿ 15 ಕಂಬಗಳ ಮನೆ ಕಟ್ಟಿಸಿದ ಸೋನು ಗೌಡ; ಗೃಹಪ್ರವೇಶದ ಫೋಟೋ ವೈರಲ್

Published : Nov 14, 2024, 10:08 AM IST

ಹೊಸ ಮನೆ ಗೃಹಪ್ರವೇಶ ಮಾಡಿದ ಸೋನು ಶ್ರೀನಿವಾಸ್ ಗೌಡ. ಹಳ್ಳಿಯಲ್ಲಿ ಹಳ್ಳಿ ಸೊಬಗು ಉಳಿಸಲು ಕಂಬದ ಮನೆ ಕಟ್ಟಿಸಿದ ಸುಂದರಿ.....

PREV
18
ಪುನೀತ್ ಪರಮಾತ್ಮ ಸಿನಿಮಾ ಶೈಲಿಯಲ್ಲಿ 15 ಕಂಬಗಳ ಮನೆ ಕಟ್ಟಿಸಿದ ಸೋನು ಗೌಡ; ಗೃಹಪ್ರವೇಶದ ಫೋಟೋ ವೈರಲ್

ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ತಮ್ಮ ತಂದೆ ಊರಿನಲ್ಲಿ ಸ್ವಂತ ಮನೆ ಕಟ್ಟಿಸಿ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ.

28

ಬೆಂಗಳೂರಿನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್‌ ಒಂದರಲ್ಲಿ ವಾಸಿಸುತ್ತಿರುವ ಸೋನು ಶ್ರೀನಿವಾಸ್ ಗೌಡ ಯೂಟ್ಯೂಬ್‌ ಮತ್ತು ಇನ್‌ಸ್ಟಾಗ್ರಾಂ ಮೂಲಕ ಸಂಪಾದನೆ ಮಾಡುತ್ತಿದ್ದಾರೆ.

38

ಕಳೆದ ಒಂದು ವರ್ಷದಿಂದ ಊರಿನಲ್ಲಿ ಮನೆ ಕಟ್ಟಿಸುತ್ತಿರುವುದಾಗಿ ವಿಡಿಯೋಗಳಲ್ಲಿ ಹೇಳುತ್ತಿದ್ದರು. ತಂದೆ ಊರಿನಲ್ಲಿ ಉಳಿದುಕೊಂಡಿದ್ದ ಮನೆಯನ್ನು ಮರು ನಿರ್ಮಾಣ ಮಾಡಿ ಅದರಲ್ಲಿ ಸೊಬಗು ಉಳಿಸಿಕೊಂಡಿದ್ದಾರೆ.

48

ಇದೊಂದು ಕಂಬದ ಮನೆ ಆಗಿದ್ದು ಸುಮಾರು 15 ಕಂಬಗಳನ್ನು ಹಾಗೆ ಉಳಿಸಿಕೊಂಡು  ಮನೆ ವಿನ್ಯಾಸ ಮಾಡಿಕೊಂಡಿದ್ದಾರೆ. ಮನೆ ಎಷ್ಟೇ ಮಾಡರ್ನ್‌ ಆಗಿದ್ದರೂ ಹಾಲ್‌ನಲ್ಲಿ ಕಂಬಗಳು ಬಿಗ್ ಹೈಲೈಟ್.

58

ನವೆಂಬರ್ 12 ಮತ್ತು 13ರಂದು ಮನೆ ಗೃಹಪ್ರವೇಶ ಮಾಡಿದ್ದಾರೆ. ಮಂಗಳವಾರ ಆದ ಕಾರಣ ನವೆಂಬರ್ 11ರಂದು ಚಪ್ಪರ ಪೂಜೆ ಮಾಡಿದ್ದಾರೆ. 12ರಂದು ರೇಶ್ಮೆ ಸೀರೆ ಧರಿಸಿ ಪೂಜೆ ಮಾಡಿದ್ದಾರೆ.

68

 ಗೃಹಪ್ರವೇಶದಲ್ಲಿ ನಡೆದ ಹೋಮಾ ಮತ್ತು ಪೂಜೆಯಲ್ಲಿ ಸೋನು ಶ್ರೀನಿವಾಸ್ ಗೌಡ ತಮ್ಮ ತಾಯಿ, ತಮ್ಮ ಹಾಗೂ ಅತ್ತೆ ಮಾವ ಜೊತೆ ಪೂಜೆ ಮಾಡಿಸಿದ್ದಾರೆ.

78

 ಗೃಹ ಪ್ರವೇಶದ ದಿನ  ನೀಲಿ ಬಣ್ಣದ ಡಿಸೈನರ್ ಹಾಫ್‌ ಸೇರೆಯನ್ನು ಸೋನು ಧರಿಸಿದ್ದಾರೆ. ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿರುವ ಪುಟ್ಟ ಹುಡುಗಿ ಕೂಡ ಭಾಗಿಯಾಗಿದ್ದರು.

88

ಕಳೆದ ಒಂದು ತಿಂಗಳಿನಿಂದ ಸೋನು ಶ್ರೀನಿವಾಸ್ ಗೌಡ ಶಾಪಿಂಗ್ ಮಾಡುತ್ತಿದ್ದಾರೆ. ಮನೆಗೆ ಬರುತ್ತಿರುವ ವಿಶೇಷ ಅತಿಥಿಗಳಿಗೆ ರಿಟರ್ನ್‌ ಗಿಫ್ಟ್ ಕೊಟ್ಟಿದ್ದಾರೆ, ಇನ್ನು ಕುಟುಂಬಸ್ಥರಿಗೆ ಪ್ಲಾಸ್ಟಿಕ್‌ ತಟ್ಟೆಗಳನ್ನು ನೀಡಿದ್ದಾರೆ. 

Read more Photos on
click me!

Recommended Stories