ಚೈತ್ರಾ ಕುಂದಾಪುರ ಅಸಲಿ ಮುಖ ಬಯಲು ಮಾಡಿದ ಬಿಗ್ ಬಾಸ್; ಬೆಂಬಲಿಗರಲ್ಲಿ ಆತಂಕ

First Published | Nov 14, 2024, 9:09 AM IST

ಬಿಬಿ ಮನೆಯಲ್ಲಿ ವೀಕ್ಷಕರಿಗೆ ಮನೋರಂಜನೆ ನೀಡುತ್ತಿರುವ ಚೈತ್ರಾ ಕುಂದಾಪುರ. ಇಷ್ಟೋಂದು ಟ್ಯಾಲೆಂಟ್ ಇದ್ಯಾ ಅಂದ್ರ ನೆಟ್ಟಿಗರು.... 

 ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಭಾಷಣಗಾರ್ತಿ ಚೈತ್ರಾ ಕುಂದಾಪುರ ಮೊದಲ ಸಲ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿ 45 ದಿನಗಳನ್ನು ಪೂರೈಸಿದ್ದಾರೆ. 

ಸಣ್ಣ ಅಂತರದಲ್ಲಿ ಕ್ಯಾಪ್ಟನ್ಸಿ ಮಿಸ್ ಮಾಡಿಕೊಂಡು, ಪ್ರತಿ ವಾರವೂ ಸುದೀಪ್‌ರ ಬಳಿ ಬುದ್ಧಿ ಹೇಳಿಸಿಕೊಂಡು, ಒಂದು ವಾರ ಕಳಪೆ ಪ್ರದರ್ಶನ ಪಡೆದು, ಲಾಯರ್ ಜಗದೀಶ್‌ ಜೊತೆ ಜಗಳವಾಡಿ ಟ್ರೋಲ್ ಆಗುತ್ತಿರುವ ಕುಂದಾಪುರದ ಚೆಲುವೆ ಚೈತ್ರಾ. 

Tap to resize

 ಆರಂಭದಲ್ಲಿ ಚೈತ್ರಾ ಕುಂದಾಪುರ ಎಂಟ್ರಿ ನೋಡಿ ಹೊರಗಿರುವ ಫಯರ್ ಬ್ರಾಂಡ್‌ ಒಳಗೂ ಹಾಗೇ ಇರ್ತಾರೆ ಎಂದು ವೀಕ್ಷಕರು ಲೆಕ್ಕಾಚಾರ ಹಾಕಿದ್ದರು ಆದರೆ ಬಿಗ್ ಬಾಸ್ ಮತ್ತೊಂದು ಮುಖವನ್ನು ಬಯಲು ಮಾಡಿದ್ದಾರೆ.

ಹೌದು! ಫಯರ್ ಬ್ರಾಂಡ್ ಭಾಷಣಗಾರ್ತಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿಬಿಟ್ಟಿದ್ದಾರೆ. ಈಗ ಜಗಳ ಮಾಡಿದರೂ ಕೇಳುವವರು ಯಾರೂ ಇಲ್ಲ, ಕೂಗಾಡಿದರು ಕೇಳುವವರು ಯಾರು ಇಲ್ಲದ ಪರಿಸ್ಥಿತಿ ಆಗಿಬಿಟ್ಟಿದೆ. 

 ದಿನ ಬೆಳಗ್ಗೆ ಬಿಗ್ ಬಾಸ್ ಮನೆಯಲ್ಲಿ ಪ್ರಸಾರವಾಗುವ ಮಾರ್ನಿಂಗ್ ಸಾಂಗ್‌ಗೆ ಚೈತ್ರಾ ಸಖತ್ ಡ್ಯಾನ್ಸ್ ಮಾಡುತ್ತಾರೆ ಅಷ್ಟೇ ಯಾಕೆ ಇನ್ನಿತರ ಸ್ಪರ್ಧಿಗಳ ಸಮಕ್ಕೆ ಸ್ಟೆಪ್ಸ್‌ ಕಲಿತು ಕ್ಯಾಮೆರಾ ಮುಂದೆ ಬರುತ್ತಿರುವುದು ಬೆಂಬಲಿಗೆರಿಗೆ ಶಾಕ್ ತಂದಿದೆ.

ಇನ್ನು ವೀಕೆಂಡ್ ಕೊಂಚ ಕೂಲ್ ಆಗಿ ಇರಲಿ ಎಂದು ಸುದೀಪ್ ಸಣ್ಣದೊಂದು ಟಾಸ್ಕ್‌ ನೀಡಿದ್ದರು. ಆಗ ಸುದೀಪ್ ಅವರ ಜನಪ್ರಯ ಡೈಲಾಗ್ ಹೇಳಿದ್ದನ್ನು ಕೇಳಿ ಸ್ವತಃ ಸುದೀಪ್ ಶಾಕ್ ಆಗಿಬಿಟ್ಟರು. 

ಅಬ್ಬಬ್ಬಾ ಈ ಸುಳಿಯಲ್ಲಿ ಚೈತ್ರಾ ಕುಂದಾಪುರ ಬೀಳುವುದಿಲ್ಲ ಅಂದುಕೊಂಡೆವು...ನಾನು ಹಾಗೆ ಹೀಗೆ ಎಂದು ತೋರಿಸಿಕೊಳ್ಳುತ್ತಿದ್ದ ವ್ಯಕ್ತಿಯಲ್ಲಿ ಮತ್ತಷ್ಟು ವಿಭಿನ್ನ ಗುಣಗಳು ಇದೆ ಅಂತ ಮುಖ ಬಯಲು ಮಾಡಿದ್ದೇ ಬಿಗ್ ಬಾಸ್ ಅಂತಿದ್ದಾರೆ ನೆಟ್ಟಿಗರು. 

Latest Videos

click me!