ಏನ್ ಆಗಿಲ್ಲ ಗುರು, ಆಸ್ಪತ್ರೆಗೂ ಹೋಗಿಲ್ಲ; ಆಕ್ಸಿಡೆಂಟ್ ಬಗ್ಗೆ ಸ್ಪಷ್ಟನೆ ಕೊಟ್ಟ ಸೋನು ಗೌಡ!

First Published | Feb 10, 2024, 3:25 PM IST

ಕಾರು ಅಪಘಾತ ಆಗಿದ್ದು ನಿಜ ಆದರೆ........ನೆಟ್ಟಿಗರಿಗೆ ಕ್ಲಾರಿಟಿ ಕೊಟ್ಟ ಸೋನು ಗೌಡ. 

ಟಿಕ್‌ ಟಾಕ್‌ ಕ್ವೀಟ್‌, ರೀಲ್ಸ್‌ ಸುಂದರಿ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಕಾರು ಕೆಲವು ದಿನಗಳ ಹಿಂದೆ ಅಪಘಾತವಾಗಿತ್ತು. 

ಅಂಧ್ರಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಸೋನು ಗೌಡ ಈಗಷ್ಟೆ ಕಾರು ಡ್ರೈವಿಂಗ್ ಮಾಡಲು ಕಲಿಯುತ್ತಿದ್ದಾರೆ ಆದರೆ ಅಷ್ಟರಲ್ಲಿ ಅಪಘಾತ ಮಾಡಿದ್ದಾರೆ.

Tap to resize

ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ನಲ್ಲಿ ಕಾರನ್ನು ಹಿಂದೆ ಅಥವಾ ಮುಂದೆ ತೆಗೆಯಲು ಹೋದಾಗ ಪಿಲ್ಲರ್‌ಗೆ ಗುದ್ದಿ ಕಾರು ಮುಂದಿನ ಭಾಗ ಪುಡಿ ಪುಡಿ ಆಗಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ.

ಕಾರು ಅಪಘಾತದಿಂದ ಸೋನು ಗೌಡಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ, ಗಾಯವಾಗಿದೆ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೈ ಕಾಲಯ ಮುರಿದಿದೆ ಎಂದು ಸುದ್ದಿ ಆಗಿತ್ತು.

'ನನಗೆ ಏನೂ ಆಗಿಲ್ಲ ಗುರು..ನಾನು ಆರಾಮ್ ಆಗಿದ್ದೀನಿ.  ಕೈ ಕಾಲು ಎಲ್ಲವೂ ಸರಿಯಾಗಿದೆ ಸುಮ್ಮನೆ ಯಾಕೆ ಸುದ್ದಿ ಮಾಡುತ್ತಿದ್ದೀರಾ' ಎಂದು ಸೋನು ವಿಡಿಯೋ ಮಾಡಿದ್ದಾರೆ.

ಕಾರು ಅಪಘಾತವಾದ ಮಾರನೆ ದಿನವೇ ಕೆಲಸದ ಮೇಲೆ ಸೋನು ಗೌಡ ಹೌದರಾಬಾದ್‌ಗೆ ಪ್ರಯಾಣ ಮಾಡಿದ್ದಾರೆ. ಆ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ. 

Latest Videos

click me!