Bigg Boss Kannada 6 ವಿಜೇತ, ಮಾರ್ಡನ್ ರೈತ ಶಶಿಕುಮಾರ್‌ದು ಲವ್ ಮ್ಯಾರೇಜಾ?

First Published | Nov 29, 2023, 4:10 PM IST

ಬಿಗ್ ಬಾಸ್ ಸೀಸನ್ 6 ರಲ್ಲಿ ವಿಜೇತರಾಗುವ ಮೂಲಕ ದಾಖಲೆ ಸೃಷ್ಟಿಸಿದ ಮಾಡರ್ನ್ ರೈತ ಶಶಿ ಕುಮಾರ್ ಅವರ ಮುದ್ದಾದ ಫ್ಯಾಮಿಲಿ ಹೇಗಿದೆ ನೋಡಿ. 
 

ಬಿಗ್ ಬಾಸ್ ಸೀಸನ್ 6 (Bigg Boss Season 6)  ಹಲವಾರು ಕಾರಣಗಳಿಂದ ಸುದ್ದಿಯಾಗಿದ್ದು, ಈ ಸೀಸನ್ ನ ಜನಪ್ರಿಯತೆಗೆ ಒಂದು ಮುಖ್ಯ ಕಾರಣ ಏನೆಂದರೆ ಸಾಮಾನ್ಯ ಜನರು ಸಹ ಈ ಸೀಸನ್ ನಲ್ಲಿ ಭಾಗಿಯಾಗಿ ಹವಾ ಸೃಷ್ಟಿಸಿದ್ದರು. 
 

ಈ ಸೀಸನ್ ನಲ್ಲಿ ಉತ್ತಮ ಗೇಮ್ ಆಡುತ್ತಾ, ಮನರಂಜನೆ ನೀಡುತ್ತಾ, ಲವ್ವಿ ಡವ್ವಿ ಜೊತೆಗೆ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಬಿಗ್ ಬಾಸ್ ಟೈಟಲ್ ಗೆದ್ದ ಮಾಡರ್ನ್ ರೈತ (Modern Farmer) ಶಶಿ ಕುಮಾರ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. 
 

Tap to resize

ಮಾಡರ್ನ್ ರೈತನಾಗಿ ಬಿಗ್ ಬಾಸ್ ಮನೆ ಸೇರಿದ ಶಶಿ ಕುಮಾರ್ ಟೈಟಲ್ ಗೆದ್ದು ಬಂದ ಮೇಲೆ ಹಲವಾರು ಸಿನಿಮಾಗಳಲ್ಲಿ ಗುರುತಿಸುವ ಮೂಲಕ ಸಹ ಜನಪ್ರಿಯತೆ ಗಳಿಸಿದ್ದರು. ಇವರು ಸದ್ಯ ಶುಗರ್ ಫ್ಯಾಕ್ಟರಿ (Sugar factory) ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. 
 

ಬಿಗ್ ಬಾಸ್ ಮನೆಯಲ್ಲಿ ಕವಿತಾ ಗೌಡ ಜೊತೆ ತುಂಬಾನೆ ಕ್ಲೋಸ್ ಆಗಿದ್ದ ಶಶಿ ಕುಮಾರ್, ಹೊರಗೆ ಬಂದ ಮೇಲೆ ಇವರಿಬ್ಬರು ಮದುವೆಯಾಗುತ್ತಾರೆ ಎನ್ನುವ ಸುದ್ದಿಯೂ ಇತ್ತು. ಆದರೆ ಕವಿತಾ ಮತ್ತು ಚಂದನ್ ಕುಮಾರ್ ಮದುವೆಯಾದ್ರೆ, ಕಳೆದ ವರ್ಷ ಶಶಿ ಕುಮಾರ್ ಅವರ ವಿವಾಹವೂ ನಡೆಯಿತು. 
 

ಕಳೆದ ವರ್ಷ ಆಗಸ್ಟ್ ಏಳರಂದು ಶಶಿ ಕುಮಾರು ಬೆಂಗಳೂರಿನ ಕನ್ವೆಷ್ನನ್ ಸೆಂಟರ್ ನಲ್ಲಿ ಸ್ವಾತಿ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ (married life) ಕಾಲಿಟ್ಟರು. ಇವರ ಮದುವೆಗೆ ಚಿತ್ರರಂಗ, ಬಿಗ್ ಬಾಸ್ ಸ್ನೇಹಿತರು ಆಗಮಿಸಿ ಶುಭ ಕೋರಿದ್ದರು. 
 

ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಶಶಿಕುಮಾರ್ ದಂಪತಿ ಫೋಟೋ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶಶಿ ಕುಮಾರ್ ಆಗ`ಮ್ಮೆ ಈಗೊಮ್ಮೆ ಹೆಂಡ್ತಿ ಜೊತೆಗಿನ ಫೋಟೋ ಸಹ ಶೇರ್ ಮಾಡುತ್ತಿರುತ್ತಾರೆ. 
 

ಶಶಿ ಪತ್ನಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಸ್ವಾತಿ ಅವರೂ ಕೂಡ ಚಿಕ್ಕಬಳ್ಳಾಪುರದವರೆ ಆಗಿದ್ದು, ಇವರದ್ದು ಅರೇಂಜ್ ಮ್ಯಾರೆಜ್ ಎನ್ನಲಾಗಿದೆ. ಸದ್ಯ ಈ ಜೋಡಿಯ ಫೋಟೋ ನೋಡಿ ಶಶಿ ಅಭಿಮಾನಿಗಳು ಖುಷಿಯಾಗಿದ್ದಾರೆ. 
 

ಇನ್ನು ಕರಿಯರ್ (career) ವಿಷ್ಯಕ್ಕೆ ಬಂದ್ರೆ ಶಶಿ ಪ್ರೇಮಿಗಳ ಗಮನಕ್ಕೆ, ಮೆಹಬೂಬ, ಶುಗರ್ ಫ್ಯಾಕ್ಟರಿ ಸಿನಿಮಾಗಳಲ್ಲಿ ಇಲ್ಲಿವರೆಗೆ ನಟಿಸಿದ್ದಾರೆ. ಆದರೆ ಶುಗರ್ ಪ್ಯಾಕ್ಟರಿ ಮಾತ್ರ ಕಳೆದ ವಾರ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. 
 

Latest Videos

click me!