ಬಿಗ್ ಬಾಸ್ ಮನೆಗೆ ಲವ್ವರ್ ಜೊತೆಗೆ ಎಂಟ್ರಿ ಕೊಟ್ಟ ಕನ್ನಡದ ಆಕಾಶದೀಪ ದಿವ್ಯಾಳ ಗಂಡ ಅರ್ನವ್!

First Published | Oct 8, 2024, 7:39 PM IST

ಬಿಗ್ ಬಾಸ್ ತಮಿಳು ಸೀಸನ್ 8: ಕನ್ನಡದ ಆಕಾಶದೀಪ ಧಾರಾವಾಹಿಯಲ್ಲಿ ದೀಪ ಆಗಿ ಕಾಣಿಸಿಕೊಂಡು ಐಎಎಸ್ ಅಧಿಕಾರಿ ಆಗಿದ್ದ ದಿವ್ಯಾ ಶ್ರೀಧರ್ ಅವರ ಗಂಡ ಅರ್ನವ್ ತನ್ನ ಪ್ರೇಯಸಿ ಅಕ್ಷಿತಾಳೊಂದಿಗೆ ಬಿಗ್ ಬಾಸ್ ತಮಿಳು ಸೀಸನ್ 8ರ ಮನೆಗೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ದಿವ್ಯಾ ಅವರು ಅರ್ನವ್ ಮತ್ತು ಅಕ್ಷಿತಾಳ ಬಗ್ಗೆ ಆರೋಪ ಮಾಡಿದ್ದ ವಿಡಿಯೋಗಳು ವೈರಲ್ ಆಗುತ್ತಿವೆ.

ಅರ್ನವ್ ಮತ್ತು ದಿವ್ಯಾ ಶ್ರೀಧರ್

ಕಳೆದ ಮೂರು ದಿನಗಳ ಹಿಂದೆ ತಮಿಳು ಬಿಗ್ ಬಾಸ್ ಸೀಸನ್ 8 ಆರಂಭವಾಗಿದೆ. ಮೊದಲ ಸ್ಪರ್ಧಿಯಾಗಿ ರವೀಂದರ್ ಚಂದ್ರಶೇಖರ್ ಬಿಗ್ ಬಾಸ್ ಮನೆಗೆ ಪ್ರವೇಶಿಸಿದರು. ನಂತರ, ಸಾಚನಾ, ದೀಪಕ್, ಆರ್ ಜೆ ಆನಂದಿ, ರಂಜಿತ್, ಮುತ್ತುಮಾರನ್, ಜೆಫ್ರಿ, ಅರ್ನವ್, ಅಕ್ಷಿತಾ, ದರ್ಶಾ ಗುಪ್ತಾ, ಅರುಣ್ ಪ್ರಸಾದ್, ಜಾಕ್ವೆಲಿನ್, ದರ್ಶಿಕಾ, ಪವಿತ್ರ ಜನನಿ ಸೇರಿದಂತೆ ಒಟ್ಟು 18 ಸ್ಪರ್ಧಿಗಳು ಮನೆ ಸೇರಿದರು.

ಯಾರೂ ನಿರೀಕ್ಷಿಸದ ರೀತಿಯಲ್ಲಿ, ಕಾರ್ಯಕ್ರಮ ಆರಂಭವಾದ 24 ಗಂಟೆಗಳಲ್ಲಿ ಒಬ್ಬ ಸ್ಪರ್ಧಿಯನ್ನು ಹೊರಹಾಕಲಾಗುವುದು ಎಂದು ಬಿಗ್ ಬಾಸ್ ಘೋಷಿಸಿದರು. ನಂತರ, ಒಬ್ಬರನ್ನು ಹೊರಹಾಕುವ ಪ್ರಕ್ರಿಯೆ ನಡೆಯಿತು. ಇದರಲ್ಲಿ ಹಲವರು ಸಾಚನಾ ಹೇಳಿದ ಒಂದೇ ಒಂದು ಮಾತನ್ನು ಉಲ್ಲೇಖಿಸಿ ಆಕೆಯನ್ನು ಮನೆಯವರೆಲ್ಲಾ ನಾಮಿನೇಟ್ ಮಾಡಿದ್ದರು. ಮನೆಯವರ ಮತಗಳ ಆಧಾರದಲ್ಲಿ ಸಾಚನಾಳನ್ನು ಮನೆಯಿಂದ ಹೊರಹಾಕಿದರು. ಈ ಘಟನೆ ಪ್ರೇಕ್ಷಕರಿಗೆ ಆಘಾತವನ್ನುಂಟುಮಾಡಿದರೂ, ಕಾರ್ಯಕ್ರಮದ ಮೇಲಿನ ಉತ್ಸಾಹವನ್ನು ಹೆಚ್ಚಿಸಿತು.

ಅರ್ನವ್ ಮದುವೆ

ಬಿಗ್ ಬಾಸ್ ಮನೆಯಲ್ಲಿ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರ ಕಾಲಿಗೆ ಗಾಯವಾಗಿದೆ. ಅವರಿಗೆ ಆಟವಾಡಲು ಸಾಧ್ಯವಾಗದೇ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ವೈದ್ಯರ ಸಲಹೆಯ ಮೇರೆಗೆ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಬಹುದು ಎನ್ನಲಾಗುತ್ತಿದೆ.

ಇದು ಒಂದು ಕಡೆಯಾದರೆ, ಅರ್ನವ್ ಮತ್ತು ಅಕ್ಷಿತಾ ಬಗ್ಗೆ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಟ್ರೋಲ್ ಆಗುತ್ತಿದೆ. ಅದೇ ರೀತಿ ಅರ್ನವ್ ಅವರ ಪತ್ನಿ ದಿವ್ಯಾ ಶ್ರೀಧರ್, ಈ ಇಬ್ಬರ ಬಗ್ಗೆ ಮಾತನಾಡಿ... ಛೀಮಾರಿ ಹಾಕಿದ್ದ ಹಳೆಯ ಘಟನೆಗಳು ಮತ್ತು ಅದರ ವೀಡಿಯೊಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪುನಃ ಶೇರ್ ಆಗುತ್ತಿವೆ.

Tap to resize

ದಿವ್ಯಾ ಶ್ರೀಧರ್ ಆರೋಪ

ಅರ್ನವ್ ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕೇಳಡಿ ಕಣ್ಮಣಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ... ಅದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ದಿವ್ಯಾ ಶ್ರೀಧರ್ ಅವರನ್ನು ಪ್ರೀತಿಸಿ ಮದುವೆಯಾದರು. ಇದಕ್ಕಿಂತ ಮುಂಚೆ ಇಬ್ಬರೂ ಮದುವೆಯಾಗದೆ ಕೆಲವು ವರ್ಷಗಳ ಕಾಲ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದರು. ಧಾರಾವಾಹಿ ವೇಳೆ ಪ್ರೀತಿಸಿದ್ದ ಇಬ್ಬರೂ ಹಿಂದೂ ಮತ್ತು ಇಸ್ಲಾಂ ಸಂಪ್ರದಾಯದಂತೆ ವಿವಾಹವಾದರು. ಅರ್ನವ್ 'ಚೆಲ್ಲಮ್ಮ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಪುನಃ ಆ ಧಾರಾವಾಹಿ ನಾಯಕಿ ಅಕ್ಷಿತಾಳನ್ನು ಪ್ರೀತಿ ಮಾಡಿದ್ದಾನೆ.

ಒಂದು ಹಂತದಲ್ಲಿ, ಅರ್ನವ್ ಅವರ ಅಕ್ರಮ ಸಂಬಂಧ ಬೆಳಕಿಗೆ ಬಂದಾಗ, ದಿವ್ಯಾ ಶ್ರೀಧರ್ ಅಳುತ್ತಾ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅರ್ನವ್, ದಿವ್ಯಾ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ 2022 ರಲ್ಲಿ ದಿವ್ಯಾ ಶ್ರೀಧರ್ ಆಸ್ಪತ್ರೆಯಲ್ಲಿರುವಾಗ ನೀಡಿದ ಸಂದರ್ಶನ ವೈರಲ್ ಆಗಿತ್ತು. ಜೊತೆಗೆ ತಾನು ಗರ್ಭಿಣಿ ಎಂಬ ಮಾಹಿತಿಯನ್ನೂ ದಿವ್ಯಾ ಹಂಚಿಕೊಂಡಿದ್ದರು. ಆಗ ಅಕ್ಷಿತಾ ನನ್ನ ಮುಂದೆಯೇ ನನ್ನ ಪತಿ ಅರ್ನವ್‌ಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಿದ್ದಳು . ನಾನು ಏನಾದರೂ ಕೇಳಿದರೆ ಇಬ್ಬರೂ ಸೇರಿ ಬಾಯಿಗೆ ಬಂದಂತೆ ಬೈಯುತ್ತಾರೆ ಎಂದು ಆರೋಪಿಸಿದ್ದರು.

ಬಿಗ್ ಬಾಸ್ ತಮಿಳು ಸೀಸನ್ 8 ಸ್ಪರ್ಧಿ

ಅರ್ನವ್ ಒಬ್ಬ ಸಲಿಂಗ ಕಾಮಿ ಎನ್ನುವುದು ಸೇರಿದಂತೆ ಮತ್ತೊಬ್ಬ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ದಿವ್ಯಾ ಶ್ರೀಧರ ಆರೋಪ ಮಾಡಿದ್ದರು. ದಿವ್ಯಾ ಬಿಡುಗಡೆ ಮಾಡಿದ ಆಡಿಯೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ವಿವಾದದ ನಂತರ ಅರ್ನವ್, ತಮ್ಮ ಪ್ರೇಯಸಿ ಅಕ್ಷಿತಾ ಅವರೊಂದಿಗೆ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಇಬ್ಬರೂ ಈ ಹಿಂದೆ ಪರಿಚಿತರಾಗಿದ್ದರೂ, ಅರ್ನವ್ ಮನೆಗೆ ಬಂದಾಗ ಅದನ್ನು ಬಹಿರಂಗಪಡಿಸಲಿಲ್ಲ. 'ವಾಟ್ ಎ ಸರ್ಪ್ರೈಸ್' ಎಂದು ಹೇಳಿದರು. ಈವರೆಗೂ ಅಕ್ಷಿತಾ ಜೊತೆಗೆ ಮಾತ್ರ ಅರ್ನವ್ ಸುತ್ತಾಡುತ್ತಿರುವುದನ್ನು ಕಾಣಬಹುದು.

ಅರ್ನವ್ ಮತ್ತು ಅಕ್ಷಿತಾ ಪ್ರೇಮ:

ಅದೇ ರೀತಿ 24 ಗಂಟೆಗಳಲ್ಲಿ ಸಾಚನಾ ಅವರನ್ನು ಟಾರ್ಗೆಟ್ ಮಾಡಿ ಹೊರಗೆ ಕಳುಹಿಸಿದ್ದೀರಿ ಎಂದು ಅರ್ನವ್ ಕಣ್ಣೀರು ಹಾಕಿದ್ದಾನೆ. ಇದನ್ನು ನೋಡಿದ ನೆಟ್ಟಿಗರು, ನಿನ್ನ ಹೆಂಡತಿಯನ್ನು ಹೊಡೆದು ಹಿಂಸಿಸಿ, ಹೆತ್ತ ಮಗಳನ್ನೇ ಇದುವರೆಗೆ ಒಮ್ಮೆಯೂ ನೋಡಿಲ್ಲ. ನಿನಗೆ ಕುಟುಂಬದ ಮೇಲೆ ಬಾರದ ಪ್ರೀತಿ, ಅವರಿಗಾಗಿ ಬಾರದ ಕಣ್ಣೀರು 24 ಗಂಟೆಗಳ ಕಾಲ ನೋಡಿದ ಹುಡುಗಿ ಸಾಚನಾಗಾಗಿ ಬರುತ್ತದೆಯೇ? ಎಂದು ಟ್ರೋಲ್ ಮಾಡಿದ್ದಾರೆ.

ಅರ್ನವ್ ಮತ್ತು ಅಕ್ಷಿತಾ ಯಾವಾಗ ತಮ್ಮ ಪ್ರೀತಿಯ ಕಂಟೆಂಟ್ ಅನ್ನು ನೀಡುತ್ತಾರೆ ಎಂಬ ನಿರೀಕ್ಷೆ ಒಂದು ಕಡೆಯಾದರೆ, ದಿವ್ಯಾ ಶ್ರೀಧರ್ ಈ ಜೋಡಿಯನ್ನು ತರಾಟೆಗೆ ತೆಗೆದುಕೊಂಡ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Latest Videos

click me!