Bigg Boss Season 11 : ದೊಡ್ಮನೆಯ ಹೊಸ ಸ್ಪರ್ಧಿಗಳಿಗೆ ಹಳೆ ಕಂಟೆಸ್ಟಂಟ್’ಗಳ ಹೋಲಿಕೆ... ನಿಮಗೂ ಹೀಗೆ ಅನಿಸ್ತಿದ್ಯಾ?

First Published | Oct 5, 2024, 3:48 PM IST

ಬಿಗ್ ಬಾಸ್ ಸೀಸನ್ 11 ಆರಂಭದ ದಿನದಿಂದಲೇ ಭಾರಿ ಸದ್ದು ಮಾಡ್ತಿದ್ದು, ಗಲಾಟೆ ಗದ್ದಲ ಹೆಚ್ಚಾಗಿದೆ. ಇದೆಲ್ಲದರ ನಡುವೆ ಈಗ ಹಳೆ ಸೀಸನ್ ಸ್ಪರ್ಧಿಗಳಿಗೆ ಈ ಸೀಸನ್ ಸ್ಪರ್ಧಿಗಳನ್ನ ಹೋಲಿಕೆ ಮಾಡ್ತಿದ್ದಾರೆ. 
 

ಬಿಗ್ ಬಾಸ್ ಸೀಸನ್ 11 (Bigg Boss Season 11) ಆರಂಭವಾಗಿ ಈಗಾಗಲೇ ಒಂದು ವಾರ ಆಗುತ್ತಾ ಬಂದಿದೆ. ಇವತ್ತು ಕಿಚ್ಚನ ಪಂಚಾಯತ್ ನಲ್ಲಿ ಏನೆಲ್ಲಾ ನಡೆಯಲಿದೆ ಅನ್ನೋದನ್ನ ನೋಡೊದಕ್ಕೆ ಜನ ಕಾಯ್ತಿದ್ದಾರೆ. ಇದರ ನಡುವೆ ಸೋಶಿಯಲ್ ಮಿಡಿಯಾದಲ್ಲಿ ಹಳೆ ಸ್ಪರ್ಧಿಗಳು ಮತ್ತು ಹೊಸ ಸ್ಪರ್ಧಿಗಳಿಗೆ ಹೋಲಿಕೆ ಮಾಡ್ತಿದ್ದಾರೆ.  ಇವರನ್ನ ನೋಡಿದ್ರೆ ನಿಮಗೂ ಇದು ಸರಿಯಾದ ಹೋಲಿಕೆ ಅನಿಸುತ್ತಾ? 
 

ಸಂಗೀತಾ ಶೃಂಗೇರಿ -ಗೌತಮಿ ಜಾದವ್ 
ಬಿಗ್ ಬಾಸ್ ಸೀಸನ್ 10 ರಲ್ಲಿ ತಮ್ಮ ಖಡಕ್ ಮಾತು, ಆಟದ ಶೈಲಿಯಿಂದ ಸಿಂಹಿಣಿ ಅಂತಾನೆ ಪ್ರಸಿದ್ಧಿ ಪಡೆದಿದ್ದ ಸಂಗೀತಾ ಶೃಂಗೆರಿಯವರಿಗೆ (Sangeetha Sringeri) ಈ ಸೀಸನ್ ನ ಗೌತಮಿ ಜಾದವ್ ಅವರನ್ನ ಹೋಲಿಕೆ ಮಾಡಲಾಗ್ತಿದೆ. ಗೌತಮಿಯ ಆಟ ಸಂಗೀತಾರನ್ನು ನೆನಪಿಸಿದೆ. 

Tap to resize

ವಿನಯ್ ಗೌಡ -  ತ್ರಿವಿಕ್ರಮ್ 
ಬಿಬಿಕೆ 10ರ ಆನೆ ವಿನಯ್ ಗೌಡ ಅವರನ್ನು ಈ ಸೀಸನ್ ನ ತ್ರಿವಿಕ್ರಮ್ ಗೆ (Trivikram) ಹೋಲಿಕೆ ಮಾಡಲಾಗ್ತಿದೆ. ಇಬ್ಬರ ಪರ್ಸನಾಲಿಟಿ ತುಂಬಾನೆ ಆಕರ್ಷಕವಾಗಿದ್ದು ಅದಕ್ಕಾಗಿಯೇ ಈ ಹೋಲಿಕೆ ಇರಬೇಕು ಅನಿಸುತ್ತೆ. 

ತನಿಷಾ ಕುಪ್ಪಂಡ - ಚೈತ್ರಾ ಕುಂದಾಪುರ 
ಬಿಬಿಕೆ 10ರಲ್ಲಿ ತಮ್ಮ ಮಾತು-ಆಟದ ಮೂಲಕ ಬೆಂಕಿ ಅಂತಾನೆ ಕರೆಯಿಸಿಕೊಂಡಿರುವ ತನಿಷಾ ಕುಪ್ಪಂಡ (Tanisha Kuppanda) ಅವರಿಗೆ ಈ ಸೀಸನ್ ನಲ್ಲಿ ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಚೈತ್ರಾ ಕುಂದಾಪುರರನ್ನು ಹೋಲಿಕೆ ಮಾಡಲಾಗ್ತಿದೆ. ಮಾತಿನಲ್ಲಿ-ಆಟದಲ್ಲಿ ಚೈತ್ರಾರನ್ನು ಸೋಲಿಸೋದು ಕಷ್ಟಾನೆ. 

ಕಾರ್ತಿಕ್ ಮಹೇಶ್ -ಶಿಶಿರ್ ಶಾಸ್ತ್ರೀ
ಬಿಬಿಕೆ 10 ವಿನ್ನರ್ ಕಾರ್ತಿಕ್ ಮಹೇಶ್ ಜೊತೆ ಶಿಶಿರ್ ಶಾಸ್ತ್ರೀಯವರ (Shishir Shastry) ಹೋಲಿಕೆ ಮಾಡಲಾಗ್ತಿದೆ. ಬಿಗ್ ಬಾಸ್ ಆರಂಭವಾದಾಗಿನಿಂದ, ಶಿಶಿರ್ ನಡೆಯನ್ನು, ಆಟವನ್ನು, ಸುದೀಪ್ ಜೊತೆಗಿನ ಮಾತುಗಳನ್ನು ಸಹ ಕಾರ್ತಿಕ್ ಗೆ ಹೋಲಿಸ್ತಿದ್ದಾರೆ ಜನ.

ದಿವ್ಯಾ ಉರುಡುಗ - ಭವ್ಯಾ ಗೌಡ
ತಮ್ಮ ಮುದ್ದು ಮುದ್ದು ಮಾತುಗಳಿಂದಲೇ ಬಿಗ್ ಬಾಸ್ ಸೀಸನ್ 8 ಮತ್ತು 9 ರಲ್ಲಿ ಗಮನ ಸೆಳೆದ ದಿವ್ಯಾ ಉರುಡುಗ ಅವರಿಗೆ ಈ ಭಾರಿಯ ಸ್ಪರ್ಧಿ ಭವ್ಯಾ ಗೌಡರನ್ನು ಹೋಲಿಕೆ ಮಾಡಲಾಗ್ತಿದೆ. 

ವರ್ತೂರ್ ಸಂತೋಷ್ - ಗೋಲ್ಡ್ ಸುರೇಶ್ 
ವರ್ತೂರ್ ಸಂತೋಷ್ (Varthur Santhosh) ಮತ್ತು ಗೋಲ್ಡ್ ಸುರೇಶ್ ನಡುವೆ ತುಂಬಾನೆ ಹೋಲಿಕೆ ಇದೆ ಅಂತಾನೆ ಹೇಳ್ತಾನೆ ಜನ. ಇಬ್ಬರು ನೋಡೋದಕ್ಕೂ ಒಂದೇ ತರ ಇದ್ದಾರೆ, ಅಲ್ಲದೇ ಇಬ್ಬರೂ ಕೂಡ ತುಂಬಾ ಚಿನ್ನ ಧರಿಸಿಯೇ ಬಿಬಿಕೆ ಗೆ ಎಂಟ್ರಿ ಕೊಟ್ಟಿದ್ದರು. 

ನಮೃತಾ ಗೌಡ - ಐಶ್ವರ್ಯ ಸಿಂಧೋಗಿ 
ಬಿಬಿಕೆ 10ರ ಬೆಡಗಿ ನಮೃತಾ ಗೌಡ ಜೊತೆ ಈ ಸೀಸನ್ ನ ಬೆಡಗಿ ಐಶ್ವರ್ಯ ಸಿಂಧೋಗಿ ಅವರನ್ನ ಹೋಲಿಕೆ ಮಾಡ್ತಿದ್ದಾರೆ. ಇಬ್ಬರು ಸ್ನೇಹಿತರು ಕೂಡ ಹೌದು, ನಾಗಿಣಿ2 ನಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. 
 

ತುಕಾಲಿ ಸಂತೋಷ್ - ತುಕಾಲಿ ಮಾನಸ 
ಸೀಸನ್ 10ರಲ್ಲಿ ತಮ್ಮ ಕಾಮಿಡಿಗಳಿಂದ ಸದ್ದು ಮಾಡಿದ ತುಕಾಲಿ ಸಂತೋಷ್ ಅವರನ್ನ ಈ ಬಾರಿಯ ಸ್ಪರ್ಧಿ ತುಕಾಲಿ ಪತ್ನಿ ಮಾನಸ ಅವರಿಗೆ ಹೋಲಿಕೆ ಮಾಡ್ತಿದ್ದಾರೆ. 

ಪ್ರಶಾಂತ್ ಸಂಬರಗಿ - ಲಾಯರ್ ಜಗದೀಶ್ 
ಬಿಗ್ ಬಾಸ್ ಆರಂಭವಾದ ಮೊದಲ ದಿನವೇ ತಮ್ಮ ಕಠಿಣ ಮಾತುಗಳಿಂದ ಸ್ವರ್ಗ ಮತ್ತು ನರಕದಲ್ಲಿ ಕಿಚ್ಚು ಹಚ್ಚಿದ ಲಾಯರ್ ಜಗದೀಶ್ ಮತ್ತು ಬಿಬಿಕೆ 8ರ ಸ್ಪರ್ಧಿಯಾಗಿದ್ದ, ನೇರ ಮಾತು, ಜಗಳಗಳಿಂದಲೇ ಜನಪ್ರಿಯತೆ ಪಡೆದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಒಂದೇ ರೀತಿಯಾಗಿದ್ದಾರೆ ಎನ್ನುತ್ತಾರೆ ಜನ. 

Latest Videos

click me!