ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ಮತ್ತು ರಾಶಿಕಾ ನಡುವಿನ ಪ್ರೇಮ ಕಹಾನಿ ಸದ್ದು ಮಾಡುತ್ತಿದೆ. ವೀಕೆಂಡ್ ಟೆನ್ಷನ್ ನಡುವೆಯೂ, ರಾಶಿಕಾ ಶೆಟ್ಟಿ ನೀರಿನಲ್ಲಿ ಏನೋ ಕಾಣಿಸುತ್ತಿದೆ ಎಂದು ಸೂರಜ್ ತಲೆ ಕೆಡಿಸಿದ್ದು, ಇವರಿಬ್ಬರ ಜೋಡಿಗೆ ಅಭಿಮಾನಿಗಳು 'ಸುರಾಶಿ' ಎಂದು ಹೆಸರಿಟ್ಟಿದ್ದಾರೆ.
ಬಿಗ್ಬಾಸ್ನಲ್ಲಿ (Bigg Boss) ಸದ್ಯ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ನಡುವಿನ ಲವ್ ಕಹಾನಿ ಸಾಕಷ್ಟು ಸದ್ದು ಮಾಡುತ್ತಲೇ ಇದೆ. ಅದರಲ್ಲಿಯೂ ಸೂರಜ್ ಸುಮ್ಮನೇ ಇದ್ದರೂ ರಾಶಿಕಾನೇ ಸ್ವಲ್ಪ ಬೋಲ್ಡ್ ಸ್ಟೆಪ್ ತೆಗೆದುಕೊಳ್ತಿರುವುದು ಕಾಣಿಸುತ್ತಿದೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ.
26
ಸ್ಪರ್ಧಿಗಳಿಗೆ ಚಿಂತೆ
ಇದೀಗ ಶನಿವಾರ ಬಂತೆಂದರೆ ವೀಕೆಂಡ್ ಕಿಚ್ಚನ ಪಂಚಾಯಿತಿ ಇರುತ್ತೆ ಎನ್ನುವ ಕಾರಣಕ್ಕೆ ಬಿಗ್ಬಾಸ್ ಮನೆಮಂದಿಗೆಲ್ಲಾ ಒಂದು ಚಿಂತೆಯಾಗಿದೆ. ಸುದೀಪ್ ಯಾರಿಗೆ ಏನು ಕ್ಲಾಸ್ ತೆಗೆದುಕೊಳ್ತಾರೆ ಎನ್ನುವುದು ಅವರೆಲ್ಲರ ಚಿಂತೆ. ಯಾರು ಹೊರಗೆ ಹೋಗುತ್ತಾರೆ ಎನ್ನುವ ಬಗ್ಗೆಯೂ ತಲೆ ಬಿಸಿ ಇದ್ದೇ ಇರುತ್ತದೆ.
36
ರಾಶಿಕಾ ಕೂಲ್
ಆದರೆ, ಇದ್ಯಾವುದರ ಚಿಂತೆ ಇಲ್ಲದೇ, ರಾಶಿಕಾ ಮತ್ತು ಸೂರಜ್ ಸಿಂಗ್ ಕೂಲ್ ಆಗಿದ್ದಾರೆ. ಸೂರಜ್ ಸಿಂಗ್ ಮಲಗಿದ್ದರೆ ಅವರ ಪಕ್ಕ ಹೋಗಿರೋ ರಾಶಿಕಾ (Bigg Boss Rashika Shetty) ಬೇರೆಯದ್ದೇ ವಿಷಯ ಮಾತನಾಡಿದ್ದಾರೆ.
ಕನ್ನಡದಲ್ಲಿ ಬಿಗ್ಬಾಸ್ ಅಂತ ಇದ್ಯಲ್ವಾ, ಆ ನೀರಿನಲ್ಲಿ ಏನು ಕಾಣಿಸ್ತಿದೆ ನೋಡು ಎಂದಿದ್ದಾರೆ. ಸೂರಜ್ ವೀಕೆಂಡ್ ಟೆನ್ಷನ್ನಲ್ಲಿ ಇರುವ ಹಾಗೆ ಕಾಣಿಸತ್ತೆ. ಏನು ಕಾಣಿಸ್ತಿದೆ ಎಂದು ಕೇಳಿದ್ದಾರೆ.
56
ಏನು ಕಾಣಿಸ್ತು ಅಲ್ಲಿ?
ಅದಕ್ಕೆ ರಾಶಿಕಾ ನೋಡು ಏನೋ ಕಾಣಿಸ್ತಿದೆ, ಬಿಗ್ಬಾಸ್ ಅಂತ ಕಾಣಿಸಿಲ್ಲ. ಬೇರೆ ಏನೋ ಕಾಣಿಸುತ್ತಿದೆ ಎಂದು ಸೂರಜ್ ತಲೆ ಕೆಡಿಸಿದ್ದಾರೆ. ಕೊನೆಗೆ ಎಲ್ಲಾ ಓದಿಯಾದ್ಮೇಲೆ ಸೂರಜ್ ಏನು ಅಂತ ಗೊತ್ತಾಗ್ತಿಲ್ಲ. ಏನು ಅಂತ ಕೇಳಿದ್ದಾರೆ.
66
ಅಷ್ಟೇನಾ?
ಅದಕ್ಕೆ ರಾಶಿಕಾ ಏನೂ ಇಲ್ಲ ಎಂದಾಗ, ಸೂರಜ್ ಅಯ್ಯೋ ನೀನು ಏನೋ ಶಬ್ದ ಕ್ರಿಯೇಟ್ ಮಾಡ್ತಾ ಇದ್ಯಾ ಅಂದುಕೊಂಡೆ ಎಂದಿದ್ದಾರೆ. ಅಲ್ಲಿ ಏನೂ ಇರದಿದ್ರೂ ಕಮೆಂಟಿಗರು ಮಾತ್ರ ಸುರಾಶಿ ಎಂದು ಇವರಿಬ್ಬರ ಹೆಸರನ್ನು ತಾವೇ ಕ್ರಿಯೇಟ್ ಮಾಡಿದ್ದಾರೆ.