ಮನೆಯಲ್ಲಿ ಹಣ ಕದ್ದು ಶಾಪಿಂಗ್ ಮಾಡಿದ ಪ್ರಿಯಾಂಕ; ಇದೇ 'ಸತ್ಯ' ಕತೆ!

First Published | Dec 11, 2020, 4:37 PM IST

ಕಿರುತೆರೆಯ ಹೊಚ್ಚ ಹೊಸ ಧಾರಾವಾಹಿ 'ಸತ್ಯ' ವೀಕ್ಷಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಿಗ್ ಬಾಸ್ ಪ್ರಿಯಾಂಕ ಶಿವಣ್ಣ  ಧಾರಾವಾಹಿಯಲ್ಲಿ ಮಾಡಿದ ಕ್ರಿಮಿನಲ್ ಕೆಲಸ ನೋಡಿ...
 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ವಿಭಿನ್ನ ಕತೆಯ ಧಾರಾವಾಹಿ 'ಸತ್ಯ'
ಇಷ್ಟು ದಿನಗಳ ಕಾಲ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಂದ್ರಿಕಾ, ಈಗ ದಿವ್ಯಾ ಪಾತ್ರಧಾರಿಯಾಗಿ ಮಿಡಲ್‌ ಕ್ಲಾಸ್‌ ಮನೆತನದ ಚೆಲುವೆಯಾಗಿ ನಟಿಸಿದ್ದಾರೆ.
Tap to resize

ತಂದೆ ಇಲ್ಲದ ಮಗಳು ಎಂದು ಮುದ್ದಾಗಿ ಸಾಕಿದ್ದಕ್ಕೆ ದಿವ್ಯಾ ಮನೆಯೊಳಗೆ ಕಳ್ಳತನ ಶುರು ಮಾಡಿದ್ದಾರೆ.
ಮನೆ ನಡೆಸಲು ಕೂಡಿಟ್ಟ ಹಣವನ್ನು ಕದ್ದು ಶಾಪಿಂಗ್ ಮಾಡಿದ ಆರೋಪವನ್ನು ಸತ್ಯಳ ಮೇಲೆ ಎತ್ತಾಕಿದ್ದಾಳೆ.
ದಿವ್ಯಾಳಿಗೆ ಮದುವೆ ಮಾಡಬೇಕೆಂದು ಈಗಾಗಲೇ ಮನೆಯಲ್ಲಿ ವರನ ಹುಡುಕಾಟ ಶುರುವಾಗಿದೆ. ದಿವ್ಯಾ ಮಾತ್ರ ಬಾಯ್‌ಫ್ರೆಂಡ್‌ ಜೊತೆ ಎಂಜಾಯ್ ಮಾಡುತ್ತಿದ್ದಾಳೆ.
ಎರಡನೇ ಪುತ್ರಿ ಸತ್ಯ ಮನೆ ಜವಾಬ್ದಾರಿ ಹೊತ್ತು ಗಂಡು ಮಗನ ಕೊರತೆ ಇಲ್ಲದಂತೆ ನೋಡಿಕೊಂಡಿದ್ದಾಳೆ.
ಸಿಕ್ಕಾಪಟ್ಟೆ ಡಿಫರೆಂಟ್ ಆಗಿ ಕಾಣಿಸಿಕೊಳ್ಳುವ ದಿವ್ಯಾ ಅಲಿಯಾಸ್‌ ಪ್ರಿಯಾಂಕಳ ಪಾತ್ರ ದಿನೆ ದಿನೇ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

Latest Videos

click me!