ಪಾರು ಧಾರಾವಾಹಿಯಲ್ಲಿ ಶತ್ರು, ರಿಯಲ್‌ನಲ್ಲಿ ಪ್ರಾಣ ಸ್ನೇಹಿತೆ; ಮಾನ್ಸಿ ಜೋಶಿ ಮದುವೆಯಲ್ಲಿ ಮೋಕ್ಷಿತಾ ಪೈ

Published : Feb 16, 2025, 03:44 PM ISTUpdated : Feb 16, 2025, 06:29 PM IST

ʼಪಾರುʼ ಸೇರಿದಂತೆ ಕನ್ನಡ ಸೇರಿ ಬೇರೆ ಭಾಷೆಯ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಮಾನಸಿ ಜೋಶಿ ಅವರು ವೈಹಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಾಸಿಟಿವ್‌, ನೆಗೆಟಿವ್‌ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮಾನ್ಸಿ ಜೋಶಿ ಅವರ ಮದುವೆಯಲ್ಲಿ ಮೋಕ್ಷಿತಾ ಪೈ ಭಾಗಿಯಾಗಿದ್ದಾರೆ. ʼಪಾರುʼ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಅವರು ಲೀಡ್‌ ಪಾತ್ರ ಮಾಡಿದ್ದರು. ಮಾನ್ಸಿ ಅವರು ನೆಗೆಟಿವ್‌ ಪಾತ್ರ ಮಾಡಿದ್ದರು. ಆದರೆ ರಿಯಲ್‌ ಲೈಫ್‌ನಲ್ಲಿ ಈ ಜೋಡಿ ಸ್ನೇಹಿತರು. ಈಗ ಸ್ನೇಹಿತೆಯ ಮದುವೆಯಲ್ಲಿ ಮೋಕ್ಷಿತಾ ಪೈ ಅವರ ಕುಟುಂಬ ಭಾಗಿಯಾಗಿದ್ದು, ಶುಭಾಶಯ ತಿಳಿಸಿದೆ.   

PREV
15
ಪಾರು ಧಾರಾವಾಹಿಯಲ್ಲಿ ಶತ್ರು, ರಿಯಲ್‌ನಲ್ಲಿ ಪ್ರಾಣ ಸ್ನೇಹಿತೆ; ಮಾನ್ಸಿ ಜೋಶಿ ಮದುವೆಯಲ್ಲಿ ಮೋಕ್ಷಿತಾ ಪೈ

ʼಪಾರುʼ ಧಾರಾವಾಹಿ ನಟಿ ಮಾನ್ಸಿ ಜೋಶಿ ಅವರು ರಾಘವ್‌ ಎನ್ನುವವರ ಜೊತೆ ಮದುವೆಯಾಗಿದ್ದಾರೆ. ಬೆಂಗಳೂರಿನಲ್ಲಿ ಈ ಮದುವೆ ನಡೆದಿದೆ. 

25

ಮಾನ್ಸಿ ಜೋಶಿ ಅವರ ಸಂಗೀತ ಕಾರ್ಯಕ್ರಮದಲ್ಲಿ ನಟಿ ಮೋಕ್ಷಿತಾ ಪೈ ಅವರು ಭಾಗಿಯಾಗಿದ್ದಾರೆ. ʼಬಿಗ್‌ ಬಾಸ್ʼ‌ ಶೋ ಇದ್ದಿದ್ದಕ್ಕೆ ಅವರು ನಿಶ್ಚಿತಾರ್ಥದಲ್ಲಿ ಭಾಗಿ ಆಗಿರಲಿಲ್ಲ. 

35

ʼಪಾರುʼ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ, ಮಾನ್ಸಿ ಜೋಶಿ ಅವರು ನಟಿಸಿದ್ದರು. ಇವರು ಧಾರಾವಾಹಿಯಲ್ಲಿ ಶತ್ರುಗಳಾದರೂ ಕೂಡ, ರಿಯಲ್‌ ಆಗಿ ಸ್ನೇಹಿತರು. 

45

ಮಾನ್ಸಿ ಜೋಶಿ ಮದುವೆಯ ಪೂರ್ವ ಕಾರ್ಯಕ್ರಮಗಳಿಂದ ಹಿಡಿದು, ಮದುವೆ ಆಗುವವರೆಗೂ ಮೋಕ್ಷಿತಾ ಪೈ ಅವರು ಹಾಜರಿ ಹಾಕಿದ್ದರು. ಸ್ನೇಹಿತೆಯ ಮದುವೆಯಲ್ಲಿ ಮೋಕ್ಷಿತಾ ಸಂಭ್ರಮಿಸಿದ್ದಾರೆ. 

55

ಮೋಕ್ಷಿತಾ ಪೈ ಅವರು ಬಂಗಾರದ ಹಾಗೂ ಗುಲಾಬಿ ಮಿಶ್ರಿತ ಸೀರೆ ಉಟ್ಟು ಕಂಗೊಳಿಸಿದ್ದಾರೆ. ಇನ್ನು ಮಾನ್ಸಿ ಜೋಶಿ ಮದುವೆಯಲ್ಲಿ ಮೋಕ್ಷಿತಾ ಭಾಗಿಯಾಗಿರೋ ಫೋಟೋಗಳು ವೈರಲ್‌ ಆಗುತ್ತಿವೆ. 

Read more Photos on
click me!

Recommended Stories