ಬರ್ತ್ ಡೇ ಪಾರ್ಟಿಯಲ್ಲಿ ಅಮೃತಧಾರೆ ಪಾರ್ಥ... ಹುಡುಗಿ ಯಾರು ಕೇಳ್ತಿದ್ದಾರೆ ಜನ!

Published : Mar 11, 2025, 09:46 PM ISTUpdated : Mar 12, 2025, 10:11 AM IST

ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥನ ಪಾತ್ರದಲ್ಲಿ ನಟಿಸುತ್ತಿರುವ ನಟ ಕರಣ್ ಸ್ನೇಹಿತೆಯ ಬರ್ತ್ ಡೇ ಪಾರ್ಟಿಯನ್ನು ಆಚರಿಸಿದ್ದು, ವಿಡೀಯೋ ನೋಡಿ ಜನ ಹುಡುಗಿ ಯಾರು ಅಂತ ಕೇಳ್ತಿದ್ದಾರೆ.   

PREV
17
ಬರ್ತ್ ಡೇ ಪಾರ್ಟಿಯಲ್ಲಿ ಅಮೃತಧಾರೆ ಪಾರ್ಥ... ಹುಡುಗಿ ಯಾರು ಕೇಳ್ತಿದ್ದಾರೆ ಜನ!

ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥನ ಪಾತ್ರದಲ್ಲಿ ನಟಿಸುತ್ತಿರುವ ನಟ ಕರಣ್, ತಮ್ಮ ಪಾತ್ರದ ಮೂಲಕ ಜನಮನ ಗೆದ್ದಿದ್ದಾರೆ. ಅದರಲ್ಲೂ ಅಪ್ಪಿ ಮತ್ತು ಪಾರ್ಥನ ಜೋಡಿ ಜನರಿಗೆ ಇಷ್ಟವಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. 
 

27

ಪಾರ್ಥನ ಪಾತ್ರದಲ್ಲಿ ಕರಣ್ ಅದ್ಭುತವಾಗಿ ನಟಿಸುತ್ತಿದ್ದಾರೆ. ಆರಂಭದಲ್ಲಿ ಜವಾಬ್ಧಾರಿ ಇಲ್ಲದ, ಲವರ್ ಬಾಯ್ ಆಗಿ ನಟಿಸಿದ್ದ ಕರಣ್, ಈಗಂತೂ ಜವಾಬ್ಧಾರಿಯುತ, ಉತ್ತಮ ಗಂಡನಾಗಿ ನಟಿಸುತ್ತಿದ್ದಾರೆ. 
 

37

ಪಾರ್ಥನ ಚಾಕಲೇಟ್ ಬಾಯ್ ಲುಕ್ ಜನರಿಗಂತೂ ತುಂಬಾನೆ ಇಷ್ಟ. ಅದರಲ್ಲೂ ಹುಡುಗಿಯರಿಗಂತೂ ಇವರು ಫೇವರಿಟ್ ಆಗಿದ್ದಾರೆ. ಆದರೆ ಇದೀಗ ಕರಣ್ ಇನ್ನೊಬ್ಬ ಹುಡುಗಿ ಜೊತೆ ಕಾಣಿಸಿಕೊಂಡಿದ್ದು, ಜನರು ಯಾರಿದು ಎಂದು ಕೇಳುತ್ತಿದ್ದಾರೆ. 
 

47

ಹೌದು, ಕರಣ್ ತಮ್ಮ ಇನ್’ಸ್ಟಾಗ್ರಾಂನಲ್ಲಿ ವಿಡೀಯೋ ಒಂದನ್ನು ಶೇರ್ ಮಾಡಿದ್ದು, ಅದರ ಜೊತೆಗೆ Teddy Happy Birthday ಎಂದು ಬರೆದುಕೊಂಡಿದ್ದಾರೆ. ಅನುಷಾ ಎನ್ನುವವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಕರಣ್ ಅವರ ಜೊತೆಯಾಗಿ ನಿಂತು ಕೇಕ್ ಕತ್ತರಿಸಿದ್ದಾರೆ. 
 

57

ಕರಣ್ ಕೇಕ್ ಕತ್ತರಿಸಿದ್ದು ಮಾತ್ರವಲ್ಲದೇ ಅವರಿಗೆ ಕೇಕ್ ತಿನ್ನಿಸಿದ್ದು, ಅದರ ಜೊತೆಗೆ ಅವರ ಜೊತೆಯಾಗಿ ನಿಂತು ಫೋಟೊ ತೆಗೆಸಿಕೊಂಡಿದ್ದು, ಫೋಟೋ ನೋಡಿದ್ರೆ ಇವರು ಯಾರಪ್ಪಾ ಎಂದು ಕೇಳದೇ ಇರಲಾರರು ಜನ. 
 

67

ಕರಣ್ ಶೇರ್ ಮಾಡಿರುವ ವಿಡೀಯೋ ನೋಡಿ, ಅಭಿಮಾನಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ನಿಮ್ಮ ಜೊತೆಗೆ ಇರುವ ಹುಡುಗಿ ಯಾರು? ಎನ್ನುವ ಪ್ರಶ್ನೆಯನ್ನು ಸಹ ಕೇಳಿದ್ದಾರೆ. 
 

77

ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದವರಿಗೆಲ್ಲಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಆದರೆ ಯಾರು ಎಂದು ಕೇಳಿದ್ದಕ್ಕೆ ಯಾರಿಗೂ ಕರಣ್ ಉತ್ತರ ನೀಡಿಲ್ಲ. ಚಾಕಲೇಟ್ ಬಾಯ್ ಎಂಗೇಜ್ ಆಗಿದ್ದಾರ ಎಂದು ಕೇಳ್ತಿದ್ದಾರೆ ಜನ. 
 

click me!

Recommended Stories