Bigg Boss ರಕ್ಷಿತಾ ಶೆಟ್ಟಿ ಮದ್ವೆ Bhargavi LLb ನಾಯಕನ ಜೊತೆ! ಮಲ್ಲಮ್ಮ ಕೊಟ್ಟ ಶಾಕ್​ ಏನು ಕೇಳಿ

Published : Mar 08, 2026, 06:02 PM IST

ಬಿಗ್ ಬಾಸ್ ಖ್ಯಾತಿಯ ಮಲ್ಲಮ್ಮ, ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಮದುವೆ ಮಾಡಲು ಹುಡುಗನನ್ನು ನೋಡಿದ್ದಾರೆ. ತಮಾಷೆಯಾಗಿ, 'ಭಾರ್ಗವಿ ಎಲ್ಎಲ್​ಬಿ' ಖ್ಯಾತಿಯ ನಟ ಮನೋಜ್ ಕುಮಾರ್ ಜೊತೆ ರಕ್ಷಿತಾ ಮದುವೆ ಮಾಡಿಸುವುದಾಗಿ ಹೇಳಿದ್ದಾರೆ.

PREV
16
ಮಲ್ಲಮ್ಮಾ- ರಕ್ಷಿತಾ ಶೆಟ್ಟಿ

Bigg Boss 12ರಲ್ಲಿ ಅತೀ ಹೆಚ್ಚು ಜನರ ಅಚ್ಚುಮೆಚ್ಚಾದವರ ಪೈಕಿ ಮಲ್ಲಮ್ಮ ಮತ್ತು ರಕ್ಷಿತಾ ಶೆಟ್ಟಿ ಕೂಡ ಒಬ್ಬರು. ಮಲ್ಲಮ್ಮ ಕೆಲವೇ ದಿನಗಳಲ್ಲಿ ಬಿಗ್​ಬಾಸ್​ನಿಂದ ಹೊರಕ್ಕೆ ಬಂದರೆ, ರಕ್ಷಿತಾ ಶೆಟ್ಟಿ (Rakshita Shetty) ರನ್ನರ್ ಅಪ್​ ಆಗಿ ಮಿಂಚಿದರು.

26
ಮನೋಜ್​ ಕುಮಾರ್​ ಪ್ರಚಾರ

ಬಿಗ್​ಬಾಸ್​​ ಪ್ರಿಯರಿಗೆ ತಿಳಿದಿರುವಂತೆ, ಮಲ್ಲಮ್ಮ ಅವರು ಬಿಗ್​ಬಾಸ್​ ಮನೆಯಲ್ಲಿ ಇದ್ದಾಗ ಹಾಗೂ ಅವರು ಹೊರಕ್ಕೆ ಬಂದಾಗಲೂ ಅವರಿಗೆ ಹೆಚ್ಚು ಸಪೋರ್ಟ್​ ಮಾಡಿದ್ದು, ಭಾರ್ಗವಿ ಎಲ್​ಎಲ್​ಬಿ ಅರ್ಜುನ ಅರ್ಥಾತ್​ ಮನೋಜ್​ ಕುಮಾರ್​. ಮಲ್ಲಮ್ಮನ ಪರವಾಗಿ ಅವರೇ ವೋಟ್​ ಕೇಳುತ್ತಿದ್ದರು. ಅವರು ಹೊರಕ್ಕೆ ಬಂದಾಗಲೂ ಅವರ ಜೊತೆಯಾಗಿಯೇ ಇದ್ದರು. ಮನೋಜ್​ ಅವರನ್ನು ಮಲ್ಲಮ್ಮ ತಮ್ಮ ಮಗ ಎಂದೇ ಹೇಳುತ್ತಾರೆ.

36
ರಕ್ಷಿತಾ ಮದುವೆ

ಇದೀಗ, ರಕ್ಷಿತಾ ಶೆಟ್ಟಿಯ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಲ್ಲಮ್ಮ ಅವರು, ಹೌದು. ರಕ್ಷಿತಾ ಶೆಟ್ಟಿಯ ಮದುವೆ ಮಾಡಿಸುವುದಾಗಿ ನಾನು ಹೇಳಿದ್ದೆ. ಅದು ನಮ್ಮ ಮನೋಜ್​ ಕುಮಾರ್​ ಜೊತೆ ಎಂದು ಜೋರಾಗಿ ನಕ್ಕಿದ್ದಾರೆ.

46
ನಾನೇ ಹೇಳಿದ್ದೆನ್ರಿ

ಭಾರ್ಗವಿ ಸೀರಿಯಲ್​ ಮಾಡ್ತಾನಲ್ರಿ, ಅದೇ ಮನೋಜ್​ ಜೊತೆ ರಕ್ಷಿತಾ ಮದ್ವೆ ಮಾಡಬೇಕು ಅಂದ್ಕೊಂಡಿದ್ದೇನೆ. ಈ ಬಗ್ಗೆ ಮನೋಜ್​ಗೂ ತಮಾಷೆ ಮಾಡ್ತಾ ಇರ್ತೇನೆ. ರಕ್ಷಿತಾ ಜೊತೆ ಮದುವೆಯಾಗು ಅಂತಾ ಇರ್ತೇನೆ ಎಂದು ತಮಾಷೆಯಾಗಿ ಹೇಳಿದ್ದಾರೆ ಮಲ್ಲಮ್ಮ.

56
ನಟನ ಹಿನ್ನೆಲೆ

ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಕೂಡ ಮಂಗಳೂರಾದರೆ, ಇನ್ನು ನಟ ಮನೋಜ್​ ಕುಮಾರ್​ ಅವರೂ ಅಲ್ಲಿಯವರೇ. ಫಾರ್ಮಸಿ ವಿಜ್ಞಾನ ಪದವೀಧರರಾಗಿದ್ದಾರೆ. ನಟನೆಯತ್ತ ಆಸಕ್ತಿ ಹುಟ್ಟಿದ್ದರಿಂದ ನಟನೆಗೆ ವಾಲಿದ್ದಾರೆ. ಮಲ್ಲಮ್ಮ ಟಾಕ್ಸ್ ಎಂಬ ಪೇಜ್ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ.

66
ಹುಡುಗನ ಬಗ್ಗೆ ರಕ್ಷಿತಾ

ಇನ್ನು ರಕ್ಷಿತಾ ಶೆಟ್ಟಿ ನನ್ನ ಗಂಡನಾಗುವವರ ರೈತ ಆಗಿರಬೇಕು. ತೋಟ, ಹೊಲ, ಗದ್ದೆ ಇರಬೇಕು, ಕೊಟ್ಟಿಗೆ, ಕೋಳಿ ಎಲ್ಲಾ ಇರಬೇಕು. ಗುಡಿಸಲು ಇರಬೇಕು ಎಂದೆಲ್ಲಾ ಇದಾಗಲೇ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories