ಹಾಸ್ಯ ಕಲಾವಿದ ಮಂಜು ಪಾವಗಡ ತಂದೆ ತಾಯಿಯ ಜೊತೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಭೇಟಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಕ್ಕೆ ಮಜಾಭಾರತ ಖ್ಯಾತಿಯ ಮಂಜು ಪಾವಗಡ ಭೇಟಿ ನೀಡಿದ್ದರು. ಬಿಗ್ ಬಾಸ್ ಎಂಟರ ವಿಜೇತರಾಗಿರುವ ಮಂಜು 53 ಲಕ್ಷ ರೂ. ಗೂ ಅಧಿಕ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 8 ವಿನ್ನರ್ ಮಂಜು ಪಾವಗಡ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ಆಶೀರ್ವಾದ ಪಡೆದುಕೊಂಡಿದ್ದಾರೆ. ಇಷ್ಟ ದೇವರು ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದಾರೆ.
ಬಿಗ್ ಬಾಸ್ ಈ ಬಾರಿ ಕೊರೋನಾ ಕಾರಣಕ್ಕೆ ಅರ್ಧಕ್ಕೆ ನಿಂತಿತ್ತು. ಮತ್ತೆ ನಿಯಮಗಳು ಸಡಿಲವಾದ ನಂತರ ಬಿಗ್ ಬಾಸ್ ಶೋ ಶೂಟಿಂಗ್ ಮಾಡಲಾಯಿತು. ಮಂಜು ಪಾವಗಡ ಮತ್ತು ಬೈಕರ್ ಅರವಿಂದ್ ಕೆಪಿ ಕೊನೆಯ ಸುತ್ತಿನಲ್ಲಿದ್ದರು.
ಬಿಗ್ ಬಾಸ್ ಗೆದ್ದ ಮೇಲೆ ಸೋಶಿಯಲ್ ಮೀಡಿಯಾದಲ್ಲಿಯೂ ಹವಾ ಎಬ್ಬಿಸಿರುವ ಮಂಜು ಪಾವಗಡ ತಮ್ಮ ಗೆಳತಿ ದಿವ್ಯಾ ಸುರೇಶ್ ಅವರೊಂದಿಗೆ ರೀಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.