Bigg Boss ಶೋನಿಂದ ಹೊರಬೀಳ್ತಿದ್ದಂತೆ ಲಾಟರಿ ಹೊಡೆದ ಸೂರಜ್‌ ಸಿಂಗ್‌; ಬಯಸದ ಭಾಗ್ಯದ ಬಾಗಿಲು ಒಪನ್‌ ಆಯ್ತು!

Published : Jan 04, 2026, 08:06 AM IST

Bigg Boss Suraj Singh: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಭಾಗವಹಿಸಿದ್ದ ಸೂರಜ್‌ ಸಿಂಗ್‌ ಅವರು ಈಗ ಹೊರಗಡೆ ಬಂದಿದ್ದಾರೆ. ಹತ್ತು ವಾರಗಳ ಕಾಲ ದೊಡ್ಮನೆಯಲ್ಲಿದ್ದ ಸೂರಜ್‌ ಸಿಂಗ್‌ ಅವರಿಗೆ ಈಗ ಲಾಟರಿ ಸಿಕ್ಕಿದೆ.  

PREV
16
ಸೂರಜ್‌ ಸಿಂಗ್‌ ವೃತ್ತಿ ಏನಾಗಿತ್ತು?

ಹ್ಯಾಂಡ್ಸಮ್‌ ಹಂಕ್‌ ಸೂರಜ್‌ ಸಿಂಗ್‌ ಅವರು ಈ ಹಿಂದೆ ಎಚ್‌ಪಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಜಿಮ್‌ ಟ್ರೇನರ್‌ ಕೂಡ ಆಗಿದ್ದರು. ಒಟ್ಟಿನಲ್ಲಿ ಅವರು ಎರಡು ಉದ್ಯೋಗ ಮಾಡುತ್ತಿದ್ದರು.

26
ಬಿಗ್‌ ಬಾಸ್‌ ಹೋಗುವ ಅವಕಾಶ ಹೇಗೆ ಸಿಕ್ಕಿತ್ತು?

ಸೋಶಿಯಲ್‌ ಮೀಡಿಯಾದಲ್ಲಿ ಮಾಡೆಲಿಂಗ್‌ ಫೋಟೋ, ವಿಡಿಯೋಗಳನ್ನು ಸೂರಜ್‌ ಸಿಂಗ್‌ ಅವರು ಹಂಚಿಕೊಳ್ಳುತ್ತಿದ್ದರು. ಈ ಜನಪ್ರಿಯತೆಯಿಂದಲೇ ಅವರು ದೊಡ್ಮನೆಗೆ ಹೋಗುವ ಅವಕಾಶ ಸಿಕ್ಕಿದೆ.

36
ಜನಪ್ರಿಯತೆ, ಎಲ್ಲೇ ಹೋದರೂ ಸೆಲ್ಫಿ

ಸೂರಜ್‌ ಸಿಂಗ್‌ ಅವರು ಈಗ ದೊಡ್ಮನೆಯಿಂದ ಹೊರಬಂದಿದ್ದು, ಮುಂದೆ ಜಿಮ್‌ ಟ್ರೇನರ್‌ ಆಗಿಯೂ ಕೆಲಸ ಮಾಡ್ತೀನಿ, ಅವಕಾಶ ಸಿಕ್ಕರೆ ಚಿತ್ರರಂಗಕ್ಕೆ ಬರ್ತೀನಿ ಎಂದು ಹೇಳಿದ್ದರು. ಇಂದು ಸೂರಜ್‌ ಎಲ್ಲೇ ಹೋದರೂ ಕೂಡ ನೂರಾರು ಜನರು ಸೇರುತ್ತಾರೆ, ಸೆಲ್ಫಿ ತಗೋತಾರಂತೆ. ಇದು ಅವರಿಗ ಮುಜುಗರ ತರುತ್ತಲಿದೆಯಂತೆ.

46
ಭರ್ಜರಿ ಮದುವೆ ಪ್ರಪೋಸಲ್

ಅಂದಹಾಗೆ ಸೋಶಿಯಲ್‌ ಮೀಡಿಯಾದಲ್ಲಿ ಸೂರಜ್‌ ಅವರಿಗೆ ಮದುವೆ ಪ್ರಪೋಸಲ್‌ಗಳು ಬರುತ್ತಿವೆಯಂತೆ. ದಾವಣಗೆರೆ ಕುಟುಂಬವೊಂದು ಮೈಸೂರಿನ ಮನೆಗೆ ಹುಡುಕಿಕೊಂಡು ಬಂದಿತ್ತಂತೆ. ಒಟ್ಟಿನಲ್ಲಿ ಸೂರಜ್‌ ಅವರು ಫುಲ್‌ ಡಿಮ್ಯಾಂಡ್‌ನಲ್ಲಿದ್ದಾರೆ.

56
ಸೀರಿಯಲ್‌ನಲ್ಲಿ ನಟನೆ

ಸೂರಜ್‌ ಸಿಂಗ್‌ ಅವರಿಗೆ ಈಗ ಖಾಸಗಿ ವಾಹಿನಿಯಲ್ಲಿ ನಟಿಸುವ ಚಾನ್ಸ್‌ ಸಿಕ್ಕಿದೆ ಎನ್ನಲಾಗಿದೆ. ಧಾರಾವಾಹಿಯೊಂದಕ್ಕೆ ಅವರು ಹೀರೋ ಆಗಿದ್ದಾರಂತೆ. ಈ ಬಗ್ಗೆ ಸೂರಜ್‌ ಆಗಲೀ, ವಾಹಿನಿಯಾಗಲೀ ಪ್ರತಿಕ್ರಿಯೆ ನೀಡಿಲ್ಲ. ಸೂರಜ್‌ ಸಿಂಗ್‌ ಅವರು ಹೇಗೆ ನಟಿಸ್ತಾರೆ ಎಂದು ಕಾದು ನೋಡಬೇಕಿದೆ.

66
ಯಾವ ವಾಹಿನಿಯಲ್ಲಿ ನಟಿಸ್ತಾರೆ?

ಕಲರ್ಸ್‌ ಕನ್ನಡ ವಾಹಿನಿಯು ಸಾಮಾನ್ಯವಾಗಿ ಒಂದು ವರ್ಷಗಳ ಕಾಲ ಬಿಗ್‌ ಬಾಸ್‌ ಸ್ಪರ್ಧಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದು, ಆ ಒಪ್ಪಂದದ ಪ್ರಕಾರ ಅವರು ಬೇರೆ ವಾಹಿನಿಯಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಹೀಗಾಗಿ ಸೂರಜ್‌ ಅವರು ಕಲರ್ಸ್‌ನಲ್ಲಿ ಸೀರಿಯಲ್‌ ಮಾಡಿದರೂ ಆಶ್ಚರ್ಯವಿಲ್ಲ. ಸೀರಿಯಲ್‌ನಲ್ಲಿ ನಟಿಸುತ್ತಿರುವ ಬಗ್ಗೆ ಸೂರಜ್‌ ಇನ್ನೂ ಏನೂ ಹೇಳಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories