ಬಿಗ್ ಬಾಸ್‌ನಲ್ಲಿ ಇಶಾನಿ-ಮೈಕಲ್‌ 'ಅನ್‌ಸೀನ್‌ ಕಥೆಗಳು', ಏನಿದು ಲವ್ ಮಿಸ್ಟರಿ!

Published : Oct 27, 2023, 06:54 PM ISTUpdated : Oct 27, 2023, 06:58 PM IST

ಮೈಕಲ್ ಇಶಾನಿ ಇಬ್ಬರೂ ಕನ್ನಡ ಮೂಲದವರು, ಆದರೆ ಕರ್ನಾಟಕದ ಆಚೆಗೇ ಹುಟ್ಟಿ ಬೆಳೆದವರು. ಹಾಗಾಗಿ ಇಬ್ಬರೂ ಕಷ್ಟಪಟ್ಟೇ ಕನ್ನಡ ಮಾತಾಡುತ್ತಾರೆ. ಇದೇ ಅವರ ನಡುವಿನ ಸ್ನೇಹಕ್ಕೆ ಸೇತುವಾಯ್ತೋ ಏನೋ… 'JioCinema'ದಲ್ಲಿ 'Unseen'ಕಥೆಗಳು ಎಂಬ ಎಕ್ಸ್‌ಕ್ಲೂಸಿವ್‌ ಸೆಗ್ಮೆಂಟ್‌ನಲ್ಲಿ ಇಶಾನಿ ಮತ್ತು ಮೈಕಲ್‌ ನಡುವಿನ ಆಪ್ತಸಂಬಂಧದ ಹಲವು ಆಪ್ತ ಗಳಿಗೆಗಳನ್ನು ವೀಕ್ಷಿಸಬಹುದು. 

PREV
111
ಬಿಗ್ ಬಾಸ್‌ನಲ್ಲಿ ಇಶಾನಿ-ಮೈಕಲ್‌ 'ಅನ್‌ಸೀನ್‌ ಕಥೆಗಳು', ಏನಿದು ಲವ್ ಮಿಸ್ಟರಿ!

ಬಿಗ್‌ಬಾಸ್‌ ಕನ್ನಡ 10ನೇ ಸೀಸನ್‌ ನಿಧಾನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಹೊಸ ಹೊಸ ಸ್ನೇಹಗಳು ಚಿಗುರಿಕೊಳ್ಳುತ್ತಿವೆ. ಅಷ್ಟೇ ಅನಿರೀಕ್ಷಿತವಾಗಿ ಮುರಿದೂ ಹೋಗುತ್ತಿವೆ. ಈ ಸೀಸನ್‌ನ ವಿಶೇಷ ಏನೆಂದರೆ ಬಿಗ್‌ಬಾಸ್‌ ಮನೆಯೊಳಗೆ ಮೊದಲಿನಿಂದಲೂ ಪ್ರೇಮದ ಗಾಳಿ ಬೀಸುತ್ತಲೇ ಇರುವುದು. ಕಾರ್ತಿಕ್-ಸಂಗೀತಾ ಜೋಡಿ, ಸ್ನೇಹಿತ್‌ ಮತ್ತು ನಮ್ರತಾ ನಡುವಿನ ಹೊಂದಾಣಿಕೆಯ ಜೊತೆಗೇ ಗಮನಸೆಳೆದಿರುವ ಇನ್ನೊಂದು ಜೋಡಿ ಮೈಕಲ್ ಮತ್ತು ಇಶಾನಿ ಅವರದ್ದು.

ಮೈಕಲ್ ಇಶಾನಿ ಇಬ್ಬರೂ ಕನ್ನಡ ಮೂಲದವರು, ಆದರೆ ಕರ್ನಾಟಕದ ಆಚೆಗೇ ಹುಟ್ಟಿ ಬೆಳೆದವರು. ಹಾಗಾಗಿ ಇಬ್ಬರೂ ಕಷ್ಟಪಟ್ಟೇ ಕನ್ನಡ ಮಾತಾಡುತ್ತಾರೆ. ಇದೇ ಅವರ ನಡುವಿನ ಸ್ನೇಹಕ್ಕೆ ಸೇತುವಾಯ್ತೋ ಏನೋ… 'JioCinema'ದಲ್ಲಿ 'Unseen'ಕಥೆಗಳು ಎಂಬ ಎಕ್ಸ್‌ಕ್ಲೂಸಿವ್‌ ಸೆಗ್ಮೆಂಟ್‌ನಲ್ಲಿ ಇಶಾನಿ ಮತ್ತು ಮೈಕಲ್‌ ನಡುವಿನ ಆಪ್ತಸಂಬಂಧದ ಹಲವು ಆಪ್ತ ಗಳಿಗೆಗಳನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಮನೆಯೊಳಗೆ ಈ ಇಬ್ಬರ ನಡುವೆ ಸ್ನೇಹಬಂಧ ಚಿಗುರಿಕೊಂಡಿದ್ದು ಹೇಗೆ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳೋಣ ಬನ್ನಿ.

211

ಇಶಾನಿಗೆ ಎಲ್ಲದರಲ್ಲಿಯೂ ಕುತೂಹಲ. ಹಾಗಿರುವಾಗ ಮೈಕಲ್ ಅವರ ಮಿಸ್ಟೀರಿಯಸ್ ಲೈಫ್‌ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸೆ ಹುಟ್ಟದಿರುತ್ತದೆಯೇ? ಆದರೆ ಇಶಾನಿ, 'ನಿನ್ ಬಗ್ಗೆ ನಾನು ಏನೂ ತಿಳ್ಕೊಂಡೇ ಇಲ್ಲ' ಎಂದು ಹೇಳಿದ್ದು ಕೂಡ, ಮೈಕಲ್‌ ಅವಳನ್ನು ಮಾತಾಡಿಸಲು ಯತ್ನಿಸಿದಾಗಲೇ! 
 

311

ಇವರಿಬ್ಬರ ನಡುವೆ ಬಾಂಡಿಗ್‌ ಬೆಳೆಯುವುದನ್ನು ಗಮನಿಸಿದ ನಮ್ರತಾ ಮತ್ತು ಸ್ನೇಹಿತ್‌ ಇಬ್ಬರೂ ಸೇರಿಕೊಂಡು ಮೈಕಲ್-ಇಶಾನಿಯ ಕಾಲೆಳೆದಿದ್ದರು. ಈಗ ನಿಜವಾಗಿಯು ಮೈಕೆಲ್ ಮತ್ತು ಈಶಾನಿ ಪರಸ್ಪರ ಹತ್ತಿರವಾಗುತ್ತಿದ್ದಾರೆ. 

411

ಸದಾ ಇಶಾನಿ ಜೊತೆಗೆ ಮೈಕಲ್ ನಗುನಗುತ್ತ ಇರುವುದು ಮನೆಯಲ್ಲಿ ಉಳಿದವರಿಗೆ ತಿಳಿಯದೇ ಇರುತ್ತದೆಯೇ? ಒಮ್ಮೆಯಂತೂ ಮೈಕಲ್ ಇಶಾನಿಯ ಹಸ್ತವನ್ನು ತೆಗೆದು ಮುತ್ತಿಟ್ಟಿದ್ದರು ಕೂಡ. ಇದು ಉಳಿದ ಸ್ಪರ್ಧಿಗಳ ಕಣ್ಣಿಗೂ ಬಿದ್ದಿದೆ. 
 

511

ಹಾಗೆಯೇ ಅವರಿಂಥ ಥರಹೇವಾರಿ ಪ್ರತಿಕ್ರಿಯೆಗಳೂ ಬಂದಿವೆ. ಒಮ್ಮೆಯಂತೂ ತನಿಷಾ ಈ ಜೋಡಿಯ ಬಗ್ಗೆ ತುಸು ಅಸೂಯೆಯನ್ನೂ ವ್ಯಕ್ತಪಡಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಮೈಕೇಲ್ ಹಾಗೂ ಇಶಾನಿ ನಡುವೆ ಏನೋ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.
 

611

ಮೈಕಲ್ ಮತ್ತು ಇಶಾನಿ ಇಬ್ಬರ ನಡುವೆ ಆಪ್ತಮಾತುಕತೆಯ ಹಾಗೆಯೇ ಹುಸಿಮುನಿಸುಗಳು, ಕಿರುಜಗಳಗಳೂನಡೆದಿವೆ. ಜಗಳಗಳಿಲ್ಲದೆ ಪ್ರೇಮ ಬೆಳೆಯಲು ಸಾಧ್ಯವೇ? ಅದರಲ್ಲಿಯೂ ಮೈಕಲ್ ಮಾತ್ರ ಬಿಟ್ಟೂಬಿಡದಂತೆ ಇಶಾನಿ ಮತ್ತು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು, ಎಲ್ಲ ತಡೆಗೋಡೆಗಳನ್ನು ಬಗೆಹರಿಸಿಕೊಳ್ಳಲಿಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರು.

711

ನೋಡಲು ಗಂಭೀರವಾಗಿ ಕಾಣಿಸುವ ಮೈಕಲ್ ವಿನೋದಪ್ರಿಯರು. ಮನೆಯಲ್ಲಿ ಬಿಗುವಾದ ವಾತಾವರಣ ರೂಪುಗೊಂಡಾಗಲೆಲ್ಲ ಅವರು ತಮ್ಮ ವಿನೋದಪ್ರಜ್ಞೆಯನ್ನು ಮೆರೆದು, ಹಾಸ್ಯ ಮಾಡಿ, ವಿನಯ್ ಮತ್ತು ಕಾರ್ತಿಕ್ ಜೊತೆಗೆ ನಗುತ್ತಿದ್ದರು. 
 

811

ಇಂಥ ಒಂದು ಹಗುರ ಗಳಿಗೆಯಲ್ಲಿಯೇ ಇಶಾನಿಗೆ ತನ್ನ ತಂದೆಯ ನೆನಪಾಗಿ ಭಾವುಕತೆ ಉಕ್ಕಿತ್ತು. ಆನಂದಭಾಷ್ಟ ಮತ್ತು ಕಣ್ಣೀರನ್ನು ಸೇರಿಸಿದ್ದ ಆ ಗಳಿಗೆಯಲ್ಲಿ ಇಶಾನಿ ಮತ್ತು ಮೈಕಲ್ ಇನ್ನಷ್ಟು ಹತ್ತಿರವಾಗಿದ್ದರು
 

911

ಹಾಗೆ ಸುಮ್ಮನೆ ಗಾರ್ಡನ್ ಏರಿಯಾದಲ್ಲಿ ಆರಾಮವಾಗಿ ಕೂತು ಹರಟೆ ಹೊಡೆಯುತ್ತಿದ್ದಾಗ ಇಶಾನಿ ತಮ್ಮ ಬದುಕಿನ ಬಗ್ಗೆ, ಆಸೆ-ಕನಸುಗಳ ಬಗ್ಗೆ ಮೈಕಲ್ ಜೊತೆಗೆ ಮಾತನಾಡಿದ್ದಾರೆ. ಅಂತರಂಗದ ಹುಡುಕಾಟ ಮತ್ತು ಬಹಿರಂಗದ ಹುಡುಕಾಟ ಎರಡೂ ನನ್ನ ಬದುಕಿನಲ್ಲಿ ಇರಬೇಕು ಎಂದು ಹೇಳಿಕೊಂಡಿದ್ದಾರೆ. 

1011

ಇದೇ ಸಮಯದಲ್ಲಿ ಮೈಕಲ್ ಕೂಡ ಸಿಂಪಲ್ ಆಗಿ ಬದುಕುವ, ಬದುಕನ್ನು ನೇರವಾಗಿ ಅರ್ಥಮಾಡಿಕೊಳ್ಳುವ ತಮ್ಮ ದೃಷ್ಟಿಕೋನದ ಬಗ್ಗೆ ಹೇಳಿಕೊಂಡಿದ್ದಾರು. ಮೈಕಲ್ ಜೊತೆಗೆ ಮಾತನಾಡಿದ್ದು ಹೇಗೆ ತನ್ನ ಮನಸ್ಸಿಗೆ ಸಮಾಧಾನ ನೀಡಿತು ಎಂದು ಇಶಾನಿ ಕಾರ್ತಿಕ್ ಜೊತಗೂ ಹೇಳಿಕೊಂಡಿದ್ದಾರೆ. 

1111

ಕಳಪೆ ಎಂಬ ಹಣೆಪಟ್ಟಿ ಹೊತ್ತು ಜೈಲಿನಲ್ಲಿದ್ದ ಸಂದರ್ಭದಲ್ಲಿ ಇಶಾನಿ ತಮ್ಮ ಮನಸ್ಸಿನ ಭಯ, ಹಿಂಜರಿಕೆ, ಆತಂಕಗಳ ಬಗ್ಗೆ ಮೈಕಲ್ ಜೊತೆಗೆ ಮಾತಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. 

ಇಶಾನಿ ಮತ್ತು ಮೈಕಲ್ ಇಬ್ಬರೂ ಸಂಪೂರ್ಣ ಭಿನ್ನ ಹಿನ್ನೆಲೆಗಳಿಂದ ಬಂದವರು. ಭಿನ್ನ ಅಭಿರುಚಿಗಳನ್ನು ಇಟ್ಟುಕೊಂಡವರು. ಎಷ್ಟೋ ಸಲ ಹೀಗೆ ಭಿನ್ನವಾದ ಮನಸ್ಥಿತಿಗಳೇ ಹತ್ತಿರವಾಗುವುದು. ಹಾಗೆಂದು ಇಶಾನ್ ಮತ್ತು ಮೈಕಲ್ ಪ್ರೇಮಿಗಳಾಗಿಯೇ ಉಳಿಯಲಿದ್ದಾರೆ ಎಂದೂ ಹೇಳುವಂತಿಲ್ಲ. 

ಹೇಳಿಕೇಳಿ ಬಿಗ್‌ಬಾಸ್‌ ಸ್ಪರ್ಧೆಯ ಕಣ. ವ್ಯಕ್ತಿತ್ವಗಳ ನಡುವಿನ ರಣರಂಗ. ಈ ಹೋರಾಟದಲ್ಲಿ ಪರಸ್ಪರ ಹತ್ತಿರವಾದವರು ದೂರಸರಿದಿದ್ದಿದೆ. ದೂರವಿದ್ದವರು ಹತ್ತಿರವಾಗುವುದೂ ಇದೆ. ಹಾಗಾಗಿ ಅವರಿಬ್ಬರ ನಡುವಿನ ಸಂಬಂಧಕ್ಕೆ ಈಗಲೇ ಒಂದು ಹೆಸರು ಕೊಡುವುದು ಕಷ್ಟವೇ ಸರಿ. ಆದರೆ ಬಂಧ ಗಟ್ಟಿಗೊಳ್ಳುವ ಸಾಧ್ಯತೆಯನ್ನು ಪೂರ್ತಿ ಅಲ್ಲಗಳೆಯುವುದೂ ಸಾಧ್ಯವಿಲ್ಲ. 

ಇಂಥ ಹಲವು ಕಥನಗಳಿಗಾಗಿ 'Unseen ಕಥೆಗಳು’ ಸೆಗ್ಮೆಂಟ್‌ ಅನ್ನು ವೀಕ್ಷಿಸಿ. ಬಿಗ್‌ಬಾಸ್‌ ಕನ್ನಡದ ಪ್ರತಿಕ್ಷಣವನ್ನೂ ಆಸ್ವಾದಿಸಲು JioCinemaದಲ್ಲಿ 24 ಗಂಟೆ ಉಚಿತ ನೇರಪ್ರಸಾರ ವೀಕ್ಷಿಸಬಹುದು.

Read more Photos on
click me!

Recommended Stories