ಲಂಗ ದಾವಣೀಲಿ ಶ್ವೇತಾ ಚಂಗಪ್ಪ, ಬೆಸ್ಟ್ ಆ್ಯಂಕರ್ ವೋಟು ಈ ದಸರಾ ಬೊಂಬೆಗೇ ಎಂದ ನೆಟ್ಟಿಗರು!

Published : Oct 27, 2023, 01:39 PM ISTUpdated : Oct 27, 2023, 01:45 PM IST

ಮಕ್ಕಳ ಜತೆ ಮುಗ್ಧವಾಗಿ ನಟಿಸುತ್ತ, ದೊಡ್ಡವರಿಗೂ ಇಷ್ಟವಾಗುವಂತೆ ಮಾತನಾಡುತ್ತ 'ಚೋಟಾ ಚಾಂಪಿಯನ್' ಶೋ ನಡೆಸಿಕೊಡುತ್ತಿರುವ ಶ್ವೇತಾ ಚೆಂಗಪ್ಪ ಅವರಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. 

PREV
110
ಲಂಗ ದಾವಣೀಲಿ ಶ್ವೇತಾ ಚಂಗಪ್ಪ, ಬೆಸ್ಟ್ ಆ್ಯಂಕರ್ ವೋಟು ಈ ದಸರಾ ಬೊಂಬೆಗೇ ಎಂದ ನೆಟ್ಟಿಗರು!
Shwetha Chengappa

ನಟಿ ಹಾಗೂ ನಿರೂಪಕಿ ಶ್ವೇತಾ ಚೆಂಗಪ್ಪ ಇತ್ತೀಚೆಗೆ ನಡೆದ ಮೈಸೂರು ದಸಾರ ವಿಶೇಷ ಸಂಚಿಕೆ ಹೋಸ್ಟ್ ಮಾಡಿದ್ದಾರೆ. ಬೋಲ್ಡ್ ಅಂಡ್ ಬ್ಯೂಟಿಫುಲ್ ಎಂಬಂತಿರುವ ಶ್ವೇತಾ ಚೆಂಗಪ್ಪ ಹೋಸ್ಟ್ ಮಾಡುತ್ತಿದ್ದರೆ ಅವರು ಹಾಕಿರುವ ಡ್ರೆಸ್ ಹಲವರ ಕಣ್ಣು ಕುಕ್ಕುತ್ತಿತ್ತು, ಕಾರಣ, ಶ್ವೇತಾ ಸಾಂಪ್ರದಾಯಿಕ ಡ್ರೆಸ್ ಧರಿಸಿದ್ದರು, ಆದರೆ ಅದು ಡ್ರೆಡಿಶನಲ್ ಜತೆ ಮಾಡರ್ನ್‌ ಲುಕ್ ಕೂಡ ಹೊಂದಿತ್ತು, 

210
Shwetha Chengappa

ಶ್ವೇತಾ ಚೆಂಗಪ್ಪ ದಸರಾ ಸಂಚಿಕೆಗೆ ಧರಿಸಿದ್ದ ಡ್ರೆಡಿಷನಲ್ ಕಾಸ್ಟ್ಯೂಮ್ ಈಗ ಭಾರೀ ಟ್ರೆಂಡ್ ಕ್ರಿಯೇಟ್ ಮಾಡಿದೆ ಎನ್ನಬಹುದು. ಕಾರಣ, ಈ ಟ್ರೆಡಿಷನಲ್ ಡ್ರೆಸ್ ಬಣ್ಣ, ವಿನ್ಯಾಸ ಹಾಗೂ ವಾತಾವರಣಕ್ಕೆ ಸೂಪರ್ ಎಂಬಂತೆ ಸ್ಯೂಟ್ ಆಗುತ್ತಿತ್ತು. 
 

310
Shwetha Chengappa

ಹೀಗಾಗಿ ಅಂತಹ ಡ್ರೆಸ್ ಧರಿಸಿದ್ದ ನಿರೂಪಕಿ ಶ್ವೇತಾ ಚೆಂಗಪ್ಪ ನೋಡಿ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಈಗ ಚೋಟಾ ಚಾಂಪಿಯನ್ ರಿಯಾಲಿಟಿ ಶೋ ಹೋಸ್ಟ್ ಮಾಡುತ್ತಿದ್ದಾರೆ. 

410
Shwetha Chengappa

ಮಕ್ಕಳ ಜತೆ ಮುಗ್ಧವಾಗಿ ನಟಿಸುತ್ತ, ದೊಡ್ಡವರಿಗೂ ಇಷ್ಟವಾಗುವಂತೆ ಮಾತನಾಡುತ್ತ 'ಚೋಟಾ ಚಾಂಪಿಯನ್' ಶೋ ನಡೆಸಿಕೊಡುತ್ತಿರುವ ಶ್ವೇತಾ ಚೆಂಗಪ್ಪ ಅವರಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. 

510
Shwetha Chengappa

ಸ್ಕೂಲಿಗೆ ಹೋಗುವ ವಯಸ್ಸಿನ ಮಗನಿದ್ದರೂ ಇನ್ನೂ ಅಂದಚೆಂದವನ್ನು ಮೆಂಟೇನ್ ಮಾಡಿರುವ ಶ್ವೇತಾ ಬಗ್ಗೆ ಹಲವರಿಗೆ ಹೊಟ್ಟೆಯುರಿ ಕೂಡ ಇರಬಹುದು. ಒಟ್ಟಿನಲ್ಲಿ, ದಸರಾ ವಿಶೇಷ ಸಂಚಿಕೆಗೆ ವಿಭಿನ್ನ ಡ್ರೆಸ್ ಧರಿಸಿ ಮಿಂಚಿದ್ದಾರೆ. 

610
Shwetha Chengappa

ದಸರಾ ವಿಶೇಷ ಸಂಚಿಕೆ ಹೋಸ್ಟ್ ಮಾಡಿದ ಶ್ವೇತಾ ಚೆಂಗಪ್ಪ ತಾವು ಧರಿಸಿರುವ ಡ್ರೆಸ್‌ ಅನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳ ಅಭಿಪ್ರಾಯ ಕೇಳಿದ್ದಾರೆ. ಅವರ ಪ್ರಶ್ನೆಗೆ ಹಲವರು ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ.

710
Shwetha Chengappa

'ದಸರಾ ವಿಶೇಷ ಸಂಚಿಕೆಗೆ ನಾನು ಅಲಂಕಾರ ಮಾಡಿಕೊಂಡಿದ್ದು, ರೆಡಿ ಆಗಿದ್ದು ಹೀಗೆ, ಹೇಗಿದೆ? ನಮ್ಮ Indian attire ಯಾವಾಗ್ಲೂ best alwa?? ಅವರ ಈ ಪ್ರಶ್ನೆಗೆ ಹಲವರು ಹಲವು ವಿಭಿನ್ನ ಕಮೆಂಟ್ ಮಾಡಿದ್ದಾರೆ. 
 

810
Shwetha Chengappa

ದಸರಾ ವಿಶೇಷಕ್ಕೆ ದಸರಾ ಗೊಂಬೆಯಂತೆ ಡ್ರೆಸ್ ಮಾಡಿಕೊಂಡಿದ್ದೀರಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು ಶ್ವೇತಾ, ನೀವು ಥೇಟ್ ದಸರಾ ಗೊಂಬೆಯಂತೆ ಕಾಣುತ್ತಿದ್ದೀರ ಎಂದು ಕಾಮೆಂಟ್ ಮಾಡಿದ್ದಾರೆ. 

910
Shwetha Chengappa

ಅಚ್ಚರಿ ಎಂಬಂತೆ, ಶ್ವೇತಾ ಧರಿಸಿರುವ ಈ ಸಾಂಪ್ರದಾಯಿಕ ಡ್ರೆಸ್‌ ಬಗ್ಗೆ ಯಾರೊಬ್ಬರೂ ಕೆಟ್ಟದಾಗಿದೆ ಎಂದು ಕಾಮೆಂಟ್ ಮಾಡಿಲ್ಲ. ಎಲ್ಲರೂ ಚೆನ್ನಾಗಿದೆ ಎಂದೇ ಮೆಚ್ಚಿಕೊಂಡಿದ್ದಾರೆ.

1010
Shwetha Chengappa

ಮೈಸೂರು ದಸರಾ ಸ್ಪೆಷಲ್ ಸಂಚಿಕೆ ಹೋಸ್ಟ್ ಮಾಡಿದ ನಟಿ, ನಿರೂಪಕಿಶ್ವೇತಾ ಚೆಂಗಪ್ಪ, ಈ ಬಗ್ಗೆ ಸಖತ್ ಖುಷಿಯಾಗಿದ್ದಾರೆ. ಏಕೆಂದರೆ, ಮೈಸೂರು ದಸರಾ ಎಂಬುದು ನಮ್ಮ ನಾಡಿನ ಹೆಮ್ಮೆಯ ಹಬ್ಬ. ಅಲ್ಲಿ ಹೋಸ್ಟ್ ಮಾಡಿ ಪ್ರಸಿದ್ಧಿ ಪಡೆಯುವುದು ಭಾಗ್ಯವೇ ಸರಿ. 

Read more Photos on
click me!

Recommended Stories