ಕನ್ನಡ ಬಿಗ್ಬಾಸ್ 10 ಸ್ಪರ್ಧಿಯಾಗಿದ್ದ ನಾಗಿಣಿ ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ ಅವರು ಇತ್ತೀಚೆಗೆ ಬ್ರೈಡಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ವಧುವಿನಂತೆ ರೆಡಿಯಾದ ನಮ್ರತಾ ಕ್ಯೂಟ್ ಆಗಿ ಮಿಂಚಿದ್ದಾರೆ.
26
ಕೆಂಬಣ್ಣದ ಬ್ರೈಡಲ್ ಸೀರೆ ಉಟ್ಟ ನಮ್ರತಾ ಅವರನ್ನು ನೋಡಿದ ನೆಟ್ಟಿಗರು ನಮ್ರತಾ ಅವರೇ ಮದುವೆ ಫಿಕ್ಸ್ ಆಯ್ತಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ನಟಿ ಆಕರ್ಷಕವಾದ ಸೀರೆಯಲ್ಲಿ ಮದುಮಗಳಂತೆಯೇ ಕಾಣಿಸಿಕೊಂಡಿದ್ದಾರೆ.
36
ಡಿಸೈನರ್ ಬ್ಲೌಸ್ ಧರಿಸಿಕೊಂಡು ಕೆಂಬಣ್ಣದ ಸೀರೆ ಉಟ್ಟು ಮೇಕಪ್ ಮಾಡಿಕೊಂಡಿದ್ದ ನಮ್ರತಾ ಮುದ್ದಾಗಿ ಕಾಣಿಸಿಕೊಂಡಿದ್ದು, ನಟಿ ಬಿಗ್ಬಾಸ್ ಮುಗಿಸಿಬಂದು ಮದುವೆಯ ಸಿದ್ಧತೆಯಲ್ಲಿದ್ದಾರಾ ಎಂದು ಅವರ ಫ್ಯಾನ್ಸ್ ಚರ್ಚೆ ಮಾಡುತ್ತಿದ್ದಾರೆ.
46
ಆಕರ್ಷಕವಾದ ಬ್ಲೌಸ್ ಧರಿಸಿ ನಮ್ರತಾ ಕ್ಯಾಮೆರಾಗೆ ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆರೆಡ್ ಕಲರ್ ಲಿಪ್ಸ್ಟಿಕ್ ಕೂಡಾ ತುಂಬಾ ಹೈಲೈಟ್ ಆಗಿದ್ದು ಅವರ ಕಂಪ್ಲೀಟ್ ಲುಕ್ ಪಡ್ಡೆಹುಡುಗರ ಕಣ್ಣುಕುಕ್ಕಿದೆ.
56
ನಮ್ರತಾ ಬಿಗ್ಬಾಸ್ ಮನೆಯಲ್ಲಿ ಭರ್ಜರಿಯಾಗಿಯೇ ಮಿಂಚಿದ್ದರು. ಸ್ನೇಹಿತ್, ವಿನಯ್ ಅವರಿಗೆ ಕ್ಲೋಸ್ ಆಗಿದ್ದ ನಮ್ರತಾ ಅವರು ಕಾರ್ತಿಕ್ ಜೊತೆಯೂ ಫ್ರೆಂಡ್ ಆಗಿದ್ದರು. ಶೋ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
66
ನಾಗಿಣಿ-2 ಸೀರಿಯಲ್ ಮೂಲಕ ಎಲ್ಲರ ಮನೆಮಾತಾಗಿರುವ ನಮ್ರತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ನಟಿ ಯಾವಾಗಲೂ ವಿಭಿನ್ನ ಪೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ.