'ಗುಪ್ತಾಂಗ ಎಲ್ಲ ಮುಟ್ಟಂಗಿಲ್ಲ' ನಾಗಿಣಿ ಗರಂ ಆಗಿದ್ದು ಯಾರ ಮೇಲೆ?

First Published | Nov 15, 2019, 4:40 PM IST

ಬಿಗ್ ಬಾಸ್ ಮನೆ ಸೇರಿರುವ ನಾಗಿಣಿ ಮನೆಯೊಳಗೆ ಇದ್ದರೂ ಎಲ್ಲರಿಂದಲೂ ಒಂದು ಅಂತರ ಕಾಯ್ದುಕೊಂಡೆ ಬಂದಿದ್ದಾರೆ. ಇಂಥ ನಾಗಿಣಿ ಮೊನ್ನೆ ಟಾಸ್ಕ್ ವೊಂದರ ವೇಳೆ ಸಿಕ್ಕಾಪಟ್ಟೆ ರಾಂಗ್ ಆಗಿದ್ದರು.

ಬಿಗ್ ಬಾಸ್ ಕಿತ್ತಳೆ ಹಣ್ಣು ಸಂಗ್ರಹಿಸುವ ಟಾಸ್ಕ್ ನೀಡಿದ್ದರು.
ಮನೆಯಲ್ಲಿ ಈಗಾಗಲೇ ಎರಡು ತಂಡಗಳಿವೆ.
Tap to resize

ಸಿಡಿಲು ತಂಡಕ್ಕೆ ಭೂಮಿ ಶೆಟ್ಟಿ ನಾಯಕಿ
ಸಪ್ತಾಶ್ವ ತಂಡಕ್ಕೆ ನಾಗಿಣಿ ದೀಪಿಕಾ ದಾಸ್ ನಾಯಕಿ
ಕಿತ್ತಳೆ ಹಣ್ಣು ಸಂಗ್ರಹಿಸುವ ಟಾಸ್ಕ್ ರೋಷಾವೇಶಕ್ಕೆ ಕಾರಣವಾಗಿತ್ತು
ಬುಟ್ಟಿಯಲ್ಲಿದ್ದ ಕಿತ್ತಳೆ ಹಣ್ಣುಗಳನ್ನು ಹೆಣ್ಣು ಮಕ್ಕಳು ತಮ್ಮ ಶರ್ಟ್ ಒಳಗೆ ಬಚ್ಚಿಟ್ಟುಕೊಂಡರು.
ಸಹಜವಾಗಿಯೇ ಹಣ್ಣುಗಳನ್ನು ಕಸಿಯಲು ಎಲ್ಲರೂ ಮುಂದಾದರು.
ಈ ವೇಳೆ ನಾಗಿಣಿ ದೀಪಿಕಾ ಕುರಿ ಪ್ರತಾಪ್ ಮೇಲೆ ಆಕ್ರೋಶಗೊಂಡರು.
ಹೆಣ್ಣು ಮಕ್ಕಳನ್ನು ಮುಟ್ಟುವ ಹಾಗೆ ಇಲ್ಲ ಎಂಬ ವಾದ ದೀಪಿಕಾರದ್ದು.
ಹೆಣ್ಣು ಮಕ್ಕಳು ಬಿಚ್ಚಿಕೊಂಡು ನಿಂತುಕೊಳ್ಳಲು ಇಲ್ಲಿ ಬಂದಿಲ್ಲ ಎಂದ ದೀಪಿಕಾ ದಾಸ್.
ಟಾಸ್ಕ್ ಅಂದ ಮೇಲೆ ಹಾಗೇನು ಇಲ್ಲ ಎಂಬುದು ಉಳಿದವರ ವಾದ.
ಗುಪ್ತಾಂಗಗಳನ್ನು ಮುಟ್ಟಬಾರದು ಎಂದು ಬಿಗ್ ಬಾಸ್ ಹೇಳಿದ್ದಾರೆ ಎಂದು ದೀಪಿಕಾ ದಾಸ್ ಕುರಿ ಪ್ರತಾಪ್ ಮೇಲೆ ಕೊಂಚ ಜೋರಾಗಿಯೇ ಎಗರಾಡಿದರು.
ಅಂತಿಮವಾಗಿ ಹಣ್ಣುಗಳನ್ನು ತೂಕ ಮಾಡಲು ತೆಗೆದುಕೊಂಡು ಹೋಗಲಾಯಿತು.
ಬಿಗ್ ಬಾಸ್ ಕನ್ನಡದ ಮನೆ ಐದನೇ ವಾರಕ್ಕೆ ಕಾಲಿಡುತ್ತಿದೆ.
ಸಂಗೀತ ನಿರ್ದೇಶಕ ಗುರುಕಿರಣ್ ವಿಶೇಷ ಅತಿಥಿಯಾಗಿ ಮನೆಯೊಳಕ್ಕೆ ಹೋಗಿ ಬಂದಿದ್ದಾರೆ.

Latest Videos

click me!